ಬಿಸಿ ಬಿಸಿ ಸುದ್ದಿ

ಭಕ್ತಿ ಭಾವಗಳ ಮಧ್ಯೆ ಮುರುಘರಾಜೇಂದ್ರ ಗುರುವಿನ ಜನ್ಮೋತ್ಸವಕ್ಕೆ ಅದ್ಧೂರಿ ತೆರೆ

ಆಳಂದ: ಜಿಡಗಾ ನವಕಲ್ಯಾಣ ಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಮಠದ ಪೀಠಾಧಿಪತಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರ ೩೭ನೇ ಜನ್ಮದಿನಾಚರಣೆ ಅಂಗವಾಗಿ ಸಂಜೆ ಆಯೋಜಿಸಿದ್ದ ಶ್ರೀಗಳಿಗೆ ಗುರುವಂದನ ಹಾಗೂ ಸ್ವರಸಂಗೀತ ಝೇಂಕಾರದಲ್ಲಿ ನಾಡಿನ ಸಾವಿರಾರು ಭಕ್ತರು, ಗಣ್ಯರು, ಮಠಾಧೀಶರು ಪಾಲ್ಗೊಂಡು ಬೃಹತ್ ಸಮಾರಂಭಕ್ಕೆ ಸಾಕ್ಷಿಯಾದರು.

ಸುಮಾರು ಒಂದು ತಿಂಗಳಿಂದಲೂ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿದ್ದ ಶ್ರೀಮಠದ ಭಕ್ತ ಸಮೂಹ ಗುರುವಾರ ಗುರುವಿನ ೩೭ನೇ ಜನ್ಮೋತ್ಸವ ಅದ್ಧೂರಿಯಾಗಿ ಆಚರಿಸುವ ಮೂಲಕ ಗುರುವಂದನೆ ಸಲ್ಲಿಸಿ ಸಂಭ್ರಮಿಸಿದರು.

ಅಲ್ಲದೆ, ಚಿತ್ರನಟ ದಿ| ಪುನಿತರಾಜಕುಮಾರ ಅವರಿಗೆ ಮರಣೋತ್ತರ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪುನಿತ ಅವರ ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ ಅವರು ಲೈವಮೂಲಕ ಸ್ವೀಕರಿಸಿದರು. ಅನಿವಾರ್ಯ ಕಾರಣಗಳಿಂದ ಸಮಾರಂಭಕ್ಕೆ ಬರಲಾಗಿಲ್ಲ. ಅನ್ಯತಾ ಭಾವಿಸದೆ. ಶ್ರೀಮಠದ ಪ್ರಶಸ್ತಿಯನ್ನು ಆಶೀರ್ವಾದ ರೂಪದಲ್ಲಿ ಪಡೆಯುತ್ತೇನೆ. ಪುನಿತರ ಪತ್ನಿ, ಮಕ್ಕಳ ಸೇರಿ ರಾಜ ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಸದಾ ಇರಲಿ ಎಂದು ಅವರು ಆಶೀಸಿದರು.

ಇದೇ ವೇಳೆ ಹಲವು ಕ್ಷೇತ್ರದ ಸಾಧಿಕರಿಗೆ ಪ್ರಶಸ್ತಿ ನೀಡಿ ಶ್ರೀಗಳಿಂದ ಗೌರವಿಸಲಾಯಿತು. ಸಮಾರಂಭದ ಆಕರ್ಶಕನಾಗಿದ್ದ ಗಾನಗಾರುಡಿಗ ವಿಜಯಪ್ರಕಾಶ ಅವರ ಕಲಾ ತಂಡವು ಗುರುಮುರುಘರಾಜೇಂದ್ರ ಹಾಡಿನ ರಚನೆ, ಕಾಣದ ಗುರು ಸಾರ್ವಭೋಮ ಗುರು ಸಿದ್ಧರಾಮ, ಗೊಂಬೆ ಹೇಳತೈತ್ತಿ ನೀನೇ ರಾಜಕುಮಾರ, ಓಂ ನಮ: ಶಿವಾಯ ಹೀಗೆ ಹಲವು ಭಕ್ತಿಯ ಹಾಡಿಗೆ ಹಾಡಿಗೆ ಜನಸ್ತೂಮವೇ ತಲೆದೂಗಿ ಮುಗಿಲು ಮುಟ್ಟುವಂತೆ ಕರತಾಡನಗಳ ಮೊಳಗಿಸಿದರು.

ನಿರಗುಡಿಯ ಮಲ್ಲಯ್ಯಾ ಮುತ್ತ್ಯಾ, ಮಾದನಹಿಪ್ಪರಗಾ ಶ್ರೀ, ಚಿಣಮಗಿರಿ ಶ್ರೀ ಸೇರಿದಂತೆ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಬಿ.ಆರ. ಪಾಟೀಲ, ಶಾಸಕ ಡಾ| ಅಜಯಸಿಂಗ್, ಮಾಜಿ ಎಂಎಲ್‌ಸಿ ಅಲಂಪ್ರಭು ಪಾಟೀಲ ಸೇರಿದಂತೆ ಅಪಾರಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

56 seconds ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago