ಬಿಸಿ ಬಿಸಿ ಸುದ್ದಿ

ಉಸಿರಾಡಲು ಶುದ್ಧ ಮತ್ತು ನಿರ್ಮಲ ಹವೆಯಿರುವ ಭಾರತದ ಮೊದಲ ಐದು ನಗರಗಳಲ್ಲಿ ದಾವಣಗೆರೆಯೂ ಸೇರಿದೆ..!

  • ಕುಶಲ

ನಮ್ಮ ನಾಡಿನ ಸ್ಮಾರ್ಟ್ ಸಿಟಿ ದಾವಣಗೆರೆ ಈ ಲಿಸ್ಟ್​ನಲ್ಲಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ. ಅದೊಂದು ಸುಂದರ ನಗರ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು ಅದರೆ ಇಲ್ಲಿನ ಹವೆಯೂ ನಿರ್ಮಲವಾಗಿದೆ ಅಂತ ಗೊತ್ತಿರಲಿಲ್ಲ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಗಾಳಿ, ಪರಿಸರ ಎಷ್ಟು ಕೆಟ್ಟುಹೋಗಿದೆ ಎಂದು ಬೇರೆ ಗ್ರಹದ ಜೀವಿಗಳಿಗೂ ಗೊತ್ತಾಗಿದೆ.

ಪರಿಸರ ತಜ್ಞರು, ವಿಜ್ಞಾನಿಗಳು ಜನ ಉಸಿರಾಡುವ ಗಾಳಿಯನ್ನು ಶುದ್ಧಮಾಡುವ ಪ್ರಯತ್ನದಲ್ಲಿ ಸಫಲರಾಗುತ್ತಿಲ್ಲ. ಹಾಗಂತ ನಮ್ಮ ಬೆಂಗಳೂರಿನ ಸ್ಥಿತಿ ಉತ್ತೇಜದಾಯಕವಾಗಿದೆ ಅಂತ ಭಾವಿಸಬೇಡಿ. ಇಲ್ಲೂ ಹವಾಮಾನ ಕೆಟ್ಟಿದೆ ಅದರೆ, ದೆಹಲಿಯಷ್ಟು ಅಲ್ಲ ಅನ್ನೋದೊಂದೇ ಸಮಾಧಾನದ ಸಂಗತಿ. ಹಾಗಾದರೆ, ಉಸಿರಾಡಲು ಪರಿಶುದ್ಧ, ನಿಷ್ಕಲ್ಮಶ ಗಾಳಿ ಎಲ್ಲಿ ಸಿಕ್ಕೀತು ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು.

ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದ ಐದು ನಗರ ಪ್ರದೇಶಗಳಲ್ಲಿ ಉಸಿರಾಡಲು ಮಾಲಿನ್ಯಮುಕ್ತ ಹವೆ ಸಿಗುತ್ತದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಈ ಐದು ನಗರಗಳಲ್ಲಿ 4 ದಕ್ಷಿಣ ಭಾರತದಲ್ಲಿವೆ ಮತ್ತು ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಸಿಕೊಳ್ಳುವ ದಾವಣಗೆರೆಯೂ ಅದರಲ್ಲಿ ಸೇರಿದೆ.

ಲಿಸ್ಟ್​​​​ನಲ್ಲಿರುವ ಮೊದಲ ಪ್ರದೇಶವೆಂದರೆ ಮಿಜೊರಾಂನ ರಾಜಧಾನಿ ಐಜ್ವಾಲ್. ಇಲ್ಲಿ ಬೀಸುವ ಗಾಳಿ ಪರಿಶುದ್ಧವಾದದ್ದು ಎನ್ನಲಾಗಿದೆ. ಈ ಪ್ರದೇಶವು ಕಣಿವೆ, ಬೆಟ್ಟಗುಡ್ಡ ಮತ್ತು ಜಲಪಾತಗಳಿಂದ ಕೂಡಿದೆ. ಐಜ್ವಾಲ್ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದೆ. ಯಾಕೆಂದರೆ, ಇಲ್ಲಿ ಯಾವುದೂ ದುಬಾರಿಯಲ್ಲ. ಎರಡನೇ ಸ್ಥಾನದಲ್ಲಿರುವ ಸ್ಥಳವೆಂದರೆ ತಮಿಳುನಾಡಿನ ಮತ್ತು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಸಿಕೊಳ್ಳುವ ಕೊಯಮತ್ತೂರ್.

ಇದು ಹೇರಳವಾಗಿ ಕೈಗಾರಿಕೆಗಳು ಇರುವ ಪ್ರದೇಶವಾದರೂ ಅಲ್ಲಿ ಗಾಳಿ ಶುದ್ಧವಾಗಿದೆ. ಪ್ರಾಯಶಃ ಪಶ್ಚಿಮ ಘಟ್ಟಗಳ ಸಾಲಿಗೆ ನಗರ ಹತ್ತಿರವಾಗಿರುವುದರಿಂದ ಇಲ್ಲಿನ ಪರಿಸರ ಅತ್ಯುತ್ತಮವಾಗಿರಲು ನೆರವಾಗಿರಬಹುದು. ಮೂರನೇ ಸ್ಥಾನದಲ್ಲಿ ಆಂದ್ರಪ್ರದೇಶದ ರಾಜಧಾನಿ ಅಮರಾವತಿ ಮತ್ತು ಅದೇ ರಾಜ್ಯದ ಕರಾವಳಿ ನಗರ ವಿಶಾಖಪಟ್ನಂ ಇವೆ. ಅಮರಾವತಿ ಆಂಧ್ರಪ್ರದೇಶ ಇಬ್ಭಾಗಗೊಂಡ ನಂತರ ಸೃಷ್ಟಿಯಾಗಿರುವ ನಗರ. ಈ ನಗರ ನಿರ್ಮಾಣ ಕಾರ್ಯವನ್ನು ಹಿಂದಿನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರಂಭಿಸಿದರು. ಅದನ್ನು ಮುಂದುವರಿಸಿಕೊಂಡು ಹೋಗುತ್ತಿರೋದು ಈಗಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ.

ನಮ್ಮ ನಾಡಿನ ಸ್ಮಾರ್ಟ್ ಸಿಟಿ ದಾವಣಗೆರೆ ಈ ಲಿಸ್ಟ್​ನಲ್ಲಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ. ಅದೊಂದು ಸುಂದರ ನಗರ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು ಅದರೆ ಇಲ್ಲಿನ ಹವೆಯೂ ನಿರ್ಮಲವಾಗಿದೆ ಅಂತ ಗೊತ್ತಿರಲಿಲ್ಲ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

48 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago