ಕಲಬುರಗಿ: ಹೈಕೋರ್ಟ ಮತ್ತು ಸುಪ್ರೀಮ್ ಕೋರ್ಟ ಕನ್ನಡವನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಿ ಅದ್ದಕ್ಕೊಂದು ಗೌರವ ಮನ್ನಣೆ ಮಾಡಿಕೋಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಸಂಪತ್ ಜೆ ಹಿರೇಮಠ ಅವರ ನೇತೃತ್ವದಲ್ಲಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರ ಮುಖಾಂತರ ಕೇಂದ್ರ ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಈ ಮೂಲಕ ತಮಗೆ ತಿಳಿಯ ಪಡಿಸುವುದೇನೆಂದರೆ, ಸಂವಿಧಾನದ ಅನುಚ್ಛೇದ-೩೪೮ ರ ಪ್ರಕಾರ ಸುಪ್ರೀಮ್ ಕೋರ್ಟ ಮತ್ತು ಹೈಕೋರ್ಟನಲ್ಲಿ ಅಧಿಕೃತ ಭಾಷೆ ಇಂಗ್ಲೀಷ ಆಗಿರಬೇಕು. ಎರಡನೇಯ ಭಾಗದಲ್ಲಿ ಹಿಂದಿ ಅಥವಾ ಇತರೆ ಯಾವುದೇ ಭಾಷೆಯನ್ನು ರಾಜ್ಯಪಾಲರ ಅನುಮತಿ ಅನ್ವಯ ಜಾರಿಗೆ ತರಬಹುದು. ದುರಾದೃಷ್ಟಕರ ಕರ್ನಾಟಕ, ಗುಜರಾತ, ತಮಿಳನಾಡು, ಛತ್ತಿಸಗಢ ಮತ್ತಿತರ ರಾಜ್ಯಗಳು ಆಯಾ ಭಾಷೆಗಳನ್ನು ತರಲು ಪ್ರಯತ್ನ ಮಾಡಿದರು ಅವು ಫಲಿಸಲಿಲ್ಲ.
ಆದಕಾರಣ ಕ.ರ.ವೇ. ಜಿಲ್ಲಾ ಕಾನೂನು ಘಟಕದ ವತಿಯಿಂದ ಕೇಂದ್ರ ಕಾನೂನು ಸಚಿವರಿಗೆ ಮನವಿ ಮಾಡಿಕೊಳ್ಳುವುದೇನೆಂದ ಸದರಿ ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಿ ಅದ್ದಕ್ಕೊಂದು ಗೌರವ ಮನ್ನಣೆ ಕೊಡಲು ಮಾನ್ಯ ಕರ್ನಾಟಕ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಬೇಕೆಂದು.
ಈ ಸಂದರ್ಭದಲ್ಲಿ ಕ.ಕ. ಕಾರ್ಯಾಧ್ಯಕ್ಷ ಅಭಿಷೇಕ ಬಾಲಾಜಿ, ಕ.ಕ. ಪ್ರ . ಕಾರ್ಯದರ್ಶಿ ಗೋಪಾಲ ನಾಟಕಾರ, ಕ.ಕ. ಉಪಾಧ್ಯಕ್ಷ ಮನೋಹ ಬೇನೂರ, ಜಿಲ್ಲಾ ಗೌರವಧ್ಯಕ್ಷ ಮಂಜು ಮಠಪತಿ, ಜಿಲ್ಲಾಧ್ಯಕ್ಷ ಸಂತೋಷ ಚೌದ್ರಿ, ನಗರಾಧ್ಯಕ್ಷ ಶಂಭುಲಿಂಗ ಶಾಬಾದರ್, ಕನಿಷ್ಠಾ ಎಂ.ಧನ್ನಿ, ಮಲ್ಲಿಕಾರ್ಜುನ ಬಿರಾದಾರ, ಅನೀಲ ಗಾಯಕವಾಡ, ಶರಣು ದ್ಯಾಮ, ವಿನೋದ ಕಣ್ಣಿ, ಪವನ ಸುಲೇಪೆಟ, ಸಾಗರ ಅಮ್ಮಣ್ಣಾ, ಸುನೀಲ ಸಿ, ನಾಗರಾಜ ಶೇಖರೋಜಾ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…