ಹುಬ್ಬಳ್ಳಿ: ಧಾರವಾಡದ ಗಾಡ್‌ಗಿಫ್ಟ್ ತಂಡ, ಸ್ವರ್ಣ ಜೂನಿಯರ್ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್‌ಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತು.
ಇಲ್ಲಿನ ಬಾಣಜಿ ಡಿ. ಕಿಮ್ಜಿ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿಯ ಬಿಎಸ್‌ಸಿ ಕೆಆರ್ ಶೆಟ್ಟಿ ಕಿಂಗ್ಸ್ ತಂಡ 30 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಧಾರವಾಡದ ತಂಡ 28.4 ಓವರ್‌ಗಳಲ್ಲಿ ಜಯ ಸಾಧಿಸಿ ಗೆಲುವಿನ ‘ಗಿಫ್ಟ್’ ಪಡೆದುಕೊಂಡಿತು.
ಮಣಿಕಂಠ ಶತಕ: ಮಣಿಕಂಠ ಬುಕಿಟಗಾರ (118, 84ಎಸೆತ, 14 ಬೌಂಡರಿ, 6 ಸಿಕ್ಸರ್) ಭರ್ಜರಿ ಶತಕದ ಬಲದಿಂದ ಸವಾಲಿನ ಮೊತ್ತ ಕಲೆಹಾಕಿದ ಹುಬ್ಬಳ್ಳಿಯ ವಿ.ವಿ. ಸೂಪರ್ ಕಿಂಗ್ಸ್ ತಂಡ ನಮ್ಮ ಗದಗ ಕ್ರಿಕೆಟರ್ಸ್ ಎದುರು 64 ರನ್‌ಗಳ ಗೆಲುವು ಸಾಧಿಸಿತು. ನಾಲ್ಕನೇ ಆವೃತ್ತಿಯಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ.
ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ನಿಗದಿತ 30 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಗದಗ ತಂಡ ನಿಗದಿತ ಓವರ್‌ಗಳು ಪೂರ್ಣಗೊಂಡಾಗ 141 ರನ್ ಕಲೆಹಾಕಿತು. ಮತ್ತೊಂದು ಪಂದ್ಯದಲ್ಲಿ ದುರ್ಗಾ ಟೈಟನ್ಸ್ ಹುಬ್ಬಳ್ಳಿಯ ಎಸ್‌ಆರ್‌ಎಂ ಪಿಂಕ್ ಪ್ಯಾಂಥರ್ಸ್ ವಿರುದ್ಧ 44 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪ್ಯಾಂಥರ್ಸ್ 28.5 ಓವರ್‌ಗಳಲ್ಲಿ 124 ರನ್ ಗಳಿಸಿತ್ತು. ಎದುರಾಳಿ ತಂಡವನ್ನು 21 ಓವರ್‌ಗಳಲ್ಲಿ 80 ರನ್‌ಗೆ ಆಲೌಟ್ ಮಾಡಿತು.
ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿಯ ಸಫ್ರಾನ್ ಸ್ಟ್ರೈಕರ್ಸ್ 47 ರನ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಈ ತಂಡ 30 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿತು. ಎದುರಾಳಿ ಆಯಕ್ಸಸ್ ಹುಬ್ಬಳ್ಳಿ ಮಾಸ್ಟರ್ಸ್ 21.1 ಓವರ್‌ಗಳಲ್ಲಿ 89 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…