ಬಿಸಿ ಬಿಸಿ ಸುದ್ದಿ

ಮಹಾತ್ಮಾ ಜ್ಯೊತಿಬಾ ಫುಲೆ ಅವರ ೧೩೧ನೇ ಪುಣ್ಯಸ್ಮರಣೆ ಆಚರಣೆ

ಕಲಬುರಗಿ: ನಗರದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮಹಾತ್ಮಾ ಜ್ಯೊತಿಬಾ ಫುಲೆ ಅವರ ೧೩೧ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಶಿವಲಿಂಗಪ್ಪಾ ಕಿನ್ನೂರ ಅವರು ಮಹಾತ್ಮ ಜ್ಯೋತಿಬಾ ಪುಲೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡುತ್ತಾ ರಾಜ್ಯ ಸರಕಾರ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಜಾಗೃತ ಸಮಾಲೋಚನಾ ಸುಧಾರಣಾ ಸಮಿತಿ ರಚನೆ ಮಾಡಬೇಕು.

ಈ ಸಮಿತಿಯಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗಗಳ ಮುಖಂಡರನ್ನು ಸಂಬಂಧಿಸಿದಂತೆ ಒಬ್ಬೊಬ್ಬ ಸದಸ್ಯರಂತೆ ೧೧ ಜನ ಜನರ ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಕರ್ನಾಟದಲ್ಲಿರುವ ಹಿಂದುಳಿದ ವರ್ಗಗಳ ಜನರ ಸಾಮಾಜಿಕ-ಆರ್ಥಿಕ ಸಮೀಕ್ಷೆ-೨೦೧೫ರ ವರದಿ ಅದಿವೇಶನದಲ್ಲಿ ಚರ್ಚೆ-ಮಂಡನೆ ಮಾಡಿ ಸಮಾಜ ಕಲ್ಯಾಣ ಇಲಾಖೆಯ ಬಜೆಟ್ ಮಾದರಿಯಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಬಜೆಟ್ ವಿಂಗಡನೆ ವಿಸ್ತರಿಸಬೇಕು, ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯಲ್ಲಿ (ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ) ಹಿಂದುಳಿದ ವರ್ಗಗಳ ಸಂಘ-ಸಂಸ್ಥೆ ವೇದಿಕೆಗಳು ಹಾಗೂ ಮುಖಂಡರ ದುಂಡು ಮೇಜಿನ ಸಭೆ ಕರೆದು ಈ ಇಲಾಖೆಯ ಯೋಜನೆಗಳ ಹಾಗೂ ಸಮಸ್ಯೆ ಸವಾಲುಗಳ ಪರಿಹಾರ ಕುರಿತು ಚರ್ಚಿಸಿ ಮುಂಬರುವ ಕ್ರಿಯಾಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಈ ಹಿಂದಿನ ೬ವರದಿಗಳನ್ನು ಪ್ರಕಟಿಸಬೇಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸಂಘ-ಸಂಸ್ಥ-ವೇದಿಕೆ ಸಮಾಲೋಚನಾ ಸಭೆಯನ್ನು ಕರೆದು ಉಚಿತವಾಗಿ ವಿತರಿಸಬೇಕು. ಹಾಗೂ ಕೇಂದ್ರ ಸರಕಾರದ ಬಿ.ಪಿ ಮಂಡಲ ವರದಿಯನ್ನು ಅನುಷ್ಠಾನಗೊಳಿಸಲು ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಈ ವರದಿಯ ಅಂಶಗಳ ಆಧಾರ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಭೌತಿಕ ಗುರಿ ಏರಿಕೆ ಮಾಡಬೇಕು ಅಂತೆಯೇ ಈ ಜನರ ಸಮಗ್ರ ಅಭಿವೃದ್ದಿಗೆ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಚರ್ಚೆ ಮಾಡಬೇಕೆಂದು ಆಗ್ರಹಿಸಿದರು.

ಡಿ. ದೇವರಾಜ ಅರಸು ಅವರ ಯೋಜನೆಗಳು ಜನರಿಗೆ ತಲುಪಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮಾತೃ ಇಲಾಖೆಯ ಆಡಳಿತ ಅಧಿಕಾರಿಗಳನ್ನು ನೇಮಿಸಬೇಕು. ಗಂಗಾ ಕಲ್ಯಾಣ ಯೋಜನೆ, ಶೈಕ್ಷಣಿಕ ಅರಿವು ಸಾಲಸೌಲಭ್ಯ, ಚೈತನ್ಯ ಕಿರು ಸಾಲ ಯೋಜನೆ ಹಾಗೂ ವೃತ್ತಿಪರ ಕಸಬುದಾರರಿಗೆ ಜನಸಂಖ್ಯೆಗೆ ಅನುಗುಣವಾಗಿ ಗರಿಷ್ಠ ಭೌತಿಕ ಗುರಿ (ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೌತಿಕ ಗುರಿ ೧೫೦ಕ್ಕೆ ಹೆಚ್ಚಿಸಬೇಕು),ಕಲ್ಯಾಣ ಕರ್ನಾಟಕ ಮಕ್ಕಳು ಪೋಷಕಾಂಶ ಹೆಚ್ಚು ಬೇಕಾಗಿರುವುದರಿಂದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಭೋಜನಾ ವೆಚ್ಚ ರೂ. ೭೫/- ಏರಿಕೆ ಮಾಡಬೇಕು.ಅಲೆಮಾರಿ/ಅರೇಅಲೆಮಾರಿ ಯೋಜನೆಗಳು ಆಹಾರ ಬಡವರಿಗೆ ದೊರಕುವಂತೆ ಮಾನದಂಡಗಳು ರೂಪಿಸಲು ಕಲ್ಯಾಣ ಕರ್ನಾಟಕದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಹೆಚ್ಚಿಗೆ ನೀಡಬೇಕು, ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕೆ ಆಶ್ರಯ ಮನೆ, ಪುನರ್ ನಿರ್ಮಾಣ, ಕಚ್ಛಾ ಮನೆ ನವೀಕರಣಕ್ಕೆ ಕನಿಷ್ಠ ೫ ಲಕ್ಷ ರೂಪಾಯಿ ಸಹಾಯನುಧಾನ ನೀಡಬೇಕು ಎಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕದ ಹಿಂದುಳಿದ ವರ್ಗಗಳ ಕಬ್ಬಲಿಗ, ಕೋಲಿ, ಕುರುಬ, ಮಡಿವಾಳ, ಈಡಿಗ, ಕಂಬಾರ, ಕುಂಬಾರ, ಗಾಣಿಗ, ಹೂಗಾರ, ಸವಿತಾ, ಹಡಪದ, ಹೆಳವರ, ಗೌಳಿ, ಗಿಸಾಡಿ, ಗೊಲ್ಲ, ಗೊಂದಳಿ, ಕಟುಬ ಹಾಗೂ ಅಲ್ಪಂಖ್ಯಾತರು-ಹಿಂದುಳಿದ ಸೇರಿದಂತೆ ಇತರೆ ನೂರಾರು ಸಮುದಾಯಗಳ ಜನರಿಗೆ ಕುಲಕಸುಬುದಾರರು, ಸಂಪ್ರದಾಯ ವೃತ್ತಿ ಕೆಲಸಗಾರರ ಮೇಲೆ ಅನಾವಶ್ಯಕ ಕಿರುಕುಳ/ಆಕ್ಷೇಪಾರ್ಹ ಪ್ರಕರಣಗಳನ್ನು ದಾಖಲಿಸುವದನ್ನು ತಡೆಗಟ್ಟಲು ಮುಖಂಡರ/ಯುವಕರ ದುಂಡುಮೇಜಿನ ಸಭೆ ಕರೆಯಲಾಗುವುದು ನಂತರ ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಬೆಂಗಳೂರು ಹಾಗೂ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕ ಕಲಬುರಗಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ದೊರೆಪಲ್ಲಿ, ಭೀಮಾಶಂಕರ ಮಡಿವಾಳ ಆಳಂದ, ಹಾಲಪ್ಪ ಹಾವೇರಿ, ಚಂದ್ರಕಾಂತ ಜಮಾದಾರ ವಕೀಲರು, ಮಡಿವಾಳಪ್ಪ ಇಟಗಾ, ಸಾಯಿಬಣ್ಣ ಜಾಲಗಾರ, ದೇವಿಂದ್ರ ಚಿಗರಳ್ಳಿ, ಹುಲಕಂಠರಾಯ ಕೋಲಿ, ಸುಭಾಷ ಮುಕ್ಕಾ, ಗುರುನಾಥ ಹಾವನೂರ, ಬಸವರಾಜ ಉಮ್ಮರ್ಗಿ, ಬಿ.ಎಂ.ರಾವೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago