ಬಿಸಿ ಬಿಸಿ ಸುದ್ದಿ

ಹಾವೇರಿಯಲ್ಲಿ ನಡೆದಿದೆ ಜೂಟಾಟ ಮತ್ತು ಜೂಜೂಕೋರರಿಗೆ ಸಜಾವೂ..! ಮೀಟರ್ ಬಡ್ಡಿ ಕುಳವಾದ ಪರಮೇಶ್ವರನಂತಹ ಭರ್ಜರಿ ಮಜಾವೂ!.!!

  • ಕೆ.ಶಿವು.ಲಕ್ಕಣ್ಣವರ

ಹಾವೇರಿಯಲ್ಲಿ ಕೊರೊನಾ ಬರಲಿ, ಮತ್ಯಾವುದೇ ರೋಗ ಬರಲಿ ಈ ಜೂಜು ಎನ್ನುವ ಮಹಾಮಾರಿ ಮಾತ್ರ ಯಾವಾಗಲೂ ಜೀವಂತವಾಗಿರುತ್ತದೆ. ನಿತ್ಯ ಪೊಲೀಸ್‌ರು ಓಸಿ ಅಡ್ಡೆಗಳ ಮೇಲೆ ದಾಳಿ ಮಾಡಿ, ಬಾಲ್‌ಪೆನ್, ಓಸಿ ಚೀಟಿ, ಹಣ ವಶಪಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಫ್‌ಐಆರ್ ಸಹದಾಖಲಾಗುತ್ತಾರೆ ಕೂಡ. ಆದರೂ ಸಹ ಜೂಜಾಟ ನಿಂತಿಲ್ಲ. ನಿಲ್ಲುವುದಿಲ್ಲ. ‌ಈ ಜೂಜಾಟ ಶಾಸ್ವತವಾಗಿ ಜೀವಂತವಾಗಿರುತ್ತದೆ.

ಇನ್ನು ಇಸ್ಪೇಟ್ ಜೂಜಾಟವಂತೂ ನಗರದ ಹೊರ ವಲಯಗಳಲ್ಲಿ ಎಗ್ಗಿಲ್ಲದೇ ನಡೆದೇ ಇರುತ್ತದೆ. ಈ ಜಾ(ಟಾ)ಜಾಟಕ್ಕೆ ಕೊರೊನಾ ಭಯವಾಗಲಿ,ಪೊಲೀಸ್‌ರ ಭಯವಾಗಲಿ ಇದ್ದಂತಿಲ್ಲ!.

ನಗರದಿಂದ ದೂರ ಇರುವ ಕರಡಿಗುಡ್ಡದ ಪಂಪ ಹೌಸ್ ಬಳಿ ಹಾಗೂ ಕೆಲವು ಸಮುದಾಯವ ಭವನಗಳನ್ನು ಹಾಗೂ ಕೆಲ ನಿರ್ಜನ ಪ್ರದೇಶಗಳನ್ನು ಈ ಜೂಜುಕೋರರು ತಮ್ಮ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ.

ಮೀಟರ್ ಬಡ್ಡಿ ದಂಧೆಯೂ – ಇಲ್ಲಿ ಎಗ್ಗಿಲ್ಲದೇ ಜೂಜಾಟ ನಡೆಯುತ್ತಿದೆ. ಇನ್ನೊಂದು
ಗಮನಿಸಬೇಕಾದ ಸಂಗತಿ ಎಂದರೆ ಈ ಜೂಜಾಟದ ಸಂದರ್ಭದಲ್ಲಿ ಮೀಟರ ಬಡ್ಡಿ ದಂಧೆಯ ಕುಳಗಳಿಗೆ
ಮೀಟರ್ ಬಡ್ಡಿ ವ್ಯವಹರಿಸಲು, ಹಣ ಹೂಡಲು ಸುರಕ್ಷಿತ ತಾಣಗಳಾಗಿವೆಯಂತೆ..!

ಜೂಜಾಟದ ಸ್ಥಳಗಳಿಗೆ ಹಣದ ಥೈಲಿತುಂಬಿಕೊಂಡು ಬರುವ ಮೀಟರ್ ಬಡ್ಡಿ ಕುಳಗಳು ಸ್ಥಳದಲ್ಲಿ ತಾಸಿನ ಲೆಕ್ಕದಲ್ಲಿ ಬಡ್ಡಿಗೆ ಹಣ ನೀಡುತ್ತಾರಂತೆ..! ಈ ಜೂಜಾಟದಲ್ಲಿ ಬೈಕ್ ಒತ್ತಿ ಇಟ್ಟಿದ್ದ ಯುವಕನ ತಂದೆ ಹೇಳಿದ ಪ್ರಕಾರ “ತಮ್ಮ ಮಗನಿಗೆ ಜೂಜಿನ ಚಟ ಅಂಟಿಕೊಂಡಿದ್ದು, ಮೊನ್ನೆ ನನ್ನ ಬೈಕ್ ತಗೆದುಕೊಂಡು ಹೋಗಿದ್ದ. ಮನೆಗೆ ನಡೆದುಕೊಂಡು ಬಂದಿದ್ದ. ಬೈಕ್ ಏನಾಯಿತು? ಎಂದು ಕೇಳಿದ್ದಕ್ಕೆ” “ಬೈಕ್ ಕೆಟ್ಟಿದೆ ಬೇರೆ ಕಡೆ ನಿಲ್ಲಿಸಿ ಬಂದಿದ್ದೇನೆ ಎಂದು ಸುಳ್ಳು ಹೇಳಿದ್ದ”.

ಇದರಿಂದ ಸಂಶಯಗೊಂಡು ಅವನ ಸ್ನೇಹಿತರ ಬಳಿ ವಿಚಾರಿಸಿದಾಗ “ಜೂಜಾಟದಲ್ಲಿ ಕೈಯಲ್ಲಿದ್ದ ಹಣ ಖಾಲಿಯಾದ ಮೇಲೆ ಜೂಜಿನ
ಚಟಕ್ಕಾಗಿ 30 ಸಾವಿರೂ ಬೆಲೆ ಬಾಳುವ ಬೈಕ್‌ನ್ನು 12 ಸಾವಿರ ರೂಪಾಯಿಗಳಿಗೆ ಬೇರೋಬ್ಬರ ಬಳಿ ಒತ್ತೆ ಇಟ್ಟು ಆ ಹಣವನ್ನು ಸೋತು ಹ್ಯಾಪಮೋರೆ ಹಾಕಿಕೊಂಡು ಮನೆಗೆ ಬಂದಿರುವುದಾಗಿ ತಿಳಿಯಿತು” ಎಂದು ಜೂಜಿನ ಒಳಮರ್ಮವನ್ನು ವಿವರಿಸಿದರು ಅವರು.

“ಮೂರುತಾಸಿನ ಮಟ್ಟಿಗೆ 10 ಸಾವಿರ ರೂಪಾಯಿಗಳನ್ನು ಪಡೆದರೆ, ಮೂರು ತಾಸಿನ ನಂತರ 10 ಸಾವಿರೂಗಳಿಗೆ 4 ರಿಂದ 5 ಸಾವಿರ ರೂಪಾಯಿ ಬಡ್ಡಿ ಸೇರಿಸಿ 14-15 ಸಾವಿರ ರೂಪಾಯಿಗಳನ್ನು ಕೊಡಬೇಕಂತೆ”..! “ಜೂಜುಕೋರರಿಗೆ ಈ ಮೀಟರ್ ಬಡ್ಡಿ ಕುಳಗಳು ತಾಸಿಗೆ, ದಿನಕ್ಕೆ, ವಾರಕ್ಕೆ ಮೀಟರ್ ಬಡ್ಡಿ ಆಧಾರದಲ್ಲಿ ಹಣ ನೀಡುತ್ತಾರಂತೆ”. ನಿಗದಿಪಡಿಸಿದ ಸಮಯಕ್ಕೆ ಹಣ ಕೊಡದಿದ್ದರೇ ಅದಕ್ಕೆ ಮತ್ತೇ ಬಡ್ಡಿ ಸೇರಿಸಿ “ಈ ಬಡ್ಡಿಮಕ್ಕಳು” ಹಣ ವಸೂಲಿಮಾಡುತ್ತಾರಂತೆ.

ಇದರ ಮೇಲಾಗಿ ಇವರು ಹಣ ವಸೂಲಿಗಾಗಿಯೇ ಪುಡಿರೌಡಿಗಳನ್ನು ಸಾಕಿಕೊಂಡಿರುತ್ತಾರಂತೆಯೂ..! “ಹಣಕೊಡದೇ ತಪ್ಪಿಸಿಕೊಂಡು ಓಡಾಡುವವರ ಮನೆಗಳನ್ನು ಹುಡಕಿಕೊಂಡು ಹೋಗಿ ಈ ಪುಡಿರೌಡಿಗಳ ಕಡೆಯಿಂದ ಹಣ ಪಡೆದವರ ಮನೆಯ ಬಳಿ ಗದ್ದಲ ಮಾಡಿಸುವುದು”, “ರೌಡಿಗಳ ಕಡೆಯಿಂದ ಹಲ್ಲೆ ಮಾಡಿಸುವ ಪ್ರಕರಣಗಳೂ ಸಹ ನಡೆದಿವೆ”.

“ಮರ್ಯಾದೆಗೆ ಅಂಜಿ ತಮ್ಮದಲ್ಲದ ತಪ್ಪಿಗೆ ಮಕ್ಕಳು ಮಾಡುವ ಹೊಲಸು ಕೆಲಸದ ತಪ್ಪಿಗೆ ಪಾಲಕರು ಸಾಲ-ಸೂಲಾ ಮಾಡಿ ಬಡ್ಡಿ ಮಕ್ಕಳಿಗೆ ಹಣ ನೀಡಿದ್ದಾರಂತೆ”. ಕೆಲವು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲು ಏರಿದರು ಸಹ ಅನೇಕ ಕಾರಣಗಳಿಂದಾಗಿ ಇವು ರಾಜೀಪಂಚಾಯತಿ ಮೂಲಕ ಬಗೆಹರೆದು ಬಿಡುತ್ತವೆ”..!

“ಕೆಲವು ಪ್ರಕರಣಗಳಲ್ಲಿನ ಕೊಡು-ಕೊಳ್ಳಿ ವ್ಯವಹಾರವನ್ನು ಪೊಲೀಸ್‌ರು ಮಧ್ಯ ಪ್ರವೇಶಿಸಿ ಬಗೆಹರಿಸಿದ್ದಾರಂತೆ, ಇಂತಹ ಪ್ರಕರಣಗಳೂ ಸಹ ಇದರಲ್ಲಿವೆ”..! ಇನ್ನು ಈ ಜೂಜಾಟದ ಹಗರಣದ ಜಾಲ ವಿಸ್ತರವಾಗುತ್ತಲೇ ಇದೆ. ಇರಲಿ. ಈಗ ಈ ಇದು ಮೀಟರ್ ಬಿಡ್ಡಿಯ ಅಸಲಿ ಕಹಾನಿಯಾಗಿದೆ. ಈ ಜೂಜಾಟಕ್ಕೆ ಭದ್ರತೆ ಬೇರೆ ಇರುತ್ತದಂತೆ..!

ಪೊಲೀಸ್‌ರು ದಾಳಿ ಮಾಡದಂತೆ ನೋಡಿಕೊಳ್ಳುವುದು. ಒಂದು ವೇಳೆ ಪೊಲೀಸ್‌ರು ದಾಳಿ ಮಾಡಿದರೇ ಅವರನ್ನು ಸಹ ದಾಳಿ ವೇಳೆ ಅವರ ಫೋಟೋ ತಗೆದು, ವಿಡಿಯೋ ಮಾಡಿ ನನಗೆ ಅವರು ಗೊತ್ತು, ಇವರು ಗೊತ್ತು ನಾನು ಅದಾಗಿದ್ದೇನೆ, ಇದಾಗಿದ್ದೇನೆ. ನಾವು ಪೊಲೀಸ್ ರಿಗೆ ಮಾಮುಲಿ ಕೊಡುತ್ತೇವೆ. ಅಲ್ಲಿ ಅಂದರೆ ಕ್ಲಬ್‌ಗಳಲ್ಲಿ ಇಸ್ಪೇಟ್ ಆಡುವವರನ್ನು ಹಾಗೇ ಬಿಡುತ್ತೀರಿ, ಅವರಿಂದ ಮಾಮೂಲು
ಪಡೆಯುತ್ತೀರಿ ಎಂದು ಪೊಲೀಸರನ್ನು ಬೆದರಿಸಲು ಹೋದ ಘಟನೆಗಳೂ ಸಹ ನಡೆದಿವೆಯಂತೆ..!

ಮಾಧ್ಯಮದವರನ್ನು ಕರೆಸುತ್ತೇನೆ ಎಂದು ಪೊಲೀಸ್‌ರ ಕರ್ತವ್ಯಕ್ಕೂ ಸಹ ಅಡ್ಡಿಪಡಿಸುವವರು, ಹೆದರಿಸುವವರೂ ಇದ್ದಾರಂತೆ..? ಹೀಗಾದರೇ ಹೇಗೆ ಈ ಜೂಜಾಟ ಮತ್ತು ಮೀಟರ್ ಬಡ್ಡಿ ಕುಳಿಗಳನ್ನು ನಿಯಂತ್ರಿಸುವುದು. ಅಮಾಯಕರು ಬಲಿ ಆಗದಂತೆ ತಡೆಯುವುದು….?

# ಇದು ಇರಲಿ. ಈ ನಮ್ಮ ಸುರಕ್ಷಿತ ಸಮಾಜದಲ್ಲಿ ಸುಶಿಕ್ಷಿತರೇ ಈ ಮೀಟರ್ ಬಡ್ಡಿ ಕುಳಗಳಿಗೆ ಬಲಿಯಾಗಿರುವುದೂ ಒಂದು ಕಡೆ ಇದೆ. ಈ ಮೀಟರ್ ಬಡ್ಡಿ ಕುಳಗಳ ಸಮೀಪ ಹೋಗುವಂತಿಲ್ಲ. ಏನೋ ತೊಂದರೆ ಇದೆ ಎಂದು ನಮ್ಮ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಹಳ್ಳಿಗಳಲ್ಲಿ ವ್ಯಾಪಿಸಿರುವ ಈ ಮೀಟರ್ ಬಡ್ಡಿ ಹಾವಳಿಯ ಕುಳಗಳ ಬಳಿ ಹೋದರೆ ಮುಗಿಯಿತು ಹಾಗೇ ಹೋದವನ ಸ್ಥಿತಿಯು..! ಅಷ್ಟೇ ಎಲ್ಲವೂ ಈ ಮೀಟರ್ ಬಡ್ಡಿ ಕುಳಗಳಿಗೆ ಬಲಿಯಾಗಿಬಿಡುತ್ತದೆ.

ಒಂದು ಉದಾಹರಣೆ ಹೇಳುತ್ತೇನೆ ಮತ್ತು ಇದರ ಜೊತೆಗೆ ಇದೇ ಮೀಟರ್ ಬಡ್ಡಿಯ ಚೀಟಿಯನ್ನೂ ಅಂಟಿಸುತ್ತೇನೆ. ರಮೇಶ್ ಎಂಬ ಸುಶಿಕ್ಷಿತ ತಮ್ಮ ಅಳಿಯ ರಾಮನೆಂಬುವವನಿಗೆ ಬಡ್ಡಿ ಸಾಲ ಕೇಳಿದ. ಮಾವ ನನಗೆ ಅರ್ಜೆಂಟಿದೆ ನನಗೆ ಎಲ್ಲಿಯಾದರೂ ಬಡ್ಡಿ ಆಗಲಿ, ಬಡ್ಡಿ ಸಾಲ ಕೊಡಿಸೆಂದು. ಆದರೆ ಆ ರಾಮನು ಬಡ್ಡಿ ಎಂದರೆ ನೂರಕ್ಕೆ 3 ರೋ ಅಥವಾ 4 ಕೋ ಅಥವಾ ಹೋಗಲಿ 5 ಪರ್ಶೆಂಟ್ ಬಡ್ಡಿ ಎಂದು ತಿಳಿದಿದ್ದನು ರಾಮನು.

ಆ ರಮೇಶ್ ಅಂದರೆ ಬಡ್ಡಿ ಸಾಲ ತೆಗೆದುಕೊಂಡ ರಾಮನ ಮಾವ ಏನೂ ಈ ಮೀಟರ್ ಬಡ್ಡಿ ದರವನ್ನು ಅರಿಯದವನು. ಅವನು ಬಹಳವೆಂದರೆ ಈ ಬಡ್ಡಿ 2 ಅಥವಾ 3 ಪರಸೆಂಟ್ ಇರಬಹುದೆಂದು ತಿಳಿದಿದ್ದ. ಹಾಗಾಗಿಯೇ ಅವನ ಅಂದರೆ ರಮೇಶ್ ನ ಹೊಲ ಮಾಡುವ ಅಂದರೆ ಈ ರಮೇಶ್ ನ ಹೊಲ ಲಾವಣಿ ಹಾಕಿಕೊಂಡ ( ಹೆಸರು ಬದಲಿಸಿದೆ ) ಪರಮೇಶ್ವರ ನ ಬಳಿ ಬಡ್ಡಿ ಸಾಲವನ್ನು ಕೊಡಿಸಿದ. ಈ ಪರಮೇಶ್ವನ ಮೀಟರ್ ಬಡ್ಡಿ ದರದ ಸಾಲ ಮೊದಲೇ ಗೊತ್ತಾಗಿದ್ದರೆ ಆ ರಮೇಶ್ ಸಾಲದ ಮಾತನ್ನು ಆಡುತ್ತಿರಲಿಲ್ಲ. ಒಟ್ಟಾರೆ ಬಡ್ಡಿ ಸಾಲವನ್ನು ತಮ್ಮ ಅಳಿಯ ರಾಮನಿಗೆ ಕೊಡಿಸಿದ. ಆದರೆ ಅದು ಮೀಟರ್ ಬಡ್ಡಿಯಾಗಿತ್ತು. ಆ ಮೀಟರ್ ಬಡ್ಡಿಯ ಚೀಟಿಯನ್ನು ಸ್ಯಾಂಪಲ್ ಆಗಿ ಒಂದನ್ನು ಇಲ್ಲಿ ಲಗತ್ತಿಸಿದ್ದೇನೆ.

ಆಯಿತು ಆ ರಮೇಶ್ ತಮ್ಮ ಅಳಿಯ ರಾಮನಿಗೆ ಈ ಹೊಲ ಮಾಡುವ ಮತ್ತು ಮೀಟರ್ ಬಡ್ಡಿ ದಂಧೆ ನಡೆಸುವ ಪರಮೇಶ್ವರನಿಂದ ಸಾಲ ಕೊಡಿಸಿದ. ಆಯಿತು ಆ ರಮೇಶ್ ನ ಅಳಿಯ ರಾಮನು ಒಂದು ವಾರದಲ್ಲಿಯೇ ಸಾಲವನ್ನು ತೀರಿಸಿದ್ದರೆ ಸದ್ಯ ಆಗಿರುವ ಆಘಾತವಾಗುತ್ತಿರಲಿಲ್ಲ. ಈ ರಮೇಶ್ ನೂ ಸಾಲವನ್ನು ಮರಳಿ ಕೊಟ್ಟಿದ್ದರೆ, ನಿರುಂಬಳವಾಗಿರುತ್ತಿದ್ದ ರಮೇಶ್.

ಆದರೆ ರಮೇಶ್ ನ ಅಳಿಯ ರಾಮ ಮಾತ್ರ ತಾನು ಹೇಳಿದ ಸಮಯಕ್ಕೆ ಸಾಲವನ್ನು ತೀರಿಸಲಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ರಮೇಶ್ ನ ಹೊಲ ಮಾಡುವ ಮತ್ತು ಮೀಟರ್ ಬಡ್ಡಿ ದಂಧೆ ನಡೆಸುವ ಪರಮೇಶ್ವರ ಇದನ್ನೇ ಬಂಡವಾಳ ಮಾಡಿಕೊಂಡು ರಮೇಶ್ ನನ್ನನ್ನು ತಡಕಾಯಿಸಿಕೊಂಡ. ಅಂದರೆ ರಮೇಶ್ ನಿಗೆ ಇಲ್ಲದ ಉಪಟಳ ಕೊಡತೊಡಗಿದ. ಅದು ಹೇಗೋ ಅಂತೂ ರಮೇಶ್ ನ ಅಳಿಯ ಮುಂದೆ ಅಂದರೆ 45 ದಿನಗಳ ಬಳಿಕ ಆ ಸಾಲದಲ್ಲಿ ಅಂದರೆ ರಾಮ ತೆಗೆದುಕೊಂಡು ಹೋದ ತನ್ನ ಸಾಲವನ್ನು 60,000 ರೂಪಾಯಿ ಕೊಟ್ಟ. ಮೇಲೆ 5 ಸಾವಿರ ರೂಪಾಯಿ ಹಣ ಕೊಟ್ಟ. ಸರಳ ಬಡ್ಡಿ ಅಂದರೆ ಮಾಮೂಲಾಗಿರುವ 3 ಅಥವಾ 4 ಪರಸೆಂಟ್ ಸಾಲವನ್ನು ತೀರಿಸಿದ. ಆದರೆ ರಮೇಶ್ ನ ಹೊಲ ಮಾಡುವ ಪರಮೇಶ್ವರನಿಗೆ ಆ ಸಾಲ ಸಾಕಾಗಿಲಿಲ್ಲ.

ಅವನ ಅಂದರೆ ಪರಮೇಶ್ವರನ ಮೀಟರ್ ಬಡ್ಡಿ ದಂಧೆಗೆ ಆ ಸಾಲ ನೀಗಲಿಲ್ಲವಂತೆ. ಅದರಿಂದ ಸಾಲ ಕೊಡಿಸಿದ ರಮೇಶ್ ನಿಗೆ ವಿಪರೀತವಾಗಿ ಮಾನಸಿಕ ಕಿರುಕುಳ ನೀಡತೊಡಗಿದ. ರಮೇಶ್ ನೂ ಆಗಲಿ ಎಂದು ತಡೆದುಕೊಂಡ. ಏಕೆಂದರೆ ರಮೇಶ್ ಸಾಲ ಕೊಡಿಸಿದ್ದೇ ತಪ್ಪಾಗಿತ್ತು. ಆ ರಮೇಶ್ ನಿಗೆ ಈ ಪರಮೇಶ್ವರನ ಮೀಟರ್ ಬಡ್ಡಿ ದಂಧೆಯೂ ಗೊತ್ತಿರಲಿಲ್ಲ. ಅವನೂ ಬಡ್ಡಿ ಅಂದರೆ 2 ಅಥವಾ 3 ಪರಸೆಂಟ್ ದರವೆಂದು ತಿಳಿದಿದ್ದ. ಆದರೆ ಈ ಮೀಟರ್ ಬಡ್ಡಿ ದಂಧೆಯ ಬಗೆಗೆ ಗೊತ್ತಿರಲಿಲ್ಲ. ಅಂದರೆ ದಿನಕ್ಕೆ 60000 ರೂಪಾಯಿಗೆ ಹತ್ತರಿಂದ ಹದಿನೈದು ಪರಸೆಂಟ್ ಬಡ್ಡಿ ಎಂದು ಗೊತ್ತಿರಲಿಲ್ಲ. ಈ ಮೀಟರ್ ಬಡ್ಡಿಗೆ ಒಪ್ಪದೇ ಅವನ ಅಂದರೆ ರಮೇಶ್ ನ ಅಳಿಯ ರಾಮ ಕೊಟ್ಟಿದ್ದು ಸರಳ ಬಡ್ಡಿ ದರದಲ್ಲಿ. ಮುಂದೆ ಆ ರಾಮ ಎಲ್ಲವನ್ನೂ ತನ್ನ ಮಾವ ರಮೇಶ್ ನ ತಲೆಗೆ ಕಟ್ಟಿದ.

ತಾನು ಮಾಡಿದ ತಪ್ಪಿಗೆ ರಮೇಶ್ ಸಾಕಷ್ಟು ತೊಂದರೆ ಅನುಭವಿಸತೊಡಗಿದ. ಹೀಗಿದೆ ಮೀಟರ್ ಬಡ್ಡಿ ದಂಧೆಯೂ ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನಲ್ಲಿ. ಅದೂ ಆ ಒಂದು ಹಳ್ಳಿಯಲ್ಲಿ. ಮುಂದೆ ಆ ಹಳ್ಳಿಯ ಮತ್ತು ಮೀಟರ್ ದಂಧೆಕೋರರ ಹೆಸರು ಸಮೇತ ಪೊಲೀಸ್ ಅಧಿಕಾರಿಯಾದ ಹನುಮಂತರಾಯ ಅವರಿಗೆ ಸಾಕ್ಷಿ ಸಮೇತ ರುಜುವಾತು ಪಡಿಸಲಿದ್ದೇನೆ..!

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago