ಶಹಾಬಾದ: ನಗರದ ಹಳೆಶಹಾಬಾದನಲ್ಲಿ ೧೪ ವರ್ಷದ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬಳು ಪತ್ತೆಯಾಗಿ ಪೊಲೀಸರ, ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಹಾಗೂ ಮುಂಬಯಿನ ಶ್ರದ್ಧಾ ರೇಗುಲೇಷನ್ ಫೌಂಡೇಷನ್ ಸಿಬ್ಬಂದಿಗಳ ಸಮ್ಮುಖದಲ್ಲಿ ಮರಳಿ ಮನೆಗೆ ಸೇರಿದಂತ ಘಟನೆ ಸೋಮವಾರದಂದು ನಡೆದಿದೆ.
ಸುಮಾರು ೧೪ ವರ್ಷದ ಹಿಂದೆ ನಗರದ ಹಳೆಶಹಾಬಾದ ಸಂಗೀತಾ ದಾನಪ್ಪ ದಾನಪ್ಪಗೋಳ ನಾಪತ್ತೆಯಾಗಿದ್ದಳು.ಅಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು.ಎಲ್ಲಾ ಕಡೆ ಹುಡುಕಲಾಗಿತ್ತು.ಆದರೂ ಪತ್ತೆಯಾಗಿರಲಿಲ್ಲ. ಮಾನಸಿಕ ಅಸ್ವಸ್ಥೆಯಾದ ಇವಳನ್ನು ಕಳೆದ ೮ ತಿಂಗಳ ಹಿಂದೆ ಮುಂಬಯಿಯಲ್ಲಿ ಅಲೆದಾಡುತ್ತಿರುವುದನ್ನು ಗಮನಿಸಿ, ಪೊಲೀಸರು ಶ್ರದ್ಧಾ ರೇಗುಲೇಷನ್ ಫೌಂಡೇಷನ್‌ಗೆ ಒಪ್ಪಿಸಿದರು.
ಶ್ರದ್ಧಾ ರೇಗುಲೇಷನ್ ಫೌಂಡೇಷನ್‌ಗೆ ಮುಖ್ಯಸ್ಥರಾದ ಡಾ.ಭರತ್ ವಟವಾಣಿ ಅವರು ಮಾನಸಿಕ ರೋಗಿ ತಜ್ಞರಾಗಿದ್ದು,ಅವಳನ್ನು ಚಿಕಿತ್ಸೆಗೆ ಒಳಪಡಿಸಿದ್ದಾರೆ.ಸುಮಾರು ಏಳೆಂಟು ತಿಂಗಳಿನಿಂದ ಉಪಚರಿಸಿ ಎಲ್ಲಿಂದ ಬಂದಿರುವೆ ಎಂದು ಕೇಳಿದ್ದಾರೆ. ಅವಳು ಹದಿನಾಲ್ಕು ವರ್ಷದ ಹಿಂದೆ ಮನೆಯಿಂದ ತಿರುಪತಿಗೆ ಬಂದಿದ್ದೆನೆ.ಅಲ್ಲಿ ಮದುವೆಯಾಗಿದ್ದೆನೆ.ಅಲ್ಲದೇ ಒಬ್ಬ ೮ ವರ್ಷದ ಗಂಡು ಮಗುವಿದೆ ಎಂದು ಹೇಳಿದ್ದಾಳೆ.
ತಕ್ಷಣವೇ ಅವಳನ್ನು ತಿರುಪತಿಗೆ ಕರೆದುಕೊಂಡು ಬಂದಿದ್ದಾರೆ.ಅಲ್ಲದೇ ಅವರ ಸಂಬಂಧಿಸಿದವರ ಬಗ್ಗೆ ವಿಚಾರಿಸಿದರೂ ಪತ್ತೆಯಾಗಿಲ್ಲ.ಮತ್ತೆ ಅವಳ ಬಗ್ಗೆ ವಿಚಾರಿಸಿದಾಗ ನನ್ನ ತವರೂರು ಶಹಾಬಾದ ಎಂದು ಹೇಳಿದ್ದಾಳೆ ಹೊರತು ಎಲ್ಲಿ ಮನೆಯಿದೆ ಎಂದು ಹೇಳದಿರುವುದರಿಂದ ಶಹಾಬಾದ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.ಅಲ್ಲಿಯೂ ಸರಿಯಾದ ಮಾಹಿತಿ ತಿಳಿಯದಿರುವುದರಿಂದ ಲಿಂಗಾಯತ ಸಮಾಜದವರಾಗಿದ್ದರಿಂದ ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ ಅವರನ್ನು ಕರೆಯಿಸಿ ಇವರ ವಿವರವಾದ ಮಾಹಿತಿಯನ್ನು ಕಲೆ ಹಾಕಿ ತವರು ಮನೆಯವರನ್ನು ಪತ್ತೆ ಹಚ್ಚಿ, ಕುಟುಂಬಸ್ಥರಿಗೆ ಮನವೊಲಿಸಿ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದಹುಸೇನ ಪಾಷಾ, ಶಿವರಾಜ, ಪ್ರೇಮಲತಾ,ಶರಣಯ್ಯಸ್ವಾಮಿ (ಎಮ್.ಆರ್) ಇತರರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…