ಆಳಂದ: ಜಿಡಗಾ ನವಕಲ್ಯಾಣ ಮಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀಮಠದ ಪೀಠಾಧಿಪತಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಅವರ ೩೭ನೇ ಜನ್ಮದಿನಾಚರಣೆ ಅಂಗವಾಗಿ ಸಂಜೆ ಆಯೋಜಿಸಿದ್ದ ಶ್ರೀಗಳಿಗೆ ಗುರುವಂದನ ಹಾಗೂ ಸ್ವರಸಂಗೀತ ಝೇಂಕಾರದಲ್ಲಿ ನಾಡಿನ ಸಾವಿರಾರು ಭಕ್ತರು, ಗಣ್ಯರು, ಮಠಾಧೀಶರು ಪಾಲ್ಗೊಂಡು ಬೃಹತ್ ಸಮಾರಂಭಕ್ಕೆ ಸಾಕ್ಷಿಯಾದರು.
ಸುಮಾರು ಒಂದು ತಿಂಗಳಿಂದಲೂ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿದ್ದ ಶ್ರೀಮಠದ ಭಕ್ತ ಸಮೂಹ ಗುರುವಾರ ಗುರುವಿನ ೩೭ನೇ ಜನ್ಮೋತ್ಸವ ಅದ್ಧೂರಿಯಾಗಿ ಆಚರಿಸುವ ಮೂಲಕ ಗುರುವಂದನೆ ಸಲ್ಲಿಸಿ ಸಂಭ್ರಮಿಸಿದರು.
ಅಲ್ಲದೆ, ಚಿತ್ರನಟ ದಿ| ಪುನಿತರಾಜಕುಮಾರ ಅವರಿಗೆ ಮರಣೋತ್ತರ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪುನಿತ ಅವರ ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ ಅವರು ಲೈವಮೂಲಕ ಸ್ವೀಕರಿಸಿದರು. ಅನಿವಾರ್ಯ ಕಾರಣಗಳಿಂದ ಸಮಾರಂಭಕ್ಕೆ ಬರಲಾಗಿಲ್ಲ. ಅನ್ಯತಾ ಭಾವಿಸದೆ. ಶ್ರೀಮಠದ ಪ್ರಶಸ್ತಿಯನ್ನು ಆಶೀರ್ವಾದ ರೂಪದಲ್ಲಿ ಪಡೆಯುತ್ತೇನೆ. ಪುನಿತರ ಪತ್ನಿ, ಮಕ್ಕಳ ಸೇರಿ ರಾಜ ಕುಟುಂಬದ ಮೇಲೆ ಶ್ರೀಮಠದ ಆಶೀರ್ವಾದ ಸದಾ ಇರಲಿ ಎಂದು ಅವರು ಆಶೀಸಿದರು.
ಇದೇ ವೇಳೆ ಹಲವು ಕ್ಷೇತ್ರದ ಸಾಧಿಕರಿಗೆ ಪ್ರಶಸ್ತಿ ನೀಡಿ ಶ್ರೀಗಳಿಂದ ಗೌರವಿಸಲಾಯಿತು. ಸಮಾರಂಭದ ಆಕರ್ಶಕನಾಗಿದ್ದ ಗಾನಗಾರುಡಿಗ ವಿಜಯಪ್ರಕಾಶ ಅವರ ಕಲಾ ತಂಡವು ಗುರುಮುರುಘರಾಜೇಂದ್ರ ಹಾಡಿನ ರಚನೆ, ಕಾಣದ ಗುರು ಸಾರ್ವಭೋಮ ಗುರು ಸಿದ್ಧರಾಮ, ಗೊಂಬೆ ಹೇಳತೈತ್ತಿ ನೀನೇ ರಾಜಕುಮಾರ, ಓಂ ನಮ: ಶಿವಾಯ ಹೀಗೆ ಹಲವು ಭಕ್ತಿಯ ಹಾಡಿಗೆ ಹಾಡಿಗೆ ಜನಸ್ತೂಮವೇ ತಲೆದೂಗಿ ಮುಗಿಲು ಮುಟ್ಟುವಂತೆ ಕರತಾಡನಗಳ ಮೊಳಗಿಸಿದರು.
ನಿರಗುಡಿಯ ಮಲ್ಲಯ್ಯಾ ಮುತ್ತ್ಯಾ, ಮಾದನಹಿಪ್ಪರಗಾ ಶ್ರೀ, ಚಿಣಮಗಿರಿ ಶ್ರೀ ಸೇರಿದಂತೆ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಬಿ.ಆರ. ಪಾಟೀಲ, ಶಾಸಕ ಡಾ| ಅಜಯಸಿಂಗ್, ಮಾಜಿ ಎಂಎಲ್‌ಸಿ ಅಲಂಪ್ರಭು ಪಾಟೀಲ ಸೇರಿದಂತೆ ಅಪಾರಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.