ಅಂಕಣ ಬರಹ

ಅರಸೊತ್ತಿಗೆ ತೊರೆದು ಕಲ್ಯಾಣಕ್ಕೆ ಬಂದ ಸಕಲೇಶ ಮಾದರಸ

ಸಾಧುಸಾಧಲೆ ಬಸವ, ಓದುಗಲಿಯಿತು ಜನವು
ಹೋದಹೋದಲ್ಲಿ ಹೊಸಮಾತು ಕೇಳಿದವು
ಮೇದಿನಿಗೆಬಂತು ಹೊಸ ಬೆಳಕು

ಈ ಜನಪದ ತ್ರಿಪದಿ ಬಸವಣ್ಣನವರ ಆಗಮನದಿಂದ ಭಕ್ತಿಗೆ ಬಣ್ಣವೇರಿತ್ತು. ಮೇದಿನಿಯಲ್ಲಿ ಬೆಳಕು ಹರಡಿತ್ತು ಎಂಬುದನ್ನು ಸೂಚಿಸುತ್ತದೆ. ಬಸವಣ್ಣನವರ ಹಿರಿಯ ಸಮಕಾಲೀನನಾದ ಸಕಲೇಶ ಮಾದರಸ ಕಲ್ಲುಕುರಿಕೆಯ ಅರಸ. ಮಾದರಸ ಶ್ರೇಷ್ಠ ಸಂಗೀತಜ್ಞಾನಿಯಾಗಿದ್ದ. ವೀಣಾದಿ ಅನೇಕ ವಾದ್ಯಗಳನ್ನು ನುಡಿಸುವಲ್ಲಿ ನಿಪುಣನಾಗಿದ್ದ. “ಸಕಳೇಶ್ವರದೇವ” ಎಂಬ ಅಂಕಿತದಲ್ಲಿ ಇವರು ರಚಿಸಿದ ೧೩೩ ವಚನಗಳು ದೊರೆತಿವೆ.

ಬಸವಣ್ಣನ ಭಕ್ತಿ ಪ್ರಸಾದವ ಕೊಂಡೆನಯ್ಯ, ಚನ್ನಬಸವಣ್ಣವರ ಜ್ಞಾನ ಪ್ರಸಾದವ ಕೊಂಡೆನಯ್ಯ, ಪ್ರಭುದೇವರ ಬಯಲ ಪ್ರಸಾದವ ಕೊಂಡೆನಯ್ಯ, ಮಡಿವಾಳಯ್ಯನ ಕರುಣ ಪ್ರಸಾದವ ಕೊಂಡೆನಯ್ಯ, ಸಿದ್ಧರಾಮಯ್ಯನ ನಿರ್ಮಲ ಪ್ರಸಾದವ ಕೊಂಡೆನಯ್ಯ, ಮರುಳಶಂಕರ ದೇವರ ಪ್ರಸನ್ನ ಪ್ರಸಾದವ ಕೊಂಡೆನಯ್ಯ, ಏಳ್ನೂರೆಪ್ಪತ್ತು ಮರಗಣಂಗಳ ಪರಮ ಪ್ರಸಾದವ ಕೊಂಡು ಬದುಕಿದೆನಯ್ಯ ಸಕಳೇಶ್ವರ ಎಂದು ಹೇಳುವ ಮೂಲಕ ಅನುಭವ ಮಂಟಪದಲ್ಲಿನ ಅನುಭವಾಮೃತದ ಮಹತ್ವವನ್ನು ಸಾರಿದ್ದಾರೆ.

ಸಕಲೇಶ ದೊರೆ ಮಲ್ಲಿಕಾರ್ಜುನನ ಮಗ. ರಾಜ್ಯಭಾರವನ್ನು ತನ್ನ ಮಗ ಸಕಲೇಶನಿಗೆ ಒಪ್ಪಿಸಿ ಶ್ರೀಶೈಲದ ಬೆಟ್ಟಕ್ಕೆ ಹೋಗಿ ಮೌನವನ್ನು ಮಾಡುವ ನಿರ್ಧಾರ ಮಾಡಿ, ಅರಸೊತ್ತಿಗೆ, ಶ್ರೀಮಂತಿಕೆ ಮಗನಿಗೆ ಕೊಟ್ಟು ದೂರ ಹೋದವರು. ಹೀಗೆ ರಾಜ್ಯಭಾರ ಮಾಡುವಾಗ ಅರಮನೆಯ ಅಂಗಳಲ್ಲಿ ಬೆನ್ನು ಬಾಗಿ ಬೆತ್ತ ಹಿಡಿದು ಓಡಾಡುತ್ತಿದ್ದ ಮುದುಕಿ, “ರಾಜನ್ ಮನುಷ್ಯ ಸಂತೋಷವಾಗಿರಬೇಕು” ಎಂದು ಮಾರ್ಗದರ್ಶನ ಮಾಡಿದಳು. ಅರಸ ಅದೆಲ್ಲಿದೆ? ಎಂದು ಕೇಳಿದ. ಆಗ ಆ ಮುದುಕಿ ಸಂತೋಷ ಎಂಬುದು ಹೊರಗಿಲ್ಲ. ಅದು ನಿನ್ನೊಳಗಿದೆ ಎಂದು ಹೇಳಿದಳು. ಅದನ್ನು ಹೇಗೆ ಪಡೆಯಬೇಕು? ಎಂದು ಅರಸ ಕೇಳಿದಾಗ, ಅಂತರಂಗದಲ್ಲಿದೆ. ಅದನ್ನು ಹುಡುಕು ಎಂದು ಹೇಳಿ ಸಾವನ್ನಪ್ಪುತ್ತಾಳೆ.

ಇದನ್ನೇ ಅಕ್ಕಮಹಾದೇವಿ “ಅಗಸ ನಿರೊಳಗಿರ್ದು ಬಾಯಾರಿ ಸತ್ತಂತೆ ತಮ್ಮೊಳಗಿರುವ ಘನವನರಿಯರು ಚನ್ನ ಮಲ್ಲಿಕಾರ್ಜುನದೇವ” ಎಂದು ಹೇಳುತ್ತಾಳೆ. ಇದೇ ದಾಟಿಯಲ್ಲಿ “ನನ್ನೊಳಗೆ ನಾನು ತಿಳಕೊಂಡೆ. ನನಗೆ ಬೇಕಾದ ಗಂಡನ ಪಡೆದುಕೊಂಡೆ” ಎಂದು ಶಿಶುವಿನಾಳ ಶರೀಫರು ಸಾಹೇಬರು ಹೇಳುತ್ತಾರೆ. ನನ್ನ ತಂದೆಯೂ ಇದರಲ್ಲಿ ಸುಖವಿಲ್ಲವೆಂದು ಬಿಟ್ಟು ಹೊರಟು ಹೋಗಿದ್ದಾರೆ. ನಾನು ಇದನ್ನು ಪಡೆಯಬೇಕು ಎಂದು ಸಿಂಹಾಸನ ತ್ಯಾಗ ಮಾಡಿದ ಸಕಲೇಶ ಮಾದರಸ ಶರಣ ಸಂಸ್ಕೃತಿಯೆಡೆಗೆ ವಾಲುತ್ತಾರೆ.

ಜನಮೆಚ್ಚೆ ಶುದ್ಧನಲ್ಲದೆ
ಮನಮೆಚ್ಚೆ ಶುದ್ಧನಲ್ಲವಯ್ಯ
ನುಡಿಯಲ್ಲಿ ಜಾಣನಲ್ಲದೆ
ನಡೆಯಲ್ಲಿ ಜಾಣನಲ್ಲವಯ್ಯ
ವೇಷದಲ್ಲಿ ಅಧಿಕನಲ್ಲದೆ
ಭಾಷೆಯಲ್ಲಿ ಅಧಿಕನಲ್ಲವಯ್ಯ

ಅರಸೊತ್ತಿಗೆ ತೊರೆದ ಸಕಲೇಶರು ನಿಜವಾದ ಜ್ಞಾನ ಹುಡುಕುತ್ತ ಹೆಂಡತಿ ಮಕ್ಕಳೊಂದಿಗೆ ಹೊರಟರು. ಮಾರ್ಗ ಮಧ್ಯೆ “ಅಂಬೆ” ಎಂಬ ಗ್ರಾಮದಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ತನ್ನ ತಂದೆ ಮಲ್ಲಿಕಾರ್ಜುನ ಅವರು ಇರುವ ಸ್ಥಾನಕ್ಕೆ ಬಂದು, “ನಾನು ನಿನ್ನಂತೆ ಯೋಗಿಯಾಗುತ್ತೇನೆ” ಎಂದು ಕೇಳುತ್ತಾರೆ. ನೀನು ಇಲ್ಲಿರುವುದು ಸಮಯವಲ್ಲ, ಸುಲಭವೂ ಅಲ್ಲ. ಅಲ್ಲಿ ಕಲ್ಯಾಣದಲ್ಲಿ ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ ಮುಂತಾದವರು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲಿಗೆ ಹೋಗಿ ಸಾಮಾಜಿಕ ಕಾರ್ಯ ಕೈಗೊಂಡು ಮತ್ತೆ ಇಲ್ಲಿಗೆ ಬಾ ಎಂದು ಹೇಳಿ ಕಳಿಸುತ್ತಾರೆ.

ದೇಶ ದೇಶಾಂತರವ ತಿರುಗಿ ತೊಳಲಿ, ಬಳಲಿ
ಕೆಲರ ಹೊಗಳಿ, ಕೆಲರ ತೆಗಳಿ
ವ್ರತಾ ಹೋಯಿತ್ತು ಎನ್ನ ಸಂಸಾರ ಸುಖವು
ಗಿರಿ ಶಿಖರದ ಮೇಲೆ ಲಿಂಗಧ್ಯಾನ.. ಮೌನವಾಗಿಸು

ಎಂದು ಹೇಳುವ ಸಕಲೇಶರು, ಇದಿರೆನ್ನ ಹಳಿವವರು ಮತಿಯ ಬೆಳಗುವರು. ಅಸಹ್ಯ ಮಾಡುವವರು ಮನದ ಕಳೆಯ ತೊಳೆವ ನೆಂಟರು ಎಂದು ಹೇಳುತ್ತಾರೆ. ಮನವರಿಯದ ಕಳ್ಳತನವಿಲ್ಲ ಎನ್ನುವಂತೆ ಮನಮೆಚ್ಚುವಂತೆ ಅಂತಃಸಾಕ್ಷಿಯಾಗಿ ಬದುಕಬೇಕು ಎನ್ನುತ್ತಾರೆ. ಜ್ಯೋತಿ ಮುಟ್ಟಿದ ಬತ್ತಿ ತಾ ಜ್ಯೋತಿಯಾಗುವಂತೆ ಬಸವನ ಬಾಲತುದಿಯ ಹಿಡಿದು ನಾ ಬದುಕಿದೆ ಎಂದು ಅವರ ಮಹತಿಯನ್ನು ಕೊಂಡಾಡುತ್ತಾರೆ.

ಒತ್ತಡದ ಬದುಕಿನಲ್ಲಿ ತತ್ತರಿಸಿ ಹೋಗಿರುವ ಮಾನವ ಕುಲಕ್ಕೆ ಸಮಾಧಾನದ ಸೂತ್ರಗಳೇ ಶರಣರ ವಚನಗಳು. ಶರಣರ ಧರ್ಮ ಭಯ ಹುಟ್ಟಿಸುವ ಧರ್ಮವಲ್ಲ. ದಯೆ ತುಂಬುವ ಧರ್ಮ, ಅದು ಇವನಾರವ ಎನ್ನುವ ಧರ್ಮವಲ್ಲ, ಅದು ಇವನಮ್ಮವ ಎನ್ನುವ ಧರ್ಮ. ಶರಣ ಧರ್ಮ ಆಡಂಭರದ ಧರ್ಮವಲ್ಲ, ಅರಿವು-ಆಚಾರದ ಧರ್ಮ. ಶರಣರದು ಆಲಸಿಗಳ ಧರ್ಮವಲ್ಲ, ಕಾಯಕ-ದಾಸೋಹದ ಧರ್ಮ. ಬಸವಾದಿ ಶರಣರು ಹಾಕಿಕೊಟ್ಟ ರಹದಾರಿಯಲ್ಲಿ ನಾವು ಸಾಗಬೇಕು. ಶರಣರ ಧೈರ್ಯ, ಪ್ರಾಮಾಣಿಕತೆ, ಸಹಜತೆ, ಸರಳತೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು.

(ಸ್ಥಳ: ಬಸವ ಸಮಿತಿಯ ಅನುಭವ ಮಂಟಪ, ಜಯನಗರ, ಕಲಬುರಗಿ)

emedialine

Recent Posts

ಗಾಂಧೀಜಿಗೆ ಸತ್ಯಹರಿಶ್ಚಂದ್ರನ ಕಥೆಯೇ ಪ್ರೇರಣೆ

ಶಹಾಪುರ: ಮಹಾತ್ಮ ಗಾಂಧೀಜಿಯವರಿಗೆ ಈ ದೇಶದ ಮಕ್ಕಳಿಗೆ ಹಾಗೂ ಪುರಾತನ ಭಾರತೀಯ ರಾಜ್ಯ ಮತ್ತು ಸತ್ಯವಂತ ನಾಯಕರು ಆಗಿದ್ದ ಸತ್ಯ…

3 mins ago

ಮಕ್ಕಳಲ್ಲಿ‌ ಮಾನವೀಯ ಮೌಲ್ಯ ಹೆಚ್ಚಿಸಲು ವಚನಗಳೇ ಸ್ಫೂರ್ತಿ

ಕಲಬುರಗಿ: ಶರಣರ ಅನುಬಾವಗಳಿಂದ ಹೊರ ಹೊಮ್ಮಿರುವ ವಚನಗಳು ಮಾನವೀಯ ಮೌಲ್ಯ ಹೆಚ್ಚಳಕ್ಕೆ ಪೂರಕವಾಗಿವೆ ಎಂದು ನಿವೃತ್ತ ಪ್ರಾಚಾರ್ಯರಾದ ಪ್ರೊ. ನಿಂಗಮ್ಮ…

5 mins ago

ಅಧ್ಯಕ್ಷರಾಗಿ ಶಿವಾನಂದ ಕವಲಗಾ ಬಿ ಆಯ್ಕೆ

ಕಲಬುರಗಿ: ಕರ್ನಾಟಕ ರಾಜ್ಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಯಲಗೊಂಡ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿ…

8 mins ago

ಶ್ರೀ ಶರಣಬಸವೇಶ್ವರರ ದೇವಸ್ಥಾನ: ನಗರದ ಮುಖ್ಯ ರಸ್ತೆಯಲ್ಲಿ ಮಹಾದ್ವಾರ ನಿರ್ಮಾಣಕ್ಕೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ನಗರದ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಪುರಾತನ ಪುಣ್ಯ ಕ್ಷೇತ್ರ ದೇವಸ್ಥಾನವಾದ ಆರಾಧ್ಯದೈವ…

10 mins ago

ಬಿಎಸ್‍ಎನ್‍ಎಲ್ 25 ನೇ ಸಂಸ್ಥಾಪನಾ ದಿನಾಚರಣೆ ಆಚರಣೆ

ಕಲಬುರಗಿ: ನಗರದ ಪ್ರಧಾನ ವ್ಯವಸ್ಥಾಪಕರ ಕಚೇರಿಯಲ್ಲಿ ಬಿಎಸ್‍ಎನ್‍ಎಲ್ 25 ನೇ ಸಂಸ್ಥಾಪನಾ ದಿನಾಚರಣೆಯನ್ನು ಮಕ್ಕಳೊಂದಿಗೆ ಕೆಕ್ ತಿನಿಸುವ ಮೂಲಕ ಸಂಭ್ರಮದಿಂದ…

13 mins ago

ಹ್ಯಾಂಡ್‍ಬಾಲ್: ಕಲಬುರಗಿ ಪ್ರಥಮ ಸ್ಥಾನ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ನಡೆದ 14 ಮತ್ತು 17 ವರ್ಷದೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗ…

16 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420