ರೈತರು ದೇಶದ ಬೆನ್ನೇಲುಬು ಇವರಿಲ್ಲದೆ ಜೀವನ ನಡೆಸುವುದು ತುಂಬಾ ಕ್ಲಿಷ್ಟಕರ .ನಾವು ಇಂದು ಇಷ್ಟು ಶಕ್ತಿ ಸಧೃಡದಿಂದ ಇದಿವಿ ಅಂದರೆ ಅದಕ್ಕೆ ಪ್ರಮುಖ ಕಾರಣವೇ ಈ ನಮ್ಮ ರೈತರು.
ರೈತರಿಲ್ಲದ ಜೀವನ ಊಹಿಸಿಕೊಳ್ಳಲು ಅಸಾಧ್ಯ ಏಕೇಂದರೆ ದುಡ್ಡು ಎಷ್ಟೇ ಇದ್ದರು ಅದನ್ನು ತಿನ್ನಲು ಸಾಧ್ಯವೇ? ಖಂಡಿತವಾಗಿಯು ಸಾಧ್ಯವಿಲ್ಲ ಯಾರೇ ಆಗಿರಲಿ ಎಷ್ಟೆ ಶ್ರೀಮಂತರಾಗಿರಲಿ ಅವರು ಈ ರೈತ ಬೆಳೆದ ದವಸ ಧಾನ್ಯಗಳು -ಹಣ್ಣು ತರಕಾರಿಗಳೆ ಸೇವಿಸಬೆಕೇ ವಿನಹ ಬೆರೆನೂ ಅಲ್ಲ ಅದಕ್ಕಾಗಿ ಆದರೂ ನಾವು ಒಂದ ತಿನ್ನುವ ಮೊದಲು ಅವರನ್ನು ನೆನೆಯಲೆಬೇಕು.
ರೈತ ಅನ್ನದಾತ,ಕಾಯಕವೇ ಅವನ ಭಗವಂತ
ಹಸಿವಿಗೆ ತಂಪಾತ,ಉಸಿರಿಗೆ ನೆರವಾತ ಹಸಿರಿಗೆ ಹೆಸರಾತ,ಬದುಕಿಗೆ ನೆರಳಾತ ಬಾಳಿನ ಭರವಸೆಯಾತ,ನಿಸರ್ಗ ವಿಕೋಪಕದೆ ಸೆಣಸುವಾತ ಕಾಯಕ ಯೋಗಿಯಾತ,ಮಣ್ಣಲಿ ಹೊನ್ನು.
ಭಾರತದ ಎಲ್ಲಾ ರಾಜ್ಯಗಳಲ್ಲಿ ಪ್ರತಿ ವರ್ಷ ಡಿಸೆಂಬರ್ 23 ರಂದು ರಾಷ್ಟ್ರಿಯ ರೈತ ದಿನಚಾರಣೆಯನ್ನು ದೇಶದ 5ನೇ ಪ್ರಧಾನಿಯಾದ ಚೌಧರಿ ಚರಣ್‌ಸಿಂಗ್ ಅವರ ಜನ್ಮ ದಿನದ ನಿಮಿತ್ತ ಆಚರಿಸಲಾಗುವುದು.ಅವರು ಆಡಳಿತದಲ್ಲಿದ್ದಾಗ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಗಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದಿದ್ದರು .ಆಧುನಿಕ ಕೃಷಿ ಪದ್ದತಿ ಅಳವಡಿಕೆಗೆ ಪ್ರೋತ್ಸಹ ನೀಡಿದ್ದರು.ಈ ಕಾರಣದಿಂದಾಗಿ ಅವರ ಜನ್ಮ ದಿನವನ್ನು ರೈತ ದಿನಾಚರಣೆಯನ್ನಾಗಿ ಆಚರಿಸಲಾಗುವುದು.
ರೈತರ ಮುಂದೆ ಎಲ್ಲರು ತಲೆ ಬಾಗಲೆಬೇಕು ಅವರಿಂದಲೆ ನಾವುಗಳು ಎಂಬುದು ನೆನಪಿಟ್ಟುಕೊಂಡು ನಡೆಯಬೇಕು.ರೈತರೆ ಈ ದೇಶದ ದೊಡ್ಡ ಆಸ್ತಿ.ಆ ರೈತರಿಗೆ ಯಾವುದೇ ರೀತಿಯ ಕಷ್ಟ ನೋವು ಇದ್ದರು ಕೂಡಾ ಜನರನ್ನು ಮಾತ್ರ ಉಪವಾಸ ಮಲಗಿಸಲಾರ.
ಇಂದು ನಾವು ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದ ಹಾಗೆ ನಿದ್ದೆ ಮಾಡುತ್ತೇವೆ ಎಂದರೆ,ಅದಕ್ಕೆ ಮುಖ್ಯ ಕಾರಣವೇ ಈ ನಮ್ಮ ರೈತರು .ಇಂದಿನ ಪ್ರಪಂಚ ಹೇಗಾಗಿದೆ ಎಂದರೆ ಅನೇಕ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಮಾತ್ರ ನಾವು ನೆನಪಿಸಿಕೊಳ್ಳುತ್ತೇವೆ ಉದಾಹರಣೆಗೆ ಲಾಯರ್,ಡಾಕ್ಟರ್,ಎಂಜಿನಿಯರ್, ವಿವಿಧ ಕ್ಷೇತ್ರದಲ್ಲಿರುವವರನ್ನು ನೆನಪಿಸಿಕೊಂಡು ಅವರನ್ನು ಗೌರವಿಸುತ್ತೇವೆ ವಿನಹ ನಮಗೆ 3 ಹೊತ್ತು ಅನ್ನ ನೀಡುವ ರೈತನ ನೆನಪು ಮಾತ್ರ ನೆನಪಿಗೆ ಬರುವುದೇ ಇಲ್ಲ .
ಕೃಷಿಯೇ ಭಾರತದ ಆರ್ಥಿಕ ಬೆನ್ನೇಲುಬು . ರೈತರು ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುವ ಶ್ರಮಜೀವಿ ,ಕಾಯಕಯೊಗಿ,ನೇಗಿಲಯೋಗಿ ಹಿಗೆ ಹತ್ತಾರು ಹೆಸರುಗಳಿಗೆ ಹೆಸರುವಾಸಿಯಾಗಿರುವವರು ನಮ್ಮ ರೈತರು.
ಇವರು ದಿನದ ಹೆಚ್ಚು ಸಮಯ ತಮ್ಮ ಹೋಲ ಗದ್ದೆಗಳಲಿಯೇ ಕಳೆಯುವ ಕಾರಣದಿಂದಾಗಿ ತಮ್ಮ ಕುಟುಂಬದ ಜೋತೆಲಿ ಹಾಗೂ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಯಾವುದೇ ರೀತಿಯ ವಿಷಯ ಗೋತ್ತಿರುವುದಿಲ್ಲ ಸಾಮಾಜಿಕ ಒಡನಾಟ ಇಲ್ಲದಿರುವುದರಿಂದ ಅವರು ಒಂದು ರೀತಿ ಏಕಾಂಗಿಯೆ ಎಂದು ಹೆಳಬಹುದು. ಅವರಲ್ಲಿ ಸಾಮಾಜಿಕ ಸಂಪರ್ಕ ತುಂಬಾ ವಿರಳವಾಗಿರುತ್ತದೆ.
ಅವರು ಬೆಳೆದ ಹಣ್ಣು ಹೂವು,ತರಕಾರಿ,ದವಸ,ಧಾನ್ಯಗಳನ್ನು ಸೆವಿಸುತ್ತಾರೆ ವಿನಹ ಅವರು ಶ್ರಮ ಪಟ್ಟು ಬೆಳೆದಿರುವ ಬೆಳೆಗಳಿಗೆ ತಕ್ಕ ಲ ನೀಡಲಾರರು.ಹೀಗೆ ಮಾಡುವುದರಿಂದ ರೈತರು ಎಲ್ಲವನ್ನು ಸಹನೆ,ತಾಳ್ಮೆಯಿಂದ ಸಹಿಸಿಕೊಂಡು ಸರಕಾರ ನೀಡುವ ಆಶ್ವಾಸನೆಗಳಿಗೆ ಕಾಯುತ್ತಾ ಕುಳಿತು ಕೊನೆಗೆ ಯಾವುದೇ ಪರಿಹಾರ ಸಿಗದೆ ಮುಂದೋಂದು ದಿನ ಸಾಲದ ಭಾದೆ ತಾಳಲಾರದೆ ಆತ್ಮಹತ್ಯೆಯಂತಹ ಆಲೋಚನೆ ಯಿಂದಾಗಿ ತನ್ನ ಮನೆ ಮಠ ಬಿಟ್ಟು ತಮ್ಮ ಕುಟುಂಬದವರನ್ನು ಬೀದಿಪಾಲು ಮಾಡಿ ಆತ್ಮಹತ್ಯೆಗೆ ಶರಣಾಗುತ್ತಾರೆ.
ಇದನೆಲ್ಲಾ ನೋಡಿದ ಮೇಲೆ ಸರಕಾರ ಅದು ಇದು ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿ ಸಮಾಧಾನ ಮಾಡಿ ಹೋಗುತ್ತಾರೆ .ಆ ಪರಿಹಾರಕ್ಕಾಗಿ ಕುಟುಂಬಸ್ಥರು ಹತ್ತು ಹಲವು ಬಾರಿ ಅಲೆದು ಕೆಳಿ ಸುಸ್ತಾಗಿಬಿಡುತ್ತಾರೆ ಹೋರತು ಯಾವುದೇ ಪರಿಹಾರ ದೊರೆಯುವುದು ಇಲ್ಲಘಿ ಅವರನ್ನು ಕಳೆದುಕೊಂಡ ಕುಟುಂಬಸ್ಥರು ದುಖದಲ್ಲಿಯೇ ಸಂಸಾರ ನಡೆಸುತ್ತಾಘಿ,ಜೀವನ ಮುಂದುವರೆಸುತ್ತಾರೆ.
ಹೀಗಾಗುವ ಮುನ್ನವೇ ಸರಕಾರ ಎಚ್ಚೆತ್ತುಕೊಂಡು ಪರಿಹಾರ ನೀಡಿದರೆ ತುಂಬಾ ಒಳ್ಳೆದು ಅದರ ಜೋತೆಗೆ ಅವರ ಪ್ರಾಣವು ಊಳಿದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.
ಹಾಗದರೆ ನಮ್ಮ ದೇಶದಲ್ಲಿ ರೈತರು ಎದುರಿಸುತ್ತಿರುವ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ಪರಿಹಾರವೇನು ಇಲ್ಲವೇ?ಅವರು ಅನಿಭವಿಸುವ ತೋಂದರೆಗಳಿಗೆ ಸಮಾಧಾನ ಹೇಳುವವರು ಯಾರು ? ಎಂದು ಕೇಳಿದರೆ, ಖಂಡಿತವಾಗಿಯೂ ಈ ಸಮಸ್ಯೆಗಳಿಗೆ ಸ್ವತ ರೈತರೇ ಪರಿಹಾರವನ್ನು ಕಂಡುಕೊಳ್ಳಬಹುದು .
ತಮ್ಮ ಜೀವನದಲ್ಲಿ ಕೇಲವೋಂದು ಧನಾತ್ಮಕ ಬದಲಾವಣೇಗಳನ್ನು ತಂದುಕೋಳ್ಳುವುದರ ಮೂಲಕ ಈ ರೀತಿಯ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೋಳ್ಳಬಹುದು.ಹೀಗೆ ಮಾಡುವುದನ್ನು ಬಿಟ್ಟು ಸಾವಿನ ಬಗ್ಗೆ ಯೋಚನೆ ಮಾಡಿ ತಮ್ಮ ಕುಟುಂಬದವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲಿಕಿಸುತ್ತಿರಿ.
ಸಾವಿನ ಯೋಚನೆ ಬಿಟ್ಟು ಛಲದಿಂದ ಬದುಕು ಸಾಧಿಸಿ ನಿಮ್ಮ ಬಾಳು ಬಂಗಾರದ ಹಾಗೇ ಇರುವಂತೆ ನೋಡಿಕೊಳ್ಳಿ.ನಿಮ್ಮನ್ನು ನಂಬಿದವರನ್ನು ಕೈ ಬಿಟ್ಟು ಹೋಗದಿರಿ.ಸ್ವಾಭಿಮಾನದ ಪ್ರತೀಕವೇ ಈ ನಮ್ಮ ರೈತರು ಎಂದು ಹೇಳುತ್ತಾ ಎಲ್ಲರಿಗು ರೈತ ದಿನಾಚರಣೆಯ ಶುಭಾಶಯಗಳು.
-ಕಾಶಿಬಾಯಿ ಗುತ್ತೇದಾರ ಪಾಳಾ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…