ಆಳಂದ: ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಪೀಠಾಧಿಪತಿಗಳಾದ ಶ್ರೀ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳ ೩೭ನೇ ಹುಟ್ಟು ಹಬ್ಬದ ಆಚರಣೆ ಅಂಗವಾಗಿ ಗುರುವಂದನಾ ಮಹೋತ್ಸವ ಡಿ.೨ರಂದು (ಗುರುವಾರ), ಸಂಜೆ ೫:೦೦ಗಂಟೆಗೆ ಜರುಗಿಸಲು ಸಿದ್ಧತೆ ಪೂರ್ಣಗೊಂಡಿದೆ.
ವೇದಿಕೆಯಲ್ಲಿ ಚಿತ್ರನಟ ಪುನಿತರಾಜಕುಮಾರ ಅವರಿಗೆ ಮರಣೋತ್ತರ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಸೇರಿ ಆಯ್ದ ವೀರಯೋಧರಿಗೆ, ಕೃಷಿಕರಿಗೆ, ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಖಾತ ಸಂಗೀತಗಾರ ಬೆಂಗಳೂರಿನ ವಿಜಯಪ್ರಕಾಶ ಒಳಗೊಂಡ ಅವರ ತಂಡದಿಂದ ಸ್ವರ ಸಂಗೀತ ಝೆಂಕಾರ ಮೋಳಗಲಿದೆ.
ನಿರೂಪಕಿ ಅನುಶ್ರೀ ಒಳಗೊಂಡು ನಾಡಿನ ಆಯ್ದ ಭಾಗಗಳಿಂದ ಶಾಸಕರು, ಸಚಿವರು ಸೇರಿದಂತೆ ಹರ, ಗುರು ಚರಮೂರ್ತಿಗಳು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ.
ಶ್ರೀಗಳ ೩೭ನೇ ಹುಟ್ಟು ಹಬ್ಬದಂದು ಶ್ರೀಮಠದಲ್ಲಿ ೩೭ ಗೋವುಳಿಗೆ ವಿಶೇಷ ಪೂಜೆಯನ್ನು ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ನೆರವೇರಿಸಿ ಚಾಲನೆ ನೀಡುವ ಮೂಲಕ ಆರಂಭಗೊಳ್ಳುವ ಬೃಹತ್ ಸಮಾರಂಭಕ್ಕೆ ಈಗಾಗಲೇ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುವ ಸಹಸ್ರಾರು ಸಂಖ್ಯೆಯಲ್ಲಿನ ಭಕ್ತಾದಿಗಳಿಗೆ ಊಟ, ವಸತಿ ಹಾಗೂ ವೇದಿಕೆಯ ಮುಂಭಾಗದಲ್ಲಿ ಆಸನಗಳ ಮತ್ತು ಕುಳಿತುಕೊಳ್ಳಲು ಹಾಸಿಗೆ ಸುವ್ಯವಸ್ಥೆ ಪೂರ್ಣ ಸಿದ್ಧತೆ ಮಾಡಿದ್ದು, ಬೀಗಿ ಬಂದೋಸ್ತ್‌ಗಾಗಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸಮಾರಂಭದಲ್ಲಿ ಭಕ್ತಾದಿಗಳಿಂದ ಡಾ| ಮುರುಘರಾಜೇಂದ್ರ ಶ್ರೀಗಳಿಗೆ ತುಲಾಬಾರ, ದರ್ಶನಾಶೀರ್ವಾದ ಸೇರಿದಂತೆ ಗುರುವಂದನೆ ಅದ್ಧೂರಿ ಆಚರಣೆಗೆ ಬುದ್ಧವಾರ ಸಕ್ಕಲ ಸಿದ್ಧತೆ ಪೂರ್ಣಗೊಂಡಿದ್ದು, ಗುರುವಾರ ನಡೆಯುವ ಬೃಹತ್ ಸಮಾರಂಭದಲ್ಲಿ ಸುಮಾರು ೬೦ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರಂಗವಾಗಿ ಶ್ರೀಮಠದ ಆವರಣದಲ್ಲಿ ಕೈಗೊಂಡ ವಿದ್ಯುತ್ ದೀಪಾಲಂಕಾರ ಗಿಡ, ಮರಗಳ ಸುಂದರ ಪರಿಸವರದ ಕೈಗೊಂಡ ಶ್ರೀಂಗಾರ ಆಕರ್ಶಕ ವಾತಾವರಣ ಭಕ್ತರನ್ನು ಕೈಮಾಡಿ ಕರೆಯುತ್ತದೆ.
ಈ ಸಮಾರಂಭವು ಹಿಂದುಳಿದ ಭಾಗದ ಜಿಡಗಾ ಮಠದ ಮೂಲಕ ಸಾವಿರ ಮಕ್ಕಳ ಉಚಿತ ಶಿಕ್ಷಣ ವ್ಯವಸ್ಥೆ ಹಾಗೂ ಸಾವಿರ ಗೋವು ಸಂರಕ್ಷಣೆಗೆ ಗೋ ಶಾಲೆ ಮತ್ತು ಅಂತರ್ಜಲ ವೃದ್ಧಿಯಂತ ಸಮಾಜೋ ಧಾರ್ಮಿಕ ಕಾರ್ಯಗಳಿಗೆ ಶ್ರೀಮಠ ಕೈಗೊಂಡ ಸಂಕಲ್ಪದಂತೆ ನೂರು ಕೋಟಿ ವೆಚ್ಚದ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂಬ ಭಕ್ತರ ಅಭಿಲಾಸೆಯನ್ನು ಶ್ರೀಮಠದ ಶ್ರೀಗಳಲ್ಲಿ ಮನೋಬಲ ಹೆಚ್ಚಿಸುವಂತಾಗಲಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…