ಆಳಂದ: ಜಾತ್ಯತೀಯ ಮತ್ತು ಸರ್ವಧರ್ಮಗಳ ಸಮನ್ವಯತೆ ಪ್ರತೀಕದ ಮಠಗಳಲ್ಲಿ ಒಂದಾಗಿರುವ ಈ ಭಾಗದ ಜಿಡಗಾ ಗ್ರಾಮದ ಶ್ರೀ ಷಡಕ್ಷರಿ ಶಿಸವಯೋಗಿ ಸಿದ್ಧರಾಮೇಶ್ವರ ಅನುಭವ ಆಶ್ರಮ ನವ ಕಲ್ಯಾಣ ಮಠದಲ್ಲಿ ಡಿ. ೨ರಂದು ಜರುಗಲಿರುವ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರ ೩೭ನೇ ಗುರುವಂದನ ಮಹೋತ್ಸವಕ್ಕೆ ಶ್ರೀಮಠದಿಂದ ಭರದ ಸಿದ್ಧತೆ ಆರಂಭಗೊಂಡಿದೆ.
ಈ ಕುರಿತು ಶುಕ್ರವಾರ ಜಿಡಗಾ ನವಕಲ್ಯಾಣ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರು, ಕಳೆದೆರಡು ವರ್ಷಗಳಿಂದ ಕೋವಿಡ್ ಎದುರಾಗಿ ಕಾರ್ಯಕ್ರಮಗಳ ನಡೆಯದೆ ಇದ್ದುದ್ದರಿಂದ ಈ ಬಾರಿ ಭಕ್ತಸಮೂಹವೇ ಮುಂದಾಗಿ ಡಿ. ೨ರಂದು ಬೃಹತ್ ಪ್ರಮಾಣದಲ್ಲಿ ಗುರುವಂದನ ಸೇರಿದಂತೆ ಸಮಾಜೋ ಧಾರ್ಮಿಕ ಕಾರ‍್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಶ್ರೀಮಠದ ಸಕಲ ಸದ್ಭಕ್ತರ ಹಿರಿದಾಸೆಯಾದರೆ, ಸದಾವಕಾಲ ಭಕ್ತರ ಏಳಿಗೆಗಾಗಿ ಶಸ್ರಮಿಸುತ್ತಿರುವ ಶ್ರೀಮಠವೂ ಸಮಾಜದ ಒಳತಿಹಾಗಿ ಶ್ರಮಿಸುತ್ತಿದೆ. ಒಟ್ಟು ಸಮಾರಂಭದ ಸುಮಾರು ೧:೫೦ಕೋಟಿ ಖರ್ಚು ವೆಚ್ಚಗಳನ್ನು ಭಕ್ತಾದಿಗಳೆ ಸ್ವಯಂಸ್ಫೂರ್ತಿಯಿಂದ ನೆರವೇರಿಸುತ್ತಿದ್ದು, ಸಮಾರಂಭವನ್ನು ೩೭ ಗೋವುಗಳ ಪೂಜೆಯನ್ನು ಕೈಗೊಂಡು ಚಾಲನೆ ನೀಡಲಾಗುವುದು ಎಂದರು.
ಪ್ರತಿವರ್ಷ ಗುರುವಂದನ ಮಹೋತ್ಸವ ಶ್ರೀಮಠದ ಭಕ್ತರು ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸುವುದು ಒಂದಡೆಯಾದರೆ ಮತ್ತೊಂದಡೆ ಶ್ರೀಮಠದಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು, ಹಾಲು ವಿತರಣೆ, ಕುಷ್ಠ ರೋಗಿಗಳಿಗೆ ಅನ್ನ-ವಸ್ತ್ರ ಸಂತಾರ್ಪಣೆ, ಅಂಧ ಮಕ್ಕಳಿಗೆ ಸಮವಸ್ತ್ರಗಳ ವಿತರಣೆ, ಉಚಿತ ಸಾಮೂಹಿಕ ವಿವಾಹಗಳನ್ನು ವಿಶೇಷ ಚೇತನರಿಗೆ ತ್ರೀಚಕ್ರವಾಹನ ವಿತರಣೆ ಬಡ ರೈತರಿಗೆ ಕೃಷಿ ಸಲಕರಣೆಗಳನ್ನು ನೀಡುವುದು, ಬಡವರಿಗಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಅನಾಥ ಮಕ್ಕಳಿಗಾಗಿ ಅನ್ನ ವಸ್ತ್ರ ಪುಸ್ತಕಗಳ ವಿತರಣೆ ಹೀಗೆ ಸಮಾಜದಲ್ಲಿ ನೋಂದವರ ಪರ ಅನೇಕ ಕಾರ‍್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ಶ್ರೀಗಳು ಸ್ಮರಿಸಿದರು.
ಶ್ರೀಮಠದಿಂದ ಆರಂಭಿಸಿದ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಆರಂಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಪಂಡಿತ ಪುಟರಾಜ ಗವಾಯಿಗಳನ್ನು, ಶಿಕ್ಷಣ ಕ್ಷೇತ್ರದಲ್ಲಿ ಬೆಳಗಾಂವದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ದಾಸೋಹ ಶಿಕ್ಷಣ ಕ್ಷೇತ್ರದಲ್ಲಿ ಸಿದ್ಧಗಂಗಾಮಠದ ಡಾ| ಶಿವುಕುಮಾರ ಮಹಾಸ್ವಾಮಿಗಳನ್ನು, ಸಮಾಜ ಸೇವೆಯಲ್ಲಿ ರವಿಶಂಕರ ಗುರೂಜಿ, ಯೋಗ ಸಾಧನೆಯಲ್ಲಿ ಬಾಬಾ ರಾಮದೇವ ಮತ್ತು ಚಿತ್ರರಂಗದಲ್ಲಿ ನಟ ಯಶ ಮತ್ತು ಜ್ಯೋತಿ ಪ್ರಕಾಶ ಮಿರ್ಜಿ ಅವನ್ನು ನೀಡಿ ಗೌರವಿಸಲಾಗಿದೆ.
ಈ ವರ್ಷದಲ್ಲಿ ಚಿತ್ರನಟ ಪುನಿತ ರಾಜಕುಮಾರ ಅವರಿಗೆ ಅವರ ಸಮಾಜ ಕಾರ್ಯಗಳನ್ನು ಗುರುತಿಸಿ ಸಿದ್ಧಶ್ರೀ ಪಶಸ್ತಿಯನ್ನು ನೀಡಬೇಕು ಎಂದು ಐದಾರು ತಿಂಗಳ ಹಿಂದೆಯೇ ಚರ್ಚಿಸಲಾಗಿತ್ತಾದರು, ವಿಧಿಯಾಟವೇ ಬೇರೆಯಾಗಿ ನಟ ದೈವಾದಿನರಾಗಿದ್ದು, ಆದರೂ ನಟ ಪುನಿತ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿದ್ದು, ಈ ಸಲದ ಸಮಾರಂಭಕ್ಕೆ ರಾಜಕುಮಾರ ಅವರ ಕುಟುಂಬದ ಸದಸ್ಯರೊಬ್ಬರು ಆಗಮಿಸಲಿದ್ದು, ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ನುಡಿದರು. ಒಂದ ಲಕ್ಷ ರೂಪಾಯಿ ಪ್ರಶಸ್ತಿಯ ಮೊತ್ತ ಹಾಗೂ ೨ ತೊಲೆ ಚಿನ್ನ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದರು.
ಇದೇ ವೇಳೆ ಐವರು ವಿರಯೋಧರಿಗೆ ರಾಷ್ಟ್ರ ರಕ್ಷಕ, ಐವರು ರೈತರಿಗೆ ಮಹಾತ್ಯಾಗಿ ನೆಗಿಲಯೋಗಿ ಮತ್ತು ಐವರು ಶಿಕ್ಷಕರಿಗೆ ರಾಷ್ಟ್ರ ಶಿಲ್ಪಿ ಎಂಬ ಪ್ರಶಸ್ತಿಗಳನ್ನು ಸಹ ನೀಡಿಗೌರವಿಸಲಾಗುವುದು. ಡಿ.೨ರಂದು ಸಂಜೆ ೫:೦೦ಗಂಟೆಗೆ ಗುರುವಂದನ ಮಹೋತ್ಸವ ಸಮಾರಂಭದಲ್ಲಿ ನಾಡಿನ ಮಠಾಧೀಶರು, ಸಚಿವರು, ಶಾಸಕರು, ರಾಜಕೀಯ ಧುರೀಣರು ಸೇರಿದಂತೆ ಹರ, ಗುರು ಚರಮೂರ್ತಿಗಳು ಸೇರಿದಂತೆ ಐದು ರಾಜ್ಯಗಳಿಂದ ಸುಮಾರು ೫೦ರಿಂದ ೬೦ ಸಾವಿರ ಭಕ್ತಾದಿಗಳು ಸೇರಲಿದ್ದಾರೆ. ಭರುವ ಭಕ್ತಾದಿಗಳು ಮೂಲಸೌಕರ್ಯಗಳನ್ನು ಒದಗಿಸಲು ಈಗಾಗಲೇ ಶಾಸಕ ಸುಭಾಷ ಗುತ್ತೇದಾರ ಅವರ ಅಧ್ಯಕ್ಷತೆಯಲ್ಲಿ ಶ್ರೀಮಠ ಹಾಗೂ ತಾಲೂಕು ಮಟ್ಟದ ಸಂಬಂಧಿತ ಅಧಿಕಾರಿಗಳ ಸಭೆ ನಡೆಸಿ ವ್ಯವಸ್ಥೆ ಮಾಡಿದ್ದಾರೆ ಎಂದರು.
ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಅವರ ತಂಡವು ಸ್ವರ ಸಂಗೀತ ಸಂಭ್ರಮ ಜರುಗಲಿದ್ದು, ಕಾರ್ಯಕ್ರವಮನ್ನು ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರು ನಿರೂಪಣೆ ಕೈಗೊಳ್ಳಲಿದ್ದಾರೆ. ಈ ಒಂದು ಸಮಾಜ ಕಾರ್ಯದ ಸಮಾರಂಭದಲ್ಲಿ ಸರ್ವರು ಸಹಭಾಗಿಗಳಾಗಿ ಶ್ರೀಮಠದ ಕೃಪೇಗೆ ಪಾತ್ರರಾಗಬೇಕು ಎಂದು ಡಾ| ಮುರುಘರಾಜೇಂದ್ರ ಸ್ವಾಮಿಗಳು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳ ಆಪ್ತಕಾರ್ಯದರ್ಶಿ ಬಸವರಾಜ ಜೋಪಾಟೆ, ಶ್ರೀಮಠದ ವ್ಯವಸ್ಥಾಪಕ ಯಲ್ಲಾಲಿಂಗ ಸಲಗರ, ಮುಖಂಡ ಚನ್ನವೀರ ಕಾಳಕಿಂಗೆ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…