ಬಿಸಿ ಬಿಸಿ ಸುದ್ದಿ

ಸಾಹಿತ್ಯ ಪರಿಷತ್ತಿನ ಚುನಾವಣೆಯೂ ಯಾವ ರಾಜಕೀಯ ಪಕ್ಷಗಳ ಚುನಾವಣೆಗಿಂತ ಕಡಿಮೆ ಇಲ್ಲವೋ..!–

  • ಕೆ.ಶಿವು.ಲಕ್ಕಣ್ಣವರ

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಭರದ ಸಿದ್ಧತೆಗಳು ನಡೆದಿವೆ. ಇದೇ 21ರಂದು ನಡೆಯಲಿರುವ ಮತದಾನಕ್ಕೆ ಚುನಾವಣಾ ಅಕಾರಿಗಳು ಸಕಲ ತಯಾರಿ ನಡೆಸಿಕೊಂಡಿದ್ದಾರೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಅಂತಿಮ ಹಂತದ ಕಸರತ್ತು ನಡೆಸಿದ್ದಾರೆ. ಸಮಸ್ತ ಕನ್ನಡಿಗರ ಸಾಕ್ಷಿ ಪ್ರಜ್ಞಾಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಖದರ್ ಈ ಬಾರಿ ಜೋರಾಗಿಯೇ ಇದೆ..!

ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಲ್ಲದೇ ಪ್ರಚಾರವನ್ನೂ ನಡೆಸಿದ್ದಾರೆ. ಕಣದಲ್ಲಿರುವ ಲೇಖಕಿ ಡಾ.ಸರಸ್ವತಿ.ಚಿಮ್ಮಲಗಿ, ಸಂಗಮೇಶ ಬಾದವಾಡಗಿ ಮತ್ತು ಶಿವರಾಜ ಪಾಟೀಲ ಅವರನ್ನು ಹೊರತುಪಡಿಸಿದರೆ ಮತ್ಯಾರೂ ಸಾಹಿತಿಗಳು ಇದ್ದಂತಿಲ್ಲ ಎಂದು ಎಲ್ಲರೂ ಹೇಳುತ್ತಾರಾದರೂ, ಒಬ್ಬ ಸಾಹಿತ್ಯ ಆಸಕ್ತನಷ್ಟೇ ಅಲ್ಲ, ಹಳ್ಳೂರ ಪ್ರಕಾಶನ ಎಂಬ ಸಾಹಿತ್ಯದ ಕೆಲಸ ಮಾಡುತ್ತಿರುವ ಬಸವರಾಜ ಹಳ್ಳೂರ ಎಂಬ ನವನವೀನ ಸಾಹಿತಿ ಮತ್ತು ಬರಹಗಾರರಿಗೆ ಉತ್ತೇಜನ ನೀಡುವ ಸಾಹಿತ್ಯಾಸಕ್ತರಿಗೆ ಸದಾ ಉಪಯುಕ್ತ ಮಾಹಿತಿಯನ್ನು ಮತ್ತು ಪುಸ್ತಕಗಳನ್ನು ನೀಡುವ ಕೆಲಸ ಮಾಡುತ್ತಿರುವ ಬಸವರಾಜ ಹಳ್ಳೂರ ಎಂಬ ಹೊಸದೊಬ್ಬ ಸಾಹಿತ್ಯಕ ಮತ್ತು ಸಾಹಿತಿಯನ್ನು ಮರತಂತೆ ಕಾಣುತ್ತದೆ ನನಗೆ.

# ಬಸವರಾಜ ಹಳ್ಳೂರ–

ಈ ಬಸವರಾಜ ಹಳ್ಳೂರ ಒಬ್ಬ ಬಡ ಕುಟುಂಬದಿಂದ ಬಂದು, ಅದೂ ರೈತಾಪಿ ಕುಟುಂಬದಿಂದ ಬಂದು, ಈ ಮನುಷ್ಯ ಮಾಡುತ್ತಿರುವ ಸಾಹಿತ್ಯದ ಮತ್ತು ಕನ್ನಡಪರ ಹೋರಾಟಗಳ ಬಗೆಗೆ ಯಾರಿಗೂ ಗೊತ್ತಿಲ್ಲ. ಈ ಮನುಷ್ಯ ಅಂದರೆ ನವಸಾಹಿತಿ ಮಾಡುತ್ತಿರುವ ಕೆಲಸ ಸಣ್ಣಪುಟ್ಟದ್ದಲ್ಲ. ಈ ಬಸವರಾಜ ಹಳ್ಳೂರ ಒಂದು ಚಿಕ್ಕ ಗ್ರಾಮದಂತಹ ಇರುವ ಹಾವೇರಿ ಜಿಲ್ಲೆಯ ಹಂಸಬಾವಿಯಲ್ಲಿ ರೈತಾಪಿ ಕೆಲಸದ ಜೊತೆಗೆ ಕಾಲೇಜು ಶಿಕ್ಷಣ ಮುಗಿಸಿ, ಅಲ್ಲಿಯೇ ಆಶ್ಚರ್ಯಕರವಾಗಿ ಕಾಲೇಜಿಗೆ ಬೇಕಾದ ಸೌಲಭ್ಯಗಳಿಗಾಗಿ, ಅಂದರೆ ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳಿಗಾಗಿ ಹೋರಾಟ ಮಾಡುತ್ತಾ, ತಾನೂ ಅಲ್ಲಿಯೇ ಕಾಲೇಜು ಶಿಕ್ಷಣ ಮುಗಿಸಿ, ತನ್ನಷ್ಟಕ್ಕೇ ತಾನೇ ತಾನಾಗಿ ಸಾಹಿತ್ಯದ ರುಚಿಯನ್ನು ಹಚ್ಚಿಕೊಂಡದ್ದು ಎಲ್ಲವೂ ಆಶ್ಚರ್ಯಕರವಾಗಿದೆ. ಸಾಹಿತ್ಯದ ಪ್ರಕಾಶನವನ್ನೂ ತೆರೆದು ‘ಹಳ್ಳೂರ ಪ್ರಕಾಶನ’ ಎಂಬ ಹೆಸರಿಟ್ಟುಕೊಂಡು ಸಾಹಿತ್ಯ ಸೇವೆ ಮಾಡುತ್ತಿರುವ ಪರಿ ವಿಚಿತ್ರದ್ದಾಗಿದೆ..!

ಈತ ಬರೀಗೈಲಿ ಬೆಂಗಳೂರು ಎಂಬ ಪಟ್ಟಣಕ್ಕೆ ಹೋಗಿ ಒಂದು ಕಾಸಗಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯದ ಕೆಲಸ ಮಾಡುತ್ತಿರುವುದು ಇನ್ನೂ ಆಶ್ಚರ್ಯಕರ. ಹಾಗಾಗಿಯೇ ಈ ಮನುಷ್ಯ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆಲ್ಲುತ್ತಾನೋ, ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಈ ಬಸವರಾಜ ಹಳ್ಳೂರ ಪ್ರಯತ್ನಿಸುತ್ತಿರುವ ಪರಿಯೇನಿದೆಯಲ್ಲ, ಅದು ಎಲ್ಲರಿಗೂ ಮಾದರಿ ಆಗುವಂತಹದು ಎಂಬ ಅಭಿಪ್ರಾಯ ನನ್ನದು. ಇರಲಿ. ಈಗ ಮುಂದೆ ನೋಡೋಣ..!

ಇದು ಅಲ್ಲದೇ ಈ ಮನುಷ್ಯ ಒಂದು ಚಿಕ್ಕಪುಟ್ಟದಾಗಿ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಸೇವೆ ಸಲ್ಲಿಸಿದವರು. ಇವರಲ್ಲದೇ ನಿವೃತ್ತ ಅಧಿಕಾರಿಗಳೂ ಸಾಹಿತ್ಯ ಪರಿಷತ್ತಿನ ಚುನಾವಣೆಯ ಕಣದಲ್ಲಿದ್ದಾರೆ.

ದೂರದರ್ಶನ ನಿವೃತ್ತ ಅಧಿಕಾರಿ ನಾಡೋಜ ಡಾ.ಮಹೇಶ.ಜೋಶಿ, ವ.ಚ. ಚನ್ನೇಗೌಡ, ಮಾಚಿ ಕೃಷ್ಣ, ಪ್ರಮೋದ ಹಳ್ಳಿಕಟ್ಟಿ, ಬಸವರಾಜ ಹಳ್ಳೂರ, ಬಾಡದ ಬದ್ರಿನಾಥ, ಮಾಯಣ್ಣ, ಕೆ. ರತ್ನಾಕರ ಶೆಟ್ಟಿ, ಕೆ. ರವಿ ಅಂಬೇಕರ್, ರಾಜಶೇಖರ್ ಮುಲಾಲಿ, ಸಿ.ಕೆ. ರಾಮೇಗೌಡ, ವೈ. ರೇಣುಕ, ವಾಲ್ಮೀಕಿ, ಶೇಖರಗೌಡ ಮಾಲೀಪಾಟೀಲ್ ಸೇರಿದಂತೆ 21 ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.

ಇಂತಹವರ ಜೊತೆಯಲ್ಲಿ ಚುನಾವಣೆ ಎಂಬ ಸ್ಪರ್ಧೆ ನಡೆಸಬೇಕಾಗಿದೆ ಬಸವರಾಜ ಹಳ್ಳೂರ ಎಂಬ ಹೊಸ ಹುಡುಗ. ಆದರೂ ಇಂತಹ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಜಾತ್ಯತೀತವಾಗಿ, ಸಾಹಿತ್ಯಾತ್ಮಕವಾಗಿ, ರಾಜಕೀಯೇತರವಾಗಿ ನಡೆಯಬೇಕಾಗಿದ್ದ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಈಗ ಜಾತಿ, ರಾಜಕೀಯ ಮೇಳೈಸಿದೆ. ಹಣದ ಹೊಳೆಯೂ ಕೂಡ ಹರಿಯುತ್ತಿದೆ.

ಅದು ಸಾಹಿತ್ಯ ಪರಿಷತ್ ಚುನಾವಣೆ. ಸಾಹಿತಿಗಳಿಗೆ ಸಂಬಂಧಿಸಿದ್ದು, ನಮಗೆ ಅದರ ಉಸಾಬರಿ ಬೇಡ ಎಂದು ರಾಜಕಾರಣಿಗಳು ದೂರ ಸರಿಯುತ್ತಿದ್ದರು. ತೆರೆಮರೆಯಲ್ಲಿ ನಿಂತು ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದರು.

ಆದರೆ, ಈ ಬಾರಿ ಕಣದಲ್ಲಿರುವ ಕೆಲವು ಅಭ್ಯರ್ಥಿಗಳಿಗೆ ಬಹಿರಂಗವಾಗಿಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೆಂಬಲ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದಾರೆ. ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಚುನಾವಣೆ ಇನ್ನೂ ಮೂರು ದಿನಗಳು ಬಾಕಿ ಇರುವಂತೆ ಸಭೆ ಸಮಾರಂಭಗಳು ಜೋರಾಗಿಯೇ ನಡೆಯುತ್ತಿವೆ. ರಾಜ್ಯಾದ್ಯಂತ ಇರುವ 3.10 ಲಕ್ಷ ಮತದಾರರನ್ನು ಸೆಳೆಯಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ತೆರೆಮರೆಯಲ್ಲಿ ಮತದಾರರನ್ನು ಓಲೈಕೆ ಮಾಡುತ್ತಿದ್ದ ಘಟನೆಗಳು ಈಗ ಬಹಿರಂಗವಾಗಿಯೇ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತೇವೆ, ಕನ್ನಡ ಅಭಿವೃದ್ಧಿ ಮಾಡುತ್ತೇವೆಂದು ಹಲವಾರು ಮಹತ್ವಾಕಾಂಕ್ಷೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಈ ಪರಿಯ ಮತಯಾಚನೆಯನ್ನು ನೋಡಿ ಜನರೇ ಹೌಹಾರಿದ್ದಾರೆ.

ಇನ್ನೂ ಕೆಲವು ಅಭ್ಯರ್ಥಿಗಳ ಪರವಾಗಿ ಮಠಾಧೀಶರು ಅಖಾಡಕ್ಕಿಳಿದಿದ್ದಾರೆ. ಜಾತಿ ಸಮುದಾಯದ ನಾಯಕರುಗಳು ತಮ್ಮ ಅಭ್ಯರ್ಥಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷನನ್ನಾಗಿ ಮಾಡಬೇಕೆಂದು ಟೊಂಕ ಕಟ್ಟಿ ನಿಂತಿದ್ದಾರೆ. ಈ ಹಿಂದೆ ನಡೆದ ಬಹುತೇಕ ಚುನಾವಣೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಸಾಹಿತ್ಯ ದಿಗ್ಗಜರ ನಡುವೆ ಪೈಪೋಟಿ ಏರ್ಪಡುತ್ತಿತ್ತು.

ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ರಾಜಕೀಯ ಬೆರೆತು ಸಾಹಿತ್ಯ ವಲಯ ಸಾಹಿತ್ಯ ಪರಿಷತ್‍ನಿಂದ ವಿಮುಖವಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇನ್ನೂ ಕಣದಲ್ಲಿರುವ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ನಾಡೋಜ ಡಾ. ಮಹೇಶ.ಜೋಷಿ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ ಪರಿಷತ್ತನ್ನಾಗಿ ಮಾಡಬೇಕು, ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕು. ಸಾಹಿತ್ಯ ಪರಿಷತ್ ಮನೆ ಮನಗಳಿಗೆ ತಲುಪಬೇಕು ಎಂಬ ಸಂಕಲ್ಪ ಹೊಂದಿದ್ದಾರೆ. ಅಲ್ಲದೇ ಕೇವಲ 3.10 ಲಕ್ಷ ಇರುವ ಸದಸ್ಯರನ್ನು ಇನ್ನೂ 10 ಪಟ್ಟು ಹೆಚ್ಚಿಸಬೇಕು, ಗಡಿನಾಡು, ಹೊರನಾಡಿನಲ್ಲಿರುವ ಕನ್ನಡಿಗರ ಸಮಸ್ಯೆಗಳನ್ನು ಪರಿಹಾರ ಮಾಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದ್ದಾರೆ.

# ಸಿ.ಕೆ.ರಾಮೇಗೌಡ– ರಾಜ್ಯಮಟ್ಟಕ್ಕೆ ಸೀಮಿತವಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾಡುವುದು ಪ್ರತಿ ತಾಲ್ಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಾಣ, ಯುವ ಪ್ರತಿಭೆಗಳಿಗೆ ಆದ್ಯತೆ, ಗಡಿ ನಾಡಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆ, ತಾರತಮ್ಯ ನಿವಾರಣೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.

# ವ.ಚ.ಚನ್ನೇಗೌಡ– ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹೆಚ್ಚು ಮಹಿಳಾ ಸಾಹಿತಿಗಳಿಗೆ ನೀಡುವುದು, ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಸಾಭಿಮಾನ ಸಂಸ್ಥೆಯನ್ನಾಗಿ ರೂಪಿಸುವುದು. ಮಹತ್ವದ ಕೃತಿಗಳ ಭಾಷಾಂತರ, ಪರಿಷತ್ ಸದಸ್ಯತ್ವ ಹೆಚ್ಚಳ, ಹೊರ ರಾಜ್ಯಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಹಲವಾರು ಭರವಸೆಗಳ ಮೂಲಕ ಚುನಾವಣಾ ಕಣದಲ್ಲಿದ್ದಾರೆ.

# ಮಾಯಣ್ಣ– ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಶಕ್ತಿ ಕೇಂದ್ರವನ್ನಾಗಿಸುವುದು, ಹೊಸ ಕಾಯಕಲ್ಪ ನೀಡುವುದು, ಪರಿಷತ್‍ನಲ್ಲಿ ಹೊಸ ಮುದ್ರಣಾಲಯ ಸ್ಥಾಪನೆ, ರಾಜ್ಯದ ಪ್ರತಿ ತಾಲ್ಲೂಕು ವಿಧಾನಸಭೆ ವಾರ್ಡ್‍ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆ, ಸ್ಮಾರ್ಟ್ ಕಾರ್ಡ್‍ಗಳ ವಿತರಣೆ, ಸಾಧಕರಿಗೆ ಗೌರವ ಸದಸ್ಯತ್ವ, ಒಂದು ಸಾವಿರ ಕೋಟಿ ರೂ.ಗಳ ಶಾಶ್ವತ ನಿ ಸ್ಥಾಪನೆ ಸೇರಿದಂತೆ ಹತ್ತು ಹಲವು ಭರವಸೆಗಳ ಮಹಾಪೂರ ಹರಿಸಿದ್ದಾರೆ.

# ಶೇಖರಗೌಡ ಮಾಲೀಪಾಟೀಲ– ಶಿಕ್ಷಕರಿಗಾಗಿ ಸಾಹಿತ್ಯ ಸಮಾವೇಶ ಎಲ್ಲಾ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಕನ್ನಡ ಸಾಹಿತ್ಯ ಪರಿಷತ್ ಮಾದರಿ ಕನ್ನಡ ಶಾಲೆ ನಿರ್ಮಾಣ, ಯುವ ಬರಹಗಾರರಿಗೆ ಪ್ರೋತ್ಸಾಹ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ. ಅದೇರೀತಿ ಸರಸ್ವತಿ ಚಿಮ್ಮಲಗಿ, ರಾಜಶೇಖರ ಮಲಾಲಿ ಸೇರಿದಂತೆ ಹಲವು ಅಭ್ಯರ್ಥಿಗಳು ಹತ್ತಾರು ಭರವಸೆಗಳ ಪ್ರವಾಹವನ್ನೇ ಹರಿಸಿದ್ದಾರೆ.

# ಡಾ.ಸರಸ್ವತಿ ಚಿಮ್ಮಲಗಿ–

ಅಲ್ಲದೇ ಒಬ್ಬಳೇ ಒಬ್ಬ ಮಹಿಳಾ ಸ್ಪರ್ಧಿಯೂ ಇದ್ದಾರೆ. ಅವರು ಸಾಹಿತ್ಯದ ಗಂಧಗಾಳಿ ಅರಿತವರು. ಸ್ವತಃ ತಾವೇ ಸಾಹಿತಿ ಆದವರು. ಸಾಕಷ್ಟು ಸಾಹಿತ್ಯ ರಚಿಸಿದವರು. ಅವರೇ ಡಾ.ಸರಸ್ವತಿ.ಚಿಮ್ಮಲಗಿಯವರು..! ಈ ಬಾರಿ ಒಬ್ಬ ಮಹಿಗೆ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಕೊಡೋಣ ಎಂಬ ಅಭಿಮತವೂ ಎಲ್ಲಾ ಕಡೆಗಳಲ್ಲಿ ಕೇಳಿಬರುತ್ತಿದೆ.‌ಅದೂ ಡಾ.ಸರಸ್ವತಿ ಚಿಮ್ಮಲಗಿಯವರ ಹೆಸರು. ನೋಡೋಣ ಯಾರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರಾಗುತ್ತಾರೋ ಎಂದು.

ನ.21 ರಂದು ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಂದೇ ಜಿಲ್ಲಾ ಅಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟವಾಗಲಿದೆ. 24 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟವಾಗಲಿದೆ.

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಅದೇ ರೀತಿ ಬೇರೆ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳ ತಹಸೀಲ್ದಾರ್ ಕಚೇರಿಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ..!

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

11 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

18 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago