ಬಿಸಿ ಬಿಸಿ ಸುದ್ದಿ

ವಿಜಯಪುರ-ಬಾಗಲಕೋಟೆಯ ವಿಧಾನ ಪರಿಷತ್ ಚುನಾವಣೆ: ಹರ್ಷಾಗೌಡ ಪಾಟೀಲ V/S ಪಿ.ಎಚ್.ಪೂಜಾರರೂ

  • ಕೆ.ಶಿವು.ಲಕ್ಕಣ್ಣವರ

ವಿಜಯಪುರ-ಬಾಗಲಕೋಟೆ ಈ ಎರಡು ಜಿಲ್ಲೆಯಿಂದ ಇಬ್ಬರು ಎಂಎಲ್‌ಸಿಯಾಗುವ ಅವಕಾಶವಿದೆ. ಕಳೆದ ಸಲ ಕಾಂಗ್ರೆಸ್‌ನಿಂದ ಎಸ್‌.ಆರ್‌.ಪಾಟೀಲ್‌ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಎಂಎಲ್‌ಸಿಯಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ನಂತರ ತೆರವಾದ ಎಂಎಲ್‌ಸಿ ಸ್ಥಾನಕ್ಕೆ ಎಂ.ಬಿ.ಪಾಟೀಲ್‌ ಸಹೋದರ ಸುನಿಲ್‌ಗೌಡ ಪಾಟೀಲ ಬಂದರು.

ಬಹುತೇಕ ಕ್ಷೇತ್ರಗಳಂತೆ ಇಲ್ಲೂ ಬಿಜೆಪಿಯಾಗಲಿ, ಕಾಂಗ್ರೆಸ್‌ ಆಗಲಿ ಎರಡೂ ಸೀಟುಗಳಿಗೆ ಅಭ್ಯರ್ಥಿಗಳನ್ನು ಹಾಕದೇ ತಲಾ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಸುತ್ತವೆ. ಅದು ಸುರಕ್ಷಿತ ವಿಧಾನವೂ ಹೌದು. ಎಸ್‌.ಆರ್‌.ಪಾಟೀಲರು ಹೈಮಾಂಡ್‌ ಎದುರು, ʼಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಸದಸ್ಯರು ಶೇ.50 ರಷ್ಟು ಮಾತ್ರ ಇರುವುದರಿಂದ ಒಂದೇ ಸೀಟಿಗೆ ಸ್ಪರ್ಧಿಸೋಣ.

‘ಹಾಗಿದ್ದರೆ ಮಾತ್ರ ನಾನು ಸ್ಪರ್ಧಿಸುವೆʼ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಬಹುತೇಕ ಅವರಿಗೇ ಟಿಕೆಟ್‌ ಗ್ಯಾರಂಟಿಯಾಗಿತ್ತು. ಆದರೆ ಎಂ,ಬಿ.ಪಾಟೀಲ್‌ ಮತ್ತು ಮುರುಗೇಶ್‌ ನಿರಾಣಿ ಸೇರಿ ಅವರಿಗೆ ಟಿಕೆಟ್‌ ತಪ್ಪಿಸಿ ಎಂ.ಬಿ.ಪಾಟೀಲ್‌ ಸಹೋದರನಿಗೇ ಮತ್ತೊಂದು ಅವಕಾಶ ನೀಡಿದ್ದಾರೆ. ಹೀಗೆಂಬ ಮಾತಿನಲ್ಲೇ ತಪ್ಪಿದೆ. ಎಸ್.ಆರ್.ಪಾಟೀಲರಿಗೆ ಟಿಕೆಟ್‌ ತಪ್ಪಿಸಿದ್ದು ಎಂ.ಬಿ.ಪಾಟೀಲರಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿಯದು. ಆದರೆ ಇದರಲ್ಲಿ ಮುರಗೇಶ ನಿರಾಣಿಯವರ ಪಾತ್ರವಿರುವುದು ಸುಳ್ಳಲ್ಲವೂ..!

