ಆಳಂದ: ಗ್ರಾಮೀಣ ಭಾಗದಲ್ಲಿ ನೀರು, ರಸ್ತೆ, ವಿದ್ಯುತ್ ಚರಂಡಿಗಳಂತ ಕನಿಷ್ಠ ಸೌಲಭ್ಯಗಳನ್ನು ಸಹ ಒದಗಿಸಲು ಆಗದೆ ಇರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಅವರು ಇಂದಿಲ್ಲಿ ಆರೋಪಿಸಿದರು.
ಪಟ್ಟಣzಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕವು ಕೊಡಲಹಂಗರಗಾ ಗ್ರಾಪಂ ವ್ಯಾಪ್ತಿಯ ಎಲೆನಾವದಗಿ ಗ್ರಾಮದಲ್ಲಿ ಕಾಮಗಾರಿಯ ಅವ್ಯವಹಾರ ತನಿಖೆಗೆ ಒತ್ತಾಯಿಸಿ ಹಾಗೂ ಮೂಲಸೌಲಭ್ಯಗಳನ್ನು ಕಲ್ಪಿಸುವಂತೆ ಗುರುವಾರ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿ ಕೈಗೊಂಡು ತಾಪಂ ಕಚೇರಿಯ ಮುಂದೆ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಆರಂಭಿಸಿದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮ ಪಂಚಾಯತಗಳಲ್ಲಿ ಅಭಿವೃದ್ಧಿಗೆ ಸರ್ಕಾರದ ಸಾಕಷ್ಟು ಅನುದಾನ ಬಂದರು ಸಹಿತ ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರಿಗಳು ಮತ್ತು ಅಲ್ಲಿನ ಜನ ಪ್ರತಿನಿಧಿಗಳು ಭಾಗಿಯಾಗಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಇದು ಸರ್ಕಾರಕ್ಕೆ ಮತ್ತು ಜನತೆಗೆ ಎಸಗುತ್ತಿರುವ ಮಹಾಮೋಸವಾಗಿದೆ. ಇಂಥವರ ಮೇಲೆ ಕಠಿಣ ಕ್ರಮ ಜಾರಿಗೆ ಬರಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಘೋಡಕೆ, ಪ್ರಧಾನ ಕಾರ್ಯದರ್ಶಿ ಶರಣ ಕುಲಕರ್ಣಿ ಮತ್ತಿತರು ಮಾತನಾಡಿ ಬೇಡಿಕೆ ಈಡೇರದೆ ಹೋದಲ್ಲಿ ಉಪವಾಸ ಸತ್ಯಾಗ್ರಹ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡಗಿದರು.
ಎಲೆನಾವದಗಿಯ ೧೦ ಲಕ್ಷ ರೂ.ವೆಚ್ಚದ ಸಾಮೂಹಿಕ ಶೌಚಾಲಯ ನಿರ್ನಾಮ ಕೈಗೊಂಡಿದ್ದು ಪುನರ ನಿರ್ಮಾಣ ಕೈಗೊಳ್ಳಬೇಕು. ಮಂಜೂರಾದ ೩.೫ಲಕ್ಷ ರೂಪಾಯಿ ಶಾಲಾ ಆಟದ ಮೈದಾನ ಕಾಮಗಾರಿ ಶೀಘ್ರವೇ ಕೈಗೊಳ್ಳಬೇಕು. ೧೫ನೇ ಹಣಕಾಸಿನ ೭ ಲಕ್ಷ ರೂ.ಗಳು ಹಣ ದುರ್ಬಳಕೆ ಮಾಡಿದವರ ಮೇಲೆ ಕ್ರಮ ಜರುಗಿಸಿ ಹಣಮರುಪಾವತಿಗೆ ಒತ್ತಾಯಿಸಿದ ಸತ್ಯಾಹಗ್ರಹಿಗಳು, ಬೀದಿ ದೀಪ, ರಸ್ತೆ, ರಚಂಡಿ ನಿರ್ಮಾಣ, ಮಹಿಳಾ ಶೌಚಾಲಯ, ಕುಡಿಯುವ ನೀರಿನ ಪೈಪಲೈನ ದುರಸ್ಥಿ ಕೈಗೊಳ್ಳಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ಹೋದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಸತ್ಯಾಗ್ರಹಿಗಳು ಎಚ್ಚರಿಸಿದರು.
ವೇದಿಕೆಯ ಯುವಘಟಕದ ಕಾರ್ಯದರ್ಶಿ ಗಣಪತರಾವ್ ಪಾಟೀಲ, ಗ್ರಾಮ ಘಟಕದ ಅಧ್ಯಕ್ಷ ದತ್ತಪ್ಪ ಪೂಜಾರಿ, ಉಪಾಧ್ಯಕ್ಷ ಚಂದ್ರಶೇಖರ ಬಿರಾದಾರ ಮತ್ತು ಗ್ರಾಮದ ನಾಗೇಂದ್ರಪ್ಪ ಪಾಟೀಲ, ಶಿವಲಿಂಗ್ಪ ನಾಗೋಜಿ, ಈರಣ್ಣಾ ದೇವಂತಗಿ, ಗಂಗಾರಾವ್ ಹೊಸದೊಡ್ಡಿ, ಧರ್ಮರಾಯ ಮಾಲಿಪಾಟೀಲ, ಶ್ರೀಪತಿ ಪೂಜಾರಿ, ಅನಿಲ ಜಮಾದಾರ, ಚಂದ್ರಕಾಂತ ದೇವಣಗಾಂವ, ರಾಜು ಬಿರಾದಾರ, ಕುಮಾರ ಬಾವಿಮನಿ, ರವಿಂದ್ರ ಪೂಜಾರಿ, ಮಲ್ಲಪ್ಪ ಪೊಳೆ, ಖಾಜಾಸಾಬ ಮೈನೋದ್ದೀನ್ ಅಬ್ದುಲ ಖಂಡಾಳೆ, ನಾಗಪ್ಪ ಕೆರ, ಅಬ್ದುಲ ಘನಿ, ಶಾಂತಪ್ಪ ಪೂಜಾರಿ ಸೇರಿದಂತೆ ಮತ್ತಿತರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಕೆ. ಶೀಲವಂತ ಅವರು ಅವ್ಯವಹಾರ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ನೋಟಿಸ್ ಜಾರಿಗೊಳಿಸಿ ವಾರದೊಳಗೆ ಖುದಾಗಿ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು, ಅಲ್ಲದೆ ಬೇಡಿಕೆ ಈಡೇರಿಸುವ ಕುರಿತು ಲಿಖಿತ ಭರವಸೆ ಮೇಲೆ ಹಿಂದಕ್ಕೆ ಪಡೆಯಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…