ಕಲಬುರಗಿ: ಜ್ಞಾನ ಶಕ್ತಿಯಿದ್ದಂತೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಹಾಗೂ ಬಡತನ ಹಲವು ಸಮಸ್ಯೆಗಳ ನಿರ್ಮೂಲನೆಗೆ ಜ್ಞಾನ ಎಂಬ ಶಕ್ತಿ ಕಾರಣಗುತ್ತದೆ ಎಂದು ಮುಂಬೈಯ ಕೆಲ್ಕರ್ ಶಿಕ್ಷಣ ಸಂಸ್ಥಾಪಕರಾದ ಡಾ. ಎಂ.ಆರ್.ಕುರುಪ ಅಭಿಪ್ರಾಯಪಟ್ಟರು.
ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ’ಉನ್ನತ ಶಿಕ್ಷಣದಲ್ಲಿ ಮೌಲ್ಯಮಾಪನ ಮತ್ತು ಮಾನ್ಯತೆಯಲ್ಲಿ ಸಮಗ್ರತೆ ಮತ್ತು ಮಾದರಿಗಳ ಸಾರ’ (Essence of Integrity and paradigm in assessment and accreditation in higher education) ಎಂಬ ವಿಷಯದ ಕುರಿತುರಡು ದಿನ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಯುವಶಕ್ತಿಯಿಂದ ಬದಲಾವಣಿ ಸಾಧ್ಯ. ವಿದ್ಯಾರ್ಥಿಗಳ ಮನೋಜ್ಞಾನ ಅರಿತುಕೊಂಡು ಪಾಠಮಾಡುವ ಕಲೆ ಶಿಕ್ಷಕರು ಹೊಂದಬೇಕು. ಸಂಶೋಧನೆ ಮತ್ತು ತಾಂತ್ರಿಕ ಶಿಕ್ಷಣದಿಂದ ಕೂಡಿದ ಉತ್ತಮ ಪಠ್ಯಕ್ರಮ, ಮೌಲ್ಯಮಾಪನ, ವಿದ್ಯಾರ್ಥಿಗಳ ಸಹಭಾಗಿತ್ವ ಮತ್ತು ಸಂವಾದದಿಂದ ಗುಣಾತ್ಮಕ ಶಿಕ್ಷಣ ಪಡೆಂiಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದರು.
ಬೆಂಗಳೂರಿನ ನ್ಯಾಕ್ ಸಹಾಯಕ ಸಲಹೆಗಾರರಾದ ಡಾ. ಡಿ.ಕೆ. ಕಾಂಬಳೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದ ಭಾಗದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಸಂಶೋಧನಾ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದು ಶ್ಲಾಘನೀಯ ಎಂದರು. ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸುರೇಶ ಜಾಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರ ಸಂಸ್ಥೆ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ದೇಶದ ಸ್ವಾತಂತ್ರ್ಯಕ್ಕೂ ಮುಂಚೆ ಆರಂಭಗೊಂಡಿದ್ದ ಈ ಸಂಸ್ಥೆ ಕಾಯಕ ದಾಸೋಹ ತತ್ವಗಳನ್ನು ಅಳವಡಿಸಿಕೊಂಡಿದೆ ಎಂದರು.
ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಡಿ.ಟಿ. ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ಭಾಗಗಳಿಂದ ಸಂಶೋಧನಾ ಲೇಖನಗಳು ಆಗಮಿಸಿವೆ. ಈ ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಎರಡು ದಿನದ ಈ ವಿಚಾರ ಸಂಕಿರಣ ಕಾರ್ಯಕ್ಕೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿರುವುದು, ಅವರ ಶೈಕ್ಷಣಿಕ ಕಾಳಜಿಯನ್ನು ಗುರುತಿಸುತ್ತದೆ ಎಂದರು.
ಶರಣಬಸವ ವಿಧ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮುಖ್ಯ ಅತಿಥಿಯಾಗಿ ಆಗಮಿಸಿದರು.
ಪ್ರೊ. ರೇಣುಕಾ ಕನಕೇರಿ ನಿರೂಪಿಸಿದ್ದರು. ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ. ಛಾಯಾ ಭರತನೂರ ಪ್ರಾರ್ಥಿಸಿದರು. ಡಾ. ಜಗದೇವಿ ಕಲಶೆಟ್ಟಿ, ವಿಧ್ಯಾರ್ಥಿನಿ ಬಸಮ್ಮ ಅತಿಥಿಯನ್ನು ಪರಿಚಯಿಸಿದ್ದರು. ಡಾ. ಶಿವರಾಜ ಶಾಸ್ತ್ರೀ ಹೆರೂರ ವಂದಿಸಿದರು. ಡಾ. ವೆಂಕಣ್ಣ ಡೊಣ್ಣೆಗೌಡರ್, ಡಾ. ಎಸ್.ಜಿ.ಡೊಳ್ಳೆಗೌಡ್. ಡಾ. ನೀಲಾಂಬಿಕಾ ಶೇರಿಕಾರ, ಡಾ. ಇಂದಿರಾ ಶೆಟ್ಟಗಾರ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಸಂಶೋಧನಾ ಲೇಖನಗಳ ಕೃತಿ ಬಿಡುಗಡೆ ಮಾಡಲಾಯಿತು.
ಮೊದಲನೇಯ ಗೋಷ್ಠಿ-ಸಂಶೋಧನೆ ಮತತು ನಾವೀನ್ಯತೆಯನ್ನು ಬಲಪಡಿಸುವುದು, ಎರಡನೇಯ ಗೋಷ್ಠಿ-ನಿಮ್ಮ ಆಧ್ಯತೆಗಳನ್ನು ನಿರ್ಧರಿಸಿ (ಐಕ್ಯೂಎಸಿಗಾಗಿ ಯಶಸ್ಸಿನ ಮಂತ್ರ), ಮೂರನೇ ಗೋಷ್ಠಿ- ಆಡಳಿತ, ನಾಯಕತ್ವ ಮತ್ತು ನಿರ್ವಹಣೆ, ಐದನೇ ಗೋಷ್ಠಿ- ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳು, ಆರನೇ ಗೋಷ್ಠಿ- ತಿಳುವಳಿಕೆ ಮಾನದಂಡ, ಏಳನೇ ಗೋಷ್ಠಿ- ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆ ಮತ್ತು ಮೌಲ್ಯಮಾಪನ ಎಂಬ ವಿಷಯಗಳ ಕುರಿತು ಎರಡು ದಿನದಂದು ಗೋಷ್ಠಿಗಳು ಜರುಗಲಿವೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…