ಈ ಕುರಿತು ಮಾತನಾಡಿದ ಎಸ್‌.ಆರ್‌.ಪಾಟೀಲ್‌ ರವರು ಟಿಕೆಟ್‌ ಹೇಗೆ ಕೈ ತಪ್ಪಿತ್ತು ಎಂಬುದರ ಬಗ್ಗೆ ಸಿದ್ದರಾಮಯ್ಯನವರ ಜೊತೆಗೆ ಚರ್ಚಿಸಿ ಮಾಹಿತಿ ಕೊಡುತ್ತೇನೆ ಎಂದು ಹೇಳಿದ್ದಾರೆ. ನಾವೇ ಟಿಕೆಟ್‌ ಕೊಡುವವರು ನಮ್ಮ ಟಿಕೆಟನ್ನೇ ಹಾರಿಸಿದ್ದಾರೆ ಇದಕ್ಕೆ ಜಿಲ್ಲೆಯ ಆಂತರಿಕ ರಾಜಕೀಯವೇ ಪ್ರಮುಖರೇ ಕಾರಣವಾಗಿದ್ದಾರೆ. ಅದು ಮುರಗೇಶ ನಿರಾಣಿಯವರು ಕಾರಣವಾಗಿರಬಹುದು ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನ ಬದಲಿಗೆ ಟಿಕೆಟ್‌ ಪಡೆದಿರುವ ಸುನೀಲ್‌ಗೌಡ ಪರಿಷತಿನಲ್ಲೂ ಕ್ರಿಯಾಶೀಲನಾಗಿರಲಿಲ್ಲ, ಅಷ್ಟಾಗಿ ಜನ ಸಂಪರ್ಕವೂ ಇಲ್ಲ. ನಾನು ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ನಿಂದ ಉತ್ತರದ ನಿರೀಕ್ಷೆಯಲ್ಲಿದ್ದೇನೆ. ನಮ್ಮ ಕಾರ್ಯಕರ್ತರಲ್ಲಿ ಅಸಮಾಧಾನಕ್ಕಿಂತ ಆಕ್ರೋಶ ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ ಎಂದು ಎಸ್.ಆರ್.ಪಾಟೀಲರು ಹೇಳಿಕೊಂಡಿದ್ದಾರೆ.

# ಬಿಜೆಪಿ ಗೆಲುವಿಗೆ, ಕಾಂಗ್ರೆಸ್‌ ನಿಂದ ಬಂಡಾಯ ಅಭ್ಯರ್ಥಿಯು ಎಂಬುದೂ ಶುದ್ಧ ಸುಳ್ಳು..!–

ಕಳೆದ ಬಾರಿ ಯತ್ನಾಳ್‌ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಗೆ ಸೋಲುಂಟು ಮಾಡಿದ್ದರು. ಈ ಸಲ ಬಿಜೆಪಿ ನಿರಾಳವಾಗಿದೆ. ಅವರ ಕಡೆಯಿಂದ ಬಂಡಾಯ ಅಭ್ಯರ್ಥಿಗಳಿಲ್ಲ. ಬಿಜೆಪಿಯಿಂದ ರೆಡ್ಡಿ ಲಿಂಗಾಯತ ಸಮುದಾಯದ ಪಿ.ಎಚ್‌.ಪೂಜಾರ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಅವರ ಗೆಲವು ಬಹುತೇಕ ಖಚಿತವಾಗಿದೆ. ಎಂದು ಹುಸಿಸುಳ್ಳು ಹೇಳಲಾಗುತ್ತಿದೆ.

ಇನ್ನೊಂದು ಕಡೆ, ಕಾಂಗ್ರೆಸ್‌ ನಲ್ಲಿ ಬಂಡಾಯ ಶುರುವಾಗಿದೆ ಎಂಬುದೂ ಶುದ್ಧ ಸುಳ್ಳು, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರ ಅಣ್ಣನ ಮಗ ಹರ್ಷಗೌಡ ಪಾಟೀಲ ಸ್ಪರ್ಧಿಸಿದ್ದು, ಎಂ.ಬಿ.ಪಾಟೀಲರ ಸಹೋದರ ಸುನಿಲ ಗೌಡರಿಗೆ ತೊಂದರೆ ಆಗಲಿದೆ ಎಂಬುದೂ ಶುದ್ಧ ಸುಳ್ಳು. ಕಾಂಗ್ರೆಸ್‌ ಶಾಸಕ ಯಶವಂತ ರಾಯಗೌಡ ಪಾಟೀಲ್‌ ಕೂಡ ಎಂ.ಬಿ.ಪಾಟೀಲ್‌ ಬಗ್ಗೆ ಅಸಮಾಧಾನ ಹೊಂದಿದ್ದು, ಅವರು ಕೂಡ ತೆರೆಮರೆಯಲ್ಲಿ ಬಂಡಾಯ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಹೀಗೆಂಬುದೂ ಶುದ್ಧ ಸುಳ್ಳಾಗಿದೆ. ಎಂ.ಬಿ.ಪಾಟೀಲ ಬಗೆಗೆ ಯಾರೂ ಅಸಮಾಧಾನ ಹೊಂದಿಲ್ಲ ಎಂಬುದು ನಿಜವಾದ ಮಾತಾಗಿದೆ.

ಹಾಗೆ ನೋಡಿದರೆ ಎಂ.ಬಿ.ಪಾಟೀಲರು ಕೂಡ ಒಕ್ಕಲಿಗ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇಲ್ಲಿ ಈ ಸಮುದಾಯ ತುಂಬ ಕಡಿಮೆ ಸಂಖ್ಯೆಯಲ್ಲಿದೆ. ಆದರೆ ಹಣ ಬಲ ಮತ್ತು ತಂತ್ರಗಾರಿಕೆ ಮೂಲಕ ಎಂ.ಬಿ.ಪಾಟೀಲರು ಎಂಎಲ್‌ಎ ಆಗುತ್ತ ಬಂದಿದ್ದಾರೆ ಎಂದು ಕೆಲವು ಕುಹಕಿಗಳು ಹೇಳುತ್ತಾರಾದರೂ, ನಿಜವಾಗಿಯೂ ಎಂ.ಬಿ.ಪಾಟೀಲರು ತಮ್ಮ ಜನಪರ ಕೆಲಸಗಳಿಂದಲೇ ಆಯ್ಕೆಯಾಗುತ್ತಾ ಬಂದಿದ್ದಾರೆ. ಈಗ ಅವರು ಸಹಜವಾಗಿ ಸಹೋದರನನ್ನು ಗೆಲ್ಲಿಸಲು ಅವರು ಅದೇ ಜನಪರವಾದ ಪಟ್ಟುಗಳನ್ನು ಹಾಕಲಿದ್ದಾರೆ.

ಅನುಭವಿ ಎಸ್‌.ಆರ್‌.ಪಾಟೀಲ್‌ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ, ರಾಜ್ಯ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾಗಿರುವ ಅವರು ತಮಗೆ ಟಿಕೆಟ್‌ ಸಿಗದ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಬಿಜೆಪಿ ಅವರಿಗೆ ಟಿಕೆಟ್‌ ಆಫರ್‌ ಮಾಡಿತ್ತು. ಪಾಟೀಲರು ಅದನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಸಿದ್ದಾಂತಗಳಿಗೆ ಅವರು ಬದ್ಧರಾಗಿದ್ದಾರೆ.

ಕಳೆದ ಸಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಕಾರಣ ಹಲವು ವೀರಶೈವ ಮತ್ತು ಲಿಂಗಾಯತ ಸ್ವಾಮಿಗಳು ಬಿಜೆಪಿ ಪರ ನಿಲುವು ವ್ಯಕ್ತಪಡಿಸಿದ್ದರು. ಇದನ್ನು ಸರಿಪಡಿಸಲು ಎಸ್‌.ಆರ್‌.ಪಾಟೀಲರು ರಾಜ್ಯಾದ್ಯಂತ ಇರುವ ಲಿಂಗಾಯತ-ವೀರಶೈವ ಮಠಗಳಿಗೆ ಭೇಟಿ ನೀಡಿ, ಪ್ರತ್ಯೇಕ ಧರ್ಮ ಮುಗಿದ ಅಧ್ಯಾಯ. ಎಲ್ಲ ಒಟ್ಟಾಗಿ ಹೋಗೋಣ ಎಂದು ಮನವರಿಕೆ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್‌ ಬೆಂಬಲವೂ ಇತ್ತು. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲರೂ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ನಿಜವಾದ ನಡೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಎಸ್‌.ಆರ್‌.ಪಾಟೀಲರು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಬಹುದು ಎಂಬ ಅಂದಾಜೂ ಇತ್ತು. ಅವರು ಬೆಳೆದರೆ ತಮ್ಮ ಸ್ಥಾನಮಾನಕ್ಕೆ ಧಕ್ಕೆ ಎಂದು ಭಾವಿಸಿದ ಎಂ.ಬಿ.ಪಾಟೀಲರೇ, ಎಸ್‌.ಆರ್‌.ಪಾಟೀಲರಿಗೆ ಟಿಕೆಟ್‌ ತಪ್ಪಿಸಿದ್ದಾರೆ. ಎಂಬುದೂ ಶುದ್ಧ ಸುಳ್ಳಾಗಿದೆ.

# ಸಿದ್ದರಾಮಯ್ಯ ಪಾತ್ರವಿದೆಯೇ?–

ಎಸ್‌.ಆರ್‌.ಪಾಟೀಲರು ಸಿದ್ದರಾಮಯ್ಯರಿಗೆ ಆಪ್ತರು. ಡಿ.ಕೆ.ಶಿವಕುಮಾರ್‌ಗೂ ಅವರ ಬಗ್ಗೆ ಗೌರವವಿದೆ. ಹೈಕಮಾಂಡಿನಲ್ಲೂ ಎಸ್‌.ಆರ್‌.ಪಾಟೀಲರಿಗೆ ಮನ್ನಣೆ ಇದೆ. ಹೀಗಿದ್ದೂ ಎಂ.ಬಿ..ಪಾಟೀಲರಂತಹ ಒಂದನೆಯ ಸ್ತರದ ನಾಯಕ ಟಿಕೆಟ್‌ ತಪ್ಪಿಸಲು ಸಾಧ್ಯವಾಗಿದ್ದು ಹೇಗೆ?
ಕೆಲವು ಮೂಲಗಳ ಪ್ರಕಾರ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ, ತಮ್ಮ ಸಹೋದರನಿಗೇ ಟಿಕೆಟ್‌ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರು ಎಂಬುದೂ ಶುದ್ಧ ಸುಳ್ಳು. ಈ ಎಂ.ಬಿ.ಪಾಟೀಲರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರನ್ನು ಭೇಟಿ ಆಗಿ ತಮ್ಮ ಸಹೋದರಿಗೇ ಟಿಕೆಟ್‌ ಕೊಡಿಸಿಲ್ಲ. ಬದಲಾಗಿ ಅವರಿಗೆ ಸಹಜವಾಗಿ ಕಾಂಗ್ರೆಸ್ ಟಿಕೆಟ್‌ ಸಿಕ್ಕಿದೆ ಎಂಬುದು ನಿಜವಾದ ಮಾತಾಗಿದೆ.

ಶಿವಕುಮಾರ್‌ ಕೂಡ ಎಂ.ಬಿ.ಪಾಟೀಲ್‌, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಚುನಾವಣಾ ವೆಚ್ಚ ನೋಡಿಕೊಂಡು ಗೆಲ್ಲಿಸಿಕೊಂಡು ಬರುವೆ. ನೀವು ಸಿ.ಎಂ.ಆಗಲು ಅದು ನೆರವಾಗುತ್ತದೆʼ ಎಂದು ಭರವಸೆ ನೀಡಿದ್ದಾರೆ ಎಂಬುದೂ ಶುದ್ಧ ಸುಳ್ಳು.

ಎಸ್‌.ಆರ್‌.ಪಾಟೀಲರಿಗೇ ಟಿಕೆಟ್‌ ಕೊಡಲು ನಿರ್ಧರಿಸಿದ್ದ ಡಿ.ಕೆ.ಶಿವಕುಮಾರ್‌ ಅಂತಿಮ ಹಂತದಲ್ಲಿ ಎಂ.ಬಿ.ಪಾಟೀಲ್‌ ಸಹೋದರನಿಗೆ ಟಿಕೆಟ್‌ ನೀಡಿದ್ದಾರೆ. ಸಿದ್ದರಾಮಯ್ಯರ ಒಪ್ಪಿಗೆ ಇಲ್ಲದೇ ಈ ಮಹತ್ವದ ಬದಲಾವಣೆ ಸಾಧ್ಯವಿಲ್ಲ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಎಸ್‌.ಆರ್‌.ಪಾಟೀಲರೊಂದಿಗೆ ಮಾತನಾಡಿ, ʼಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ನೋಡೋಣʼ ಎಂದಿದ್ದಾರೆ. ಅದಕ್ಕೆ ಎಸ್‌.ಆರ್‌.ಪಾಟೀಲರು, ʼಇಲ್ಲಿಯ ರಾಜಕಾರಣ ನಿಮಗೆ ಗೊತ್ತಿಲ್ಲ. ಎರಡನೇ ಅಭ್ಯರ್ಥಿಯಾಗಿ ನಿಂತರೆ ನಮ್ಮ ಪಕ್ಷದ ಸ್ಥಳೀಯ ಕೆಲವು ನಾಯಕರು ನನ್ನನು ಸೋಲಿಸಲು ಯತ್ನಿಸುತ್ತಾರೆʼ ಎಂದು ರಣದೀಪ್‌ ಆ ಆಫರ್‌ ಅನ್ನು ನಿರಾಕರಿಸಿದ್ದಾರೆ.

# ಎಂ.ಬಿ.ಪಾಟೀಲರಿಗೆ ಬಂಡಾಯದ ಬಿಸಿ ಇಲ್ಲವೂ..!–

ಪಂಚಮಸಾಲಿ ನಾಯಕ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್‌ ಅವರ ಅಣ್ಣನ ಮಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಎಂ.ಬಿ.ಪಾಟೀಲರನ್ನು ವಿಚಲಿತಗೊಳಿಸಿಲ್ಲವೂ. ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್‌ ಕೂಡ ಬಂಡಾಯ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ. ಎಂಬುದೂ ಕುಹಕಿಗಳ ಅಂಬೋಣವಾಗಿದೆ.

ಒಟ್ಟಿನಲ್ಲಿ ಹಿರಿಯ ರಾಜಕಾರಣಿ ಎಸ್‌.ಆರ್‌.ಪಾಟೀಲರಿಗೆ ಟಿಕೆಟ್‌ ತಪ್ಪಿಸಿದ್ದು ಕಾಂಗ್ರೆಸ್‌ ಅಲ್ಲದೇ ಬಿಜೆಪಿಯ ಹಲವು ನಾಯಕರಿಗೂ ಬೇಸರ ಮೂಡಿಸಿದೆ ಎಂಬುದೂ ಶುದ್ಧ ಸುಳ್ಳಾಗಿದೆ. ಜೆಡಿಎಸ್‌ ವರಿಷ್ಠ ದೇವೆಗೌಡರು ಕೂಡ ಪಾಟೀಲರೊಂದಿಗೆ ಮಾತನಾಡಿ, ʼನಿಮ್ಮಂತಹ ಹಿರಿಯ ನಾಯಕರಿಗೆ ಹೀಗಾಗಬಾರದಿತ್ತುʼ ಎಂದು ಬೇಸರ ವ್ಯಕ್ತಪಡಿಸಿದ್ದಾರೇನೋ ನಿಜ, ಆದರೆ ಅವರು ಎಂ.ಬಿ.ಪಾಟೀಲರ ಬಗೆಗೆ ಒಂದೇ ಒಂದೂ ಬೇಸರದ ಮಾತೂ ಆಡಿಲ್ಲ. ಅದೇದೆಗೋ ಎಸ್.ಆರ್.ಪಾಟೀಲರಿಗೆ ಏಕೋ ಏನೋ ಹಿನ್ನೆಡೆಯಾಗಿರುವುದೂ ನಿಜವಾಗಿದೆ.

ಇಂತಹ ಹಿನ್ನಡೆಗಳನ್ನು ಹಿಂದೆಲ್ಲ ಕಂಡಿರುವ ಎಸ್‌.ಆರ್‌.ಪಾಟೀಲ್‌ ಹೈಕಮಾಂಡ್‌ ಬೆಂಬಲದಿಂದ ಬೇರೊಂದು ರೂಪದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಈ ಸಲ ಏನಾಗುತ್ತದೋ ಕಾಯ್ದು ನೋಡಬೇಕು..!

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago