ಆಳಂದ: ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಬೆಲೆ ಕುಸಿದು ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಬೆಂಬಲವಾಗಿ ತಾಲೂಕಿನ ಮದಗುಣಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನದ ಬಿಸಿಯೋಟದಲ್ಲಿ ಗ್ರಾಮಸ್ಥರೊಬ್ಬರು ಬಾಳೆಹಣ್ಣು ಖರೀದಿಸಿ ವಿತರಿಸಿ ಬೆಳೆಗಾರರಿಗೆ ಬೆಂಬಲ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಗ್ರಾಮದ ಯುವ ಮುಖಂಡ ಹಾಗೂ ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ಸಣ್ಣಮನಿ ಎಂಬುವರೆ ಬಾಳೆ ಬೆಳೆಗಾರರಿಗೆ ಬೆಂಬಲವಾಗಿ ಮಕ್ಕಳಿಗೆ ಬಾಳೆ ಹಣ್ಣು ಖರೀದಿಸಿ ಮಧ್ಯಾಹ್ನದ ಊಟದ ಸಮಯದಲ್ಲಿ ಸುಮಾರು ೧೮೦ ವಿದ್ಯಾರ್ಥಿಗಳಿಗೆ ತಲಾ ೨ ಎರಡು ಬಾಳೆ ಹಣ್ಣು ವಿತರಿಸಿದರು.
ಇದೇ ವೇಳೆ ಪ್ರತಿಕ್ರಿಯೆ ನೀಡಿದ ಸಣ್ಣಮನಿ ಅವರು, ಸಂಕಷ್ಟದಲ್ಲಿರುವ ಬಾಳೆ ಬೆಳೆಗಾರರಿಗೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ದಿಕ್ಕು ತೋಚದಂತಾಗಿದೆ. ರೈತರ ಬಾಳೆಯನ್ನು ಖರೀದಿಸಿ ಸಭೆ, ಸಮಾರಂಭ, ವಿವಾಹ ಸಮಾರಂಭಗಳಲ್ಲಿ ಬಂಧು ಬಾಂಧವರಿಗೆ ಶಾಲಾ ವಿದ್ಯಾರ್ಥಿಗಳಿಗೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಮುಖಂಡರು ಸಾರ್ವಜನಿಕರು ವಿತರಿಸುವ ಮೂಲಕ ಅವರಿಗೆ ನೆರವಾಗುವ ಕೆಲಸವಾಗಬೇಕು ಎಂದು ಅವರು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಬಸಣ್ಣ ಸಿಗರಕಂಟಿ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಸಣ್ಣಮನಿ ಅವರು ಬಾಳೆ ಹಣ್ಣು ವಿತರಿಸಿರುವುದು ಸಂತಷವಾಗಿದೆ ಎಂದು ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಪರ ಕೃತಜ್ಞೆ ಸಲ್ಲಿಸಿದರು.
ಶಾಲೆಯ ಶಿಕ್ಷಕ ಮಹಾದೇವ ಬಂಡೆ, ಭಾರತಿ, ನಾಗೇಶ ಇಂದಾಪೂರೆ, ಬಸವರಾಜ, ಸಿದ್ದು, ಶಿವನಿಂಗಪ್ಪ, ಬಿಸಿಯೂಟದ ಶಾಂತಾಬಾಯಿ ಮಾಂಗ್, ಭೌರಮ್ಮ ಸಣ್ಣಮನಿ, ಮಹಾದೇವಿ ಜಮಾದಾರ, ಗ್ರಾಮದ ನಾಗೇಶ ಮಡಿವಾಳ ಮತ್ತಿತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…