ಸುರಪುರ: ಆಷಾಢ ಏಕಾದಶಿಯ ನಿಮಿತ್ಯ ಶನಿವಾರ ನಗರದ ಐತಿಹಾಸಿಕ ದೇವಸ್ಥಾನವಾದ ಶ್ರೀ ರುಕ್ಮೀಣಿ ಪಾಂಡುರಂಗನ ದರ್ಶನ ಪಡೆಯಲು ನೂರಾರು ಜನರು ಬಂದು ದರ್ಶನ ಪಡೆದು ಪುನೀತರಾದರು.
ನಗರದ ಆಷಾಢ ಏಕಾದಶಿ ನಿಮಿತ್ಯ ದೇವರಿಗೆ ವಿಶೇಷ ಅಲಂಕಾರ ಆಭಿಶೇಕಾದಿ ಪೋಜಾ ಕಂಕೈರ್ಯಗಳು ನೇರವೇರಿಸಲಾಯಿತು. ಹಿಂದುಗಳ ಹಬ್ಬಗಳಲ್ಲಿ ಈ ಆಶಾಢ ಏಕಾದಶಿಯು ಮಹತ್ವದ ಹಬ್ಬವಾಗಿದೆ ಅಂದು ಶ್ರೀ ಪಾಂಡುರಂಗನ ನಾಮಸ್ಮರಣೆ ಮಾಡುವುದರಿಂದ ದೇವರು ಭವಸಾಗರವನ್ನು ದಾಟುವ ಶಕ್ತಿಯನ್ನು ದಯಪಾಲಿಸವನು ಎಂದು ದೇವಸ್ಥಾನದ ಅರ್ಚಕರಾದ ಗುರುರಾಜ ಆಚಾರ್ಯ ಅವರು ತಿಳಿಸಿದರು.
ಸಾಯಂಕಾಲ ಶ್ರೀ ವೇಣುಗೋಪಾಲ ಮಹಿಳಾ ಬಜನಾಮಂಡಳಿಯವರಿಂದ ಭಜನೆ ಕಾರ್ಯಕ್ರಮ ಮತ್ತು ಹರೇವೀಠಲ ಸೇವಾ ಸಮಿತಿಯ ಯುವಕರಿಂದ ದೇವರ ನಾಮಸ್ಮರಣೆ ಮತ್ತು ಸಂಕೀರ್ತನೆಗಳು ನೇರವೇರಿದವು ಹಾಗೂ ಏಕಾದಶಿಯ ನಿಮಿತ್ಯ ಜಾಗರಣೆಯಲ್ಲಿ ಶ್ರೀ ವೇಣುಗೋಪಾಲ ಭಜನಾ ಮಂಡಳಿಯವರಿಂದ ನಗರದ ವಿವಿಧ ದೇವಸ್ಥಾನಗಳಿಗೆ ತೆರಳಿ ಭಜಸುವ ಮೂಲಕ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಬಂದು ಭಜನೆ ಕಾರ್ಯಕ್ರಮಗಳು ನಡೆದವು.
ಹರೆವಿಠಲ ಸೇವಾ ಸಮಿತಿಯ ಅಧ್ಯಕ್ಷ ರವಿಕುಮಾರ ಗುತ್ತೆದಾರ,ಶ್ರೀಪಾದ ಗಡ್ಡದ್, ಪ್ರಕಾಶ ಕುಲ್ಕರ್ಣಿ, ದೇವಿದಾಸ ಭಟ್ ಗಡ್ಡದ್, ಪ್ರವೀಣ ಕುಲ್ಕರ್ಣೀ, ಸುರಜ್ ವರ್ಮಾ, ಮಿಥುನ ಬಾಡಿಹಾಳ, ಪವನ ವಿಶ್ವಕರ್ಮ, ಶ್ರೀಕರ ಐಜಿ, ಕೃಷ್ಣಾ ಪಾಟೀಲ, ರಾಘವೇಂದ್ರ ಗೋಡೆಕಾರ, ವಿಶಾಲ ಮಸ್ಕಿ, ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…