ಕಲಬುರಗಿ: ಜಾಗತಿಕ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದ ಕೊರೋನಾ ಅನೇಕ ಜನರನ್ನು ಬಲಿ ತೆಗೆದುಕೊಂಡು ಅತೀವ ಭಯ ಮೂಡಿಸಿದೆ. ಕೋವಿಡ ನ ಮೂರನೇ ಅಲೆಯು ಒಮಿಕ್ರಾನ್ ರೂಪದಲ್ಲಿ ಬಂದಿದ್ದು ಜನ ಗಲಿಬಿಲಿ ಗೊಂಡಿದ್ದಾರೆ. ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಲ್ಲಿ ಕೊವಿಡಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಕೆಬಿಎನಐಎಮೆಸ್ ಸಹಾಯಕ ಪ್ರಾದ್ಯಾಪಕ ಡಾ. ಚೇತನಾ ಸಿಂಗೋಡೆ ಹೇಳಿದರು.
ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ, ಜೈವಿಕ ತಂತ್ರಜ್ಞಾನ ಹಾಗೂ ಆಹಾರ ಮತ್ತು ಪೋಷಣಾ ವಿಭಾಗಗಳು ಜಂಟಿಯಾಗಿ ಏರ್ಪಡಿಸಿದ “ಕೋವಿಡ ಜಾಗೃತಿ, ಆಹಾರ ಮತ್ತು ಜೀವನ ಪದ್ದತಿ ಹಾಗೂ ಆಪ್ತ ಸಮಾಲೋಚನೆ ಶಿಬಿರ”ದಲ್ಲಿ ಅವರು ಗೌರವ ಅತಿಥಿಯಾಗಿ ಮಾತನಾಡುತ್ತಿದ್ದರು. ಯಾವುದೇ ವೈಕ್ತಿಗೆ ಜ್ವರ, ನೆಗಡಿ, ಕೆಮ್ಮು ಕಂಡು ಬಂದಲ್ಲಿ ಅವನು ತಕ್ಷಣ ಪ್ರತ್ಯೇಕತೆಗೆ ಓಳಪಡಬೇಕು. ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ ಬಳಕೆ, ಸ್ಯಾನಿಟೈಸರ್ ಬಳಕೆ, ಆಗಾಗ ಕೈ ತೊಳೆಉಕೊಳ್ಳುವುದು ಮುಂತಾದ ಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಹೆದರುವ ಅವಶ್ಯಕತೆ ಇಲ್ಲ. ಕೋವಿಟ್ ಲಸಿಕೆ ಅತಿ ಮುಖ್ಯ. ಲಸಿಕೆಯಿಂದ ಪ್ರಾಣಾಪಾಯದಿಂದ ರಕ್ಷಣೆ ಪಡೆಯಬಹುದು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯರಾದ ಡಾ. ಜೀನತ್ ಬೇಗಮ್, ಪ್ರೋಫೆಸ್ಸರ ಹಾಗೂ ಚೇರಮನ್ನರು, ರೋಗವಿಜ್ಞಾನ ವಿಭಾಗ, ಕೆಬಿಎನಐಎಮೆಸ್, ಕಲಬುರಗಿ ಇವರು ರಕ್ತದಾನದ ಮಹತ್ವವನ್ನು ಕುರಿತು ಮಾತನಾಡಿದರು. ಕಲ್ಬುರ್ಗಿಯಲ್ಲಿ ಕೇವಲ 15-16 ಬ್ಲಡ್ ಬ್ಯಾಂಕ್ಗಳಿದ್ದು, ಪ್ರತಿ ವರ್ಷ ಸುಮಾರು 1000 ಜನರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ ರಕ್ತ ಕೊರತೆ ನೀಗಿಸಲು ನೆರೆ ರಾಜ್ಯ ಮಹಾರಾಷ್ಟ್ರದಿಂದ ರಕ್ತವನ್ನು ತರಿಸಿಕೊಳ್ಳಲಾಗುತ್ತದೆ ಎಂದರು. ಒಳ್ಳೆಯ ಪ್ರಮಾಣದ ಹಿಮೊಗ್ಲೋಬಿನ ಇದ್ದವರು ರಕ್ತದಾನ ಮಾಡಬೇಕು ಎಂದು ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡುವುದಯ ಸೂಕ್ತ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಡಾ ನಿಶಾತ ಆರೀಫ ಹುಸ್ಸೆನಿ, ಡೀನರು, ಭಾಷಾನಿಕಾಯ, ಕಲಾನಿಕಾಯ, ಮಾನವಿಕತೆ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯ, ಖಾಜಾ ಬಂದಾನವಾಜ ವಿಶ್ವವಿದ್ಯಾಲಯ, ಕಲಬುರಗಿ ಇವರು, ಮಾದ್ಯಮ ಕೋವಿಡ್ ಬಗ್ಗೆ ಜನರಲ್ಲಿ ಭಯ ಹುಟ್ಟಿಸದೇ ಈ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಜನರ ಮನೋಬಲ ಹೆಚ್ಚಿಸಬೇಕು ಎಂದು ತಮ್ಮ ಅಧ್ಯಕ್ಷೀಯ ಸಮಾರೋಪದಲ್ಲಿ ನುಡಿದರು.
ಡಾ. ಚೇತನಾ ಇವರು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪ್ರಶ್ನೆಗಳಿಗೆ ಉತ್ತಸಿದರು. ಕಾರ್ಯಕ್ರಮದಲ್ಲಿ ಆಹಾರ ಮತ್ತು ಪೋಷಣೆ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಆಹಾರ ಪದ್ದತಿ, ಸಮತೋಲನ ಆಹಾರದ ಬಗ್ಗೆ ಹಾಗೂ ಪೌಷ್ಟಿಕತೆಯ ಸಮಾಲೋಚನೆಯನ್ನು ಡಾ. ಶಕೀಲ ಆಹ್ಮದ್ ಆದೋನಿ ಮತ್ತು ಶ್ರೀಮತಿ ಪ್ರಿಯಾಂಕಾರವರ ಉಸ್ತುವಾರಿಯಲ್ಲಿ ನಡೆಸಲಾಯಿತು. ಸುಮಾರು 90 ವಿದಾರ್ಥಿಗಳು ಸಮಾಲೋಚನೆ ಪಡೆದರು.
ಜೈವಿಕ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಉಚಿತ ರಕ್ತದ ಗುಂಪು ತಪಾಸಣೆ ಮತ್ತು ಕೋವಿಡ್ ಮುಂಜಾಗ್ರತೆ, ಮಾಸ್ಕಗಳ ಉಪಯೋಗ, ಪಿಪಿಈ ಕಿಟ್ ಬಳಸುವ ವಿಧಾಗಳ ಬಗ್ಗೆ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾದ್ಯಾಪಕರುಗಳಾದ ಡಾ ಸೈಯದ್ ಇಕ್ಬಾಲ ಅಹ್ಮದ ಮತ್ತು ಡಾ ಜಹಾನಾರಾ ಕುದ್ಸಿ ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಈ ಶಿಬಿರದಲ್ಲಿ ಸುಮಾರು 84 ವಿದಾರ್ಥಿನಿಯರು ತಮ್ಮ ರಕ್ತದ ಗುಂಪನ್ನು ತಪಾಸಣೆ ಮಾಡಿಸಿಕೊಂಡರು. ಕೆಬಿಎನಐಎಮೆಸ್‍ನ ತಂತ್ರಜ್ಞನರಾದ ಯುಸುಫ ಹುಸ್ಸೇನಿ ಮತ್ತು ಅಹ್ಮದ ಅಶಫಾಕ ಸಹಾಯ ಮಾಡಿದರು.
ಪ್ರಾರಂಭದಲ್ಲಿ ಆಹಾರ ಮತ್ತು ಪೋಷಣಾಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯರಾದ ಸುಮಯ್ಯಾ ಹಾಗೂ ಪ್ರಿಯಾಂಕಾ ಪ್ರಾರ