ಶಹಾಪುರ: ಮಣಿಕಂಠನ್ ಚಾರಿಟೇಬಲ್ ಟ್ರಸ್ಟ್ ಶಹಾಪುರ ವತಿಯಿಂದ ಸುಮಾರು ಎರಡು ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಅಮ್ಮ ಕ್ಯಾಂಟೀನ್ ನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಯುವ ಮುಖಂಡರಾದ ಅಮರೇಶಗೌಡ ದರ್ಶನಾಪುರ ಉದ್ಘಾಟಿಸಿದರು.
ಗುರು ಮಣಿಕಂಠನ್ ಅವರ ತಾಯಿಯಾದ ಲಿಂಗೈಕ್ಯ ಶ್ರೀಮತಿ ಲಕ್ಷ್ಮೀ ದೇವಿಯವರ ೩೫ ನೇ ಸ್ಮರಣೋತ್ಸವದ ಅಂಗವಾಗಿ ಬಡವರಿಗೆ, ದುರ್ಬಲ ವರ್ಗದವರಿಗೆ, ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ತಾಯಿ ನೆನಪಲಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮ್ಮ ಕ್ಯಾಂಟೀನಿನ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ಉಪನ್ಯಾಸಕಿ ಲೀಲಾ ಕಾರಟಗಿ ಹೇಳಿದರು.
ಕೇವಲ ೧೦ ರೂಪಾಯಿಯಲ್ಲಿ ಊಟ ಮತ್ತು ಉಪಹಾರ ರುಚಿಕಟ್ಟಾಗಿ ಹಾಗೂ ಸ್ವಚ್ಛತೆಯಿಂದ ಅಮ್ಮಾ ಕ್ಯಾಂಟೀನ್ ಸೇವೆ ಮಾಡುತ್ತಾ ಬಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ರಕ್ತದಾನ, ಅನ್ನದಾನ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದ ವೇದಿಕೆ ಮೇಲೆ ಸೂಗುರೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು ಹಾಗೂ ಬಸವಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀಗಳು ಜೊತೆಗಿದ್ದರು.ಹಿರಿಯ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ ಕಸಾಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಡಾ ಚಂದ್ರಶೇಖರ ಸುಬೇದಾರ ಬಸನಗೌಡ ಮರ್ಕಲ್ ಅವು ಇತರರು ಉಪಸ್ಥಿತರಿದ್ದರು.
ಈ ಸಮಾರಂಭದ ಘನತೆ ಅಧ್ಯಕ್ಷತೆಯನ್ನು ಮಣಿಕಂಠನ್ ಚಾರಿಟೆಬಲ್ ಟ್ರಸ್ಟಿನ ಉಪಾಧ್ಯಕ್ಷರಾದ ರವಿ ಕಿರಣ್ ಅವರು ವಹಿಸಿಕೊಂಡಿದ್ದರು ಶ್ರೀಮತಿ ಕವಿತಾ ಪತ್ತಾರ ಪ್ರಾರ್ಥಿಸಿದರು ಗುರು ಮಣಿಕ೦ಟನ ಪ್ರಾಸ್ತಾವಿಕವಾಗಿ ಮಾತನಾಡಿದರು ಮಲ್ಲಿಕಾರ್ಜುನ್ ಚಾಮನಾಳ ಸ್ವಾಗತಿಸಿದರು ಬಸವರಾಜ ಸಿನ್ನೂರ ನಿರೂಪಿಸಿ ವಂದಿಸಿದರು.
ಉತ್ತರ ಕರ್ನಾಟಕದ ಪ್ರಖ್ಯಾತ ಕಲಾವಿದ ಸರಿಗಮಪ ಜೀ ಕನ್ನಡದ ವಿಜೇತ ಮೈಬೂಸಾಬ್ ಹಾಗೂ ಉತ್ತರ ಕರ್ನಾಟಕದ ಗಾಯಕರಾದ ಬಾಷಾ ಕಿನಾಳ ಮಲೆನಾಡಿನ ಗಾಯಕಿ ಶ್ರೀಮತಿ ಶರಾವತಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…