ಜಗತ್ತಿನಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠವಾದದ್ದು ಡಾ. ಐ.ಎಸ್. ವಿದ್ಯಾಸಾಗರ

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಡಾ. ಐ.ಎಸ್. ವಿದ್ಯಾಸಾಗರ ರವರು ಮಾತನಾಡುತ್ತಾ ಜಗತ್ತಿನಲ್ಲಿ ಭಾರತದ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದೆ. ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು ಎಲ್ಲಾ ನಾಗರಿಕರಿಗೆ ಸಮಾನವಾದ ಅವಕಾಶಗಳನ್ನು ಸಂವಿಧಾನವು ನೀಡಿದೆ.

ಹೀಗಾಗಿ ಯಾವುದೇ ವ್ಯಕ್ತಿ ತನ್ನ ಸಾಮರ್ಥ್ಯದ ಆಧಾರದ ಮೇಲೆ ಜಾತಿ ಮತ ಎಂಬ ಬೇಧ ಭಾವ ವಿಲ್ಲದೆ ತನಗಿಷ್ಟವಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಇಂತಹ ಸಂವಿಧಾನವನ್ನು ನೀಡುವಲ್ಲಿ ಕಾರಣರಾದ ಹಾಗೂ ಸಂವಿಧಾನದ ಪಿತಾಮಹಾರಾದ ಡಾ. ಅಂಬೇಡ್ಕರರವರನ್ನು ನಾವೇಲ್ಲರು ಪೂಜಿಸಬೇಕು ಎಂದು ನುಡಿದರು.

ಇನ್ನೊರ್ವ ಅತಿಥಿಗಳಾದ ಬರಹಗಾರರಾದ ವಿಠ್ಠಲ ವಗ್ಗನ ಇವರು ಮಾತನಾಡಿ ಬಾಬಾ ಸಾಹೇಬ ಅಂಬೇಡ್ಕರರವರನ್ನು ಜಗತ್ತಿನ ಎಲ್ಲಾ ದೇಶಗಳಲ್ಲಿ ಆರಾಧಿಸುತ್ತಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರ ಅವರನ್ನು ಕುರಿತಾದ ೨೨ ಸಂಪುಟಗಳನ್ನು ಸೆಂಟಜಾನ ವಿಶ್ವವಿದ್ಯಾಲಯದವರು ಚೀನಿ ಭಾಷೆಗೆ ಭಾಷಾಂತರ ಮಾಡಿ ಚೀನಾದಲ್ಲಿ ಅಂಬೇಡ್ಕರ ರವರ ಕುರಿತಾದ ಅಧ್ಯಯನ ನಡೆಸುತ್ತಿದ್ದಾರೆ.

ದುರಾದೃಷ್ಠವೆಂದರೆ ಬಾಬಾ ಸಾಹೇಬರ ವಿಚಾರ ಧಾರೆಗಳನ್ನು ಕುರಿತಾದ ಆಳವಾದ ಅಧ್ಯಯನದ ಪುಸ್ತಕಗಳನ್ನು ಯಾವುದೇ ಶಾಲೆಯಲ್ಲಾಗಲಿ ಅಥವಾ ಮಹಾವಿದ್ಯಾಲಯಗಳಾಗಲಿ ಬೋಧಿಸುತ್ತಿಲ್ಲ. ಇಂದು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಮಾನತೆ ಸಿಗಬೇಕಾದರೆ ಅಂಬೇಡ್ಕರವರು ನೀಡಿದ ಸಂವಿಧಾನವೇ ಕಾರಣವೆಂದು ನುಡಿದರು.

ಆದರೆ ಇಂದು ಇಂತಹ ಸಂವಿಧಾನವನ್ನು ನಾಶಮಾಡುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆಯೇ ವಿನಹ ಅದರಲ್ಲಿ ಇರುವ ಅಂಶಗಳನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿರುವ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆಯವರು ಸಂವಿಧಾನದ ವಿಚಾರಗಳನ್ನು ಇಂದು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ ಮಾಡಬೇಕು ಆಗ ಮಾತ್ರ ಅಂಬೇಡ್ಕರವರ ಪ್ರಯತ್ನ ಫಲನೀಡಿದಂತಾಗುತ್ತದೆ ಎಂದು ನುಡಿದರು.

ವೇದಿಕೆಯ ಮೇಲೆ ಕೆಪಿಇ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ. ಚಂದ್ರಶೇಖರ ಶಿಲವಂತ ಪ್ರಾಚಾರ್ಯಾರಾದ ಪ್ರೊ. ಗಿರೀಶ ಮೀಶಿ, ಡಾ. ನಿರ್ಮಲಾ ಸೀರಗಾಪೂರ ಹಾಗೂ ಕಾರ್ಯಕ್ರಮದಲ್ಲಿ ಡಾ. ಹರ್ಷವರ್ಧನ ಡಾ. ಶರಣಪ್ಪ ಕಟ್ಟಿ ಡಾ. ಸುರೇಶ ಹೊಸಮನಿ, ಪ್ರೋ. ಕವಿರಾಜ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಕಾರ್ಯಾಕ್ರಮವನ್ನು ಡಾ. ಗಾಂಧೀಜಿ ಮೋಳಕೆರೆ ನಿರೂಪಿಸಿದರು. ಪ್ರಾಚಾರ್ಯಾರಾದ ಪ್ರೊ. ಗಿರೀಶ ಮೀಶಿ ಸ್ವಾಗತಿಸಿದರು. ಡಾ. ಶರಣಪ್ಪ ಕಟ್ಟಿ ವಂದಿಸಿದರು.

emedialine

Recent Posts

ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿಗೆ ಬಿಳ್ಕೊಡುಗೆ

ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ…

2 mins ago

ಕ.ಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಶೀಘ್ರ ಅಸ್ತಿತ್ವಕ್ಕೆ; ಸಿದ್ದರಾಮಯ್ಯ

ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…

8 mins ago

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

11 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420