ಶಹಾಬಾದ : ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿಕೊಂಡು ಕೇಕ್ ಕತ್ತರಿಸುವ ಮೂಲಕ
ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನವನ್ನು ಆಚರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಪ್ರಿಯಾಂಕ್ ಖರ್ಗೆ ಅವರು ನೇರ ನುಡಿಯ ವ್ಯಕ್ತಿತ್ವ ಹೊಂದಿದವರು.ಯಾವತ್ತಿಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿದವರು. ಅತಿ ಹೆಚ್ಚು ಅನುದಾನವನ್ನು ತರುವ ಮೂಲಕ ಚಿತ್ತಾಪೂರ ತಾಲೂಕಿನ ಚಿತ್ರಣವನ್ನು ಬದಲಿಸಿದ ಹೆಮ್ಮ ನಮೆಲ್ಲರಿಗೂ ಇದೆ ಎಂದು ಹೇಳಿದರು.
ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಪ್ರಿಯಾಂಕ್ ಖರ್ಗೆ ಎಂದರೆ ಅಭಿವೃದ್ಧಿ. ಅಭಿವೃದ್ಧಿ ಎಂದರೆ ಪ್ರಿಯಾಂಕ್. ಅವರು ಮಾಡಿದ ಅಭಿವೃದ್ಧಿ ಕಂಡು ಬಿಜೆಪಿಯವರಿಗೆ ಸಹಿಸಿಕೊಳ್ಳಲಾರದೇ, ಇಲ್ಲಸಲ್ಲದ ಆರೋಪ. ಟೀಕೆ ಮಾಡುತ್ತ ಹೊರಟಿದ್ದಾರೆ.
ಬಿಟ್ ಕಯಿನ್ ಹಗರಣದಲ್ಲಿ ಬಿಜೆಪಿಯವರೇ ಶಾಮೀಲಾಗಿರುವ ಕುರಿತು ಪತ್ರಿಕಾಗೋಷ್ಠಿ ನಡೆಸಿದನ್ನು ಅರಗಿಸಿಕೊಳ್ಳಲಾರದೇ, ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಸಂಸದ ಪ್ರತಾಪಸಿಂಗ ಟೀಕೆ ಮಾಡಿದ್ದು ನೋಡಿದರೇ ಸಿಂಹ ಅನಾಗರಿಕನೋ, ಅರೆ ಹುಚ್ಚನೋ ಗೊತ್ತಾಗುತ್ತಿಲ್ಲ.ಅವನೊಬ್ಬ ಸಂಸದನಾಗಿರುವುದಕ್ಕೆ ನಾಲಾಯಕ್ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ ಚವ್ಹಾಣ,ಡಾ.ಅಹ್ಮದ್ ಪಟೇಲ್, ಶಿವಕುಮಾರ ನಾಟೇಕಾರ, ಮಲ್ಕಣ್ಣ ಮುದ್ದಾ, ಶಂಕರ ಕುಸಾಳೆ, ಮಹ್ಮದ್ ಅಜರ್, ಭರತ್ ರಾಠೋಡ, ಮಹ್ಮದ್ ಜಾವೀದ್, ಮೇರಾಜ ಸಾಹೇಬ,ಸ್ನೇಹಲ್ ಜಾಯಿ, ಅವಿನಾಶ ಜಾಧವ, ನಾಗರಾಜ ಕರಣಿಕ್ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…