’ಸಂಗಾತಿಯನ್ನು ಆಯ್ಕೆ ಮಾಡುವಾಗ ಮಗಳು ನಿಮ್ಮ ಮಾತು ಕೇಳದಿದ್ದರೆ ಆಕೆಯ ಕೈಯೋ ಕಾಲನ್ನೋ ಮುರಿದು ಬಿಡಿ’ ಎಂಬ ಮಾತನ್ನು ಕೊರಟಗೆರೆ ತಾಲೂಕು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯವಾದ ಸಲಹೆಯನ್ನು ನೀಡಿದ್ದಾರೆ. ಎಂಥೆಂಥ ಮಹಾಪುರುಷರು ವೀರಶೈವರಲ್ಲಿದ್ದಾರೆ ಎಂಬುದಕ್ಕೆ ಈ ಪುಣ್ಯಾತ್ಮನ ಮಾತು ಸಾಕ್ಷಿಯಾಗಿದೆ. ಸಕಲ ಜೀವಪ್ರೇಮಿಯಾಗಿರಿ ಎಂದು ಬಸವಣ್ಣನವರು ಸಾರುತ್ತ ಬಂದಿದ್ದರೆ , ಹಾರುವರ ಪ್ರಭಾವಕ್ಕೆ ಒಳಗಾದ ವೀರಶೈವವಾದಿಗಳು ಮನುವಾದಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬಿಟ್ಟಿದ್ದಾರೆ.
’ಬ್ರಾಹ್ಮಣರಿಗಿಂತಲೂ ಬ್ರಾಹ್ಮಣ್ಯ ಹೊಂದಿದ ವ್ಯಕ್ತಿ ತುಂಬಾ ಅಪಾಯಕಾರಿ’ ಎಂಬ ಮಾತು ಸತ್ಯ.
ವೈದಿಕರಿಗಿಂತಲೂ ವೈದಿಕತ್ವದ ಬಗೆಗೆ ಆಸಕ್ತಿ ಹೊಂದಿದ ನಾನು ಅವರಿಗಿಂತಲೂ ಒಂದು ಕೈ ಮಿಗಿಲು ಎಂಬ ಧೋರಣೆಗಳುಳ್ಳ ವೀರಶೈವ ಮಠಾಧೀಶರು ತಮ್ಮ ತಲೆಯಲ್ಲಿ ವೈದಿಕತ್ವದ ಕಸವನ್ನು ತುಂಬಿಕೊಂಡು ಬಗ್ಗಡಗೊಂಡಿದ್ದಾರೆ. ಹೀಗಾಗಿಯೆ ಈ ವೀರಶೈವವಾದಿ ಮಠಾಧಿಪತಿಗಳು ನಾವೂ ಹಿಂದುಗಳು ಎಂದು ಹೇಳುತ್ತ ನಡೆದಿದ್ದಾರೆ. ಬಹುತೇಕ ವೀರಶೈವ ಪೀಠದಲ್ಲಿ ಪೀಠಾಧಿಕಾರಿಯಾಗಿ ಅಮರಿಕೊಂಡಿರುವ ಮಠಾಧೀಶರಿಗೆ ಯಾವುದೆ ತಿಳುವಳಿಕೆ ಇಲ್ಲ. ಸಂಸ್ಕೃತದ ಸುಳ್ಳು ಸೊಟ್ಟುಗಳ ನಾಲ್ಕಾರು ಮಂತ್ರಗಳು ಬಾಯಿಪಾಠ ಮಾಡಿಕೊಂಡು ಕಂಡ ಕಂಡದಲ್ಲಿ ತಮ್ಮ ದಡ್ಡ ಭಕ್ತರ ಮುಂದೆ ಅವನ್ನೇ ಹೇಳಿ ತಮ್ಮ ಪ್ರೌಢಿಮೆ ಮೆರೆಯುತ್ತಾರೆ. ಇಂಥವರಿಗೆ ಸಾಮಾನ್ಯ ಜ್ಞಾನವೂ ಗಗನ ಕುಸುಮ.
ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮಹಿಳೆಯನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ. ಪ್ರೀತಿಯನ್ನು ಬಿಟ್ಟು ಜೀವನ ಮಾಡಲು ಯಾರಿಗಾದರೂ ಸಾಧ್ಯವೆ ? ನಮ್ಮೆಲ್ಲರ ಜನನಕ್ಕೆ ಮೂಲ ಕಾರಣ ಮಾಯೆ (ಪ್ರೀತಿ), ನಮ್ಮ ಮಗಳಾಗಿ ಜನಿಸುವವಳು ಹೆಣ್ಣೆ, ನಮ್ಮೊಂದಿಗೆ ಜೀವ ಪಥದಲ್ಲಿ ಹೆಜ್ಜೆ ಹಾಕುವವಳು ಹೆಣ್ಣೆ. ಇವಳನ್ನು ಬಿಟ್ಟು ಇರಲು ಸಾಧ್ಯವೆ ಇಲ್ಲ ಎಂದು ಹೇಳಿ ಹೆಣ್ಣನ್ನು ಗೌರವಾರ್ಹ ವ್ಯಕ್ತಿಯಾಗಿ ಕಂಡಿದ್ದಾರೆ.
ಹೆಣ್ಣು ಕೇವಲ ಭೋಗದ ವಸ್ತುವಾಗಿ ಕಂಡ ಸನಾತನ ಪರಂಪರೆಯ ಜನ ಆಕೆಯನ್ನು ಸತಿ ಸಹಗಮನಕ್ಕೆ ಹಿಂದೆ ದೂಡಿದ್ದರು. ದೇವರ ಹೆಸರಿನ ಮೇಲೆ ಆಕೆಯನ್ನು ಬಸವಿಗೆ ಬಿಟ್ಟಿದ್ದರು. ಕೆರೆಗೆ ಆಹಾರವಾಗಿಯೂ ಹೆಣ್ಣನ್ನೆ ಬಲಿಕೊಟ್ಟರು. ಹೆಣ್ಣು ಕನಿಷ್ಠ. ಗಂಡು ಶ್ರೇಷ್ಠ ಎಂಬ ಚಿಂತನೆಯೆ ಪ್ರಜಾಪ್ರಭುತ್ವ ವಿರೋಧಿ. ಬ್ರಾಹ್ಮಣಶಾಹಿ ವ್ಯವಸ್ಥೆಯಲ್ಲಿ ಇಂದಿಗೂ ಮಹಿಳೆ ಪೂಜೆಯ ಹಕ್ಕನ್ನು ನಿರಾಕರಿಸಲಾಗಿದೆ. ಮಹಿಳೆ ಮುಟ್ಟಾಗುತ್ತಾಳಾದ್ದರಿಂದ ಆಕೆ ಕೀಳು ಎಂಬುದು ಪ್ರಚಲಿತದಲ್ಲಿದೆ. ಹಲವಾರು ದೇವಸ್ಥಾನದಲ್ಲೂ ಮಹಿಳೆಯರನ್ನು ನಿರಾಕರಿಸಲಾಗಿದೆ. ಆದ್ದರಿಂದಲೆ ನಮ್ಮ ದೇಶದಲ್ಲಿ ಹೆಣ್ಣು ಭ್ರೂಣದ ಹತ್ಯೆ ನಿರಾಂತಕವಾಗಿ ನಡೆದೆ ಇದೆ.
ಕೊರಟಗೆರೆಯ ಈ ಮಠಾಧೀಶನ ತಲೆಯಲ್ಲಿರುವುದು ವೈದಿಕ ಮಿದುಳು. ವೈದಿಕ ಮಿದುಳು ಸಹಜವಾಗಿಯೆ ಅಸಮತೋಲನವಾಗಿರುತ್ತದೆ. ಅದಕ್ಕೆ ಯೋಚಿಸುವ ಶಕ್ತಿ ಇರೋದಿಲ್ಲ. ತಾನಷ್ಟೇ ಶ್ರೇಷ್ಠ ಉಳಿದವರು ಕನಿಷ್ಠ ಎಂಬ ಭ್ರಮೆ ಹೊತ್ತುಕೊಂಡಿರುತ್ತದೆ. ಮಹಿಳೆ ಅಂದರೆ ಅದೊಂದು ಉಪಯೋಗಿಸಿ ಬಿಸಾಡುವ ವಸ್ತು ಮಾತ್ರವಾಗಿರುತ್ತದೆ. ಆದ್ದರಿಂದಲೆ ಹೆಣ್ಣು ನಿಮ್ಮ ಮಾತು ಕೇಳದೆ ಹೋದರೆ ಅವಳ ಕೈಯನ್ನೋ- ಕಾಲನ್ನೋ ಕತ್ತರಿಸಿ ಎಂದು ಈ ಪುಣ್ಯಾತ್ಮ ಗುರು ತನ್ನ ಭಕ್ತರಿಗೆ ಅಪ್ಪಣೆ ಕೊಡಿಸಿದ್ದಾನೆ. ಮೊದಲೆ ತಿಳುವಳಿಕೆಯ ಕೊರತೆಯಿಂದ ಮೂರಾಬಟ್ಟೆಯಾದ ಭಕ್ತರೆಂಬ ತಲೆ ಹಿಡುಕರಿಗೆ ಗುರುವಿನ(?) ಈ ಮಾತುಗಳು ಅತ್ಯಂತ ಪ್ರೇರಕ ಅನಿಸುತ್ತವೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹಾಡುತ್ತ ಗುರುವಿನ ಮಾತಿನ ಮಾರ್ಗದಲ್ಲಿ ನಡೆಯುತ್ತ ಹೋದರೆ ಒಂದೊಂದು ಕುಟುಂಬವೂ ತಮ್ಮ ಮನೆಯಲ್ಲಿಯೆ ಸ್ಮಶಾನವನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ.
ಅರಿವಿಲ್ಲದೆ ನಿಮ್ಮ ಮನೆಯ ಹೆಣ್ಣು ಮಗು ಜಾರುತ್ತಿದ್ದರೆ ಆಕೆಗೆ ವಿವೇಕ ನೀಡಿ, ಸಂಯಮದಿಂದ ವರ್ತಿಸುವಂತೆ ತಿಳಿ ಹೇಳಬೇಕು. ಸಾಂಸಾರಿಕ ಜೀವನವೆಂಬದು ಸಂತಸದ ಮಾರ್ಗವಾಗಬೇಕಾದರೆ ಸತಿಪತಿಗಳೊಂದಾಗಿ ನಡೆದಾಗಲೆ ಹಿತವಾಗಬಲ್ಲುದು ಎಂಬುದನ್ನು ಅವರಿಗೆ ಮನದಷ್ಟು ಮಾಡಿಸಬೇಕು. ತಮ್ಮ ಹಾಗೂ ಆ ಹುಡುಗನ ಕುಟುಂಬದ ರೀತಿ ರಿವಾಜುಗಳು ಹೊಂದಿಕೆಯಾಗಬಲ್ಲವೆ ? ಎಂಬುದನ್ನು ಇಣುಕಿ ನೋಡಲು ಹಚ್ಚಬೇಕು.
ಇಂಥ ಮನ ಬದಲಾವಣೆಯ ಚಿಂತನೆಯನ್ನು ಬಿಟ್ಟು, ಆ ಹೆಣ್ಣು ಮಗುವಿನ ಕಾಲೋ ಕೈಯೋ ತೆಗೆಯಿರಿ. ಅವಳನ್ನು ಶಾಶ್ವತ ಅಂಗವೈಕಲ್ಯಕ್ಕೆ ದೂಡಿ ಎಂಬ ವಿವೇಕರಹಿತ ವೀರಭದ್ರಶಿವಾಚಾರ್ಯನನ್ನು ಯಾವುದೆ ಮುಲಾಜು ಇಲ್ಲದೆ ಜೈಲಿಗೆ ಅಟ್ಟಬೇಕು. ಹಿಂಸೆಯನ್ನು ಪ್ರಚೋದಿಸುವ ಇಂಥ ಮಠಾಧೀಶ ಇದ್ದರೆಷ್ಟು ? ಬಿಟ್ಟರೆಷ್ಟು ! ಇನ್ನಾದರೂ ವೀರಶೈವ ವಾದಿಗಳು ಇಂಥ ಅಯೋಗ್ಯ ಮಠಾಧೀಶರ ಬೆನ್ನುಬಿದ್ದು ತಮ್ಮನ್ನು ತಾವು ಹಾಳು ಮಾಡಿಕೊಳ್ಳದೆ, ತಮ್ಮ ಬದುಕನ್ನು ಶರಣರ ವಚನಗಳ ಹಿನ್ನೆಲೆಯಲ್ಲಿ ಕಟ್ಟಿಕೊಳ್ಳಬೇಕಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…