ಬಿಸಿ ಬಿಸಿ ಸುದ್ದಿ

ಪತ್ರಕರ್ತ, ಕವಿ, ‌ಲೇಖಕ ಮಿಗಿಲಾಗಿ ‘ಮಾನವ ಪ್ರೇಮಿ’ ಬಿ.ಎಂ.ಬಶೀರ್‌ರ ‘ಅಮ್ಮ ಹಚ್ಚಿದ ಒಲೆ’

  • ಕೆ.ಶಿವು.ಲಕ್ಕಣ್ಣವರ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘ ನೀಡುವ 2015 ರಲ್ಲಿಯೇ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಪತ್ರಕರ್ತ, ಕವಿ, ಕಥೆಗಾರ ಬಿ.ಎಂ.ಬಶೀರ್‌ರ ‘ಅಮ್ಮ ಹಚ್ಚಿದ ಒಲೆ’ ಕವನ ಸಂಕಲನಕ್ಕೆ ಮುಸ್ಲಿಮ್ ಸಂಘ ಲೇಖಕರು ಪ್ರಶಸ್ತಿಯನ್ನು ನೀಡಿ ಬಿ.ಎಂ.ಬಶೀರರಿಗೆ ನೀಡಿ ಗೌರವಿಸಿ ಬಹಳ ದಿನವಾಯಿತು.

ಈ ಬಿ.ಎಂ.ಬಶೀರರು ‘ವಾರ್ತಾಭಾರತಿ’ ದೈನಿಕದಲ್ಲಿ ಸುದ್ದಿ ಸಂಪಾದಕರಾಗಿ ಸುಮಾರು 30 ವರ್ಷಗಳಿಗೂ‌ ಹೆಚ್ಚು ಅವಧಿಯಿಂದ ಪತ್ರಕರ್ತರಾಗಿ ಗುರುತಿಸಿಕೊಂಡವರು. ಇದಕ್ಕೂ ಮೊದಲು ‘ಜನ ವಾಹಿನಿ’ಯಲ್ಲಿ ಪತ್ರಕರ್ತ, ಮುಖ್ಯವಾಗಿ ಕವಿ, ಲೇಖಕ, ಜನಸ್ಪಂದನದ ಬರಹಗಾರರಾಗಿಯೂ ಹೆಸರಾದವರು.

ಇಂತಹ ಬಿ.ಎಂ.ಬಶೀರರು ಪ್ರವಾದಿಯ ಕನಸು(ಕವನ ಸಂಕಲನ), ಬಾಳೇಗಿಡ ಗೊನೆ ಹಾಕಿತು (ಕಥಾ ಸಂಕಲನ), ಅಂಗೈಯಲ್ಲೇ ಆಕಾಶ (ಹನಿ ಹನಿ ಕಥೆಗಳು), ಬಾಡೂಟದ ಜೊತೆ ಗಾಂಧೀ ಜಯಂತಿ (ಅಂಕಣ ಬರಹ), ನನ್ನ ಮಸೀದಿ ಧ್ವಂಸಗೈದವರಿಗೆ ಕೃತಜ್ಞ -ಸೂಫಿಯ ಕಣ್ಣಲ್ಲಿ ಹನಿಗಳು (ಹನಿ ಕವಿತೆಗಳು), ಅಮ್ಮ ಹಚ್ಚಿದ ಒಲೆ (ಕವನ ಸಂಕಲನ) ಹಾಗೂ ಪರುಷಮಣಿ -ಬಿ.ಎಂ. ರಶೀದ್‌ರ ಸಮಗ್ರ ಬರಹಗಳು (ಸಂಪಾದನೆ). ಇವು ಬಿ.ಎಂ.ಬಶೀರ್‌ರ ಪ್ರಕಟಿತ ಕೃತಿಗಳು. ಈ ಬರಹಗಳ ಬಿ.ಎಂ.ಬಶೀರ್ ಅವರು ಹೆಸರಾದವರು.

ತಮ್ಮ ಸಾಹಿತ್ಯ ಸೇವೆಗೆ ಮುದ್ದಣ ಕಾವ್ಯ ಪ್ರಶಸ್ತಿ, ಮೈಸೂರಿನ ಚದುರಂಗ ಪ್ರತಿಷ್ಠಾನ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ ಹಾಗೂ ಬನ್ನಂಜೆ ರಾಮಾಚಾರ್ಯ ಪತ್ರಿಕೋದ್ಯಮ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ಬಿ.ಎಂ.ಬಶೀರ್ ‘ಇರುವೆ ಪ್ರಕಾಶನ’ದ ಸ್ಥಾಪಕರೂ ಆದವರು. ಇದೆಲಕ್ಕೂ ಮುಖ್ಯವಾಗಿ ‘ಜಾತಿ-ಮತ-ಪಂತ’ವರಿಯದ ‘ಮಾನವ ಪೇಮಿ’ ಈ ಬಿ.ಎಂ.ಬಶೀರ್ ಅಂತ‌ ಹೇಳಿ ನನ್ನ ಮಾತು‌ ಮುಗಿಸುತ್ತೇನೆ..!

ಇದನ್ನೆಲ್ಲಾ ಏಕೆ ಹೇಳುತ್ತಿದ್ದೇನೆ ಅಂದರೆ ಬಿ.ಎಂ.ಬಶೀರ್ ರ ಹುಟ್ಟಿದ ದಿನ ಜೂನ್ 20. ಇಂದು ಅವರು ಹುಟ್ಟಿದ ಹಬ್ಬ. ಅದಕ್ಕಾಗಿ ಈ ಪುಟ್ಟ ಲೇಖನವು ಒಂದು ಪುಟ್ಟ ಕೊಡುಗೆಯಾಗಿ ನೀಡುತ್ತಿದ್ದೇನೆ..!ಈ ನನ್ನಿಂದ ಈ ಪುಟ್ಟ ಕೊಡುಗೆ ಮಾತ್ರ ಕೊಡಲು ಸಾಧ್ಯ. ಇಗೋ ಬಿ.ಎಂ.ಬಶೀರ್ ಎಂಬ ಅದ್ವಿತೀಯ ಲೇಖಕ ಈ ಕಾಣಿಕೆಯನ್ನು ಸ್ವೀಕರಿಸುತ್ತೀರಿ ಎಂದು ನಂಬಿದ್ದೇನೆ..!

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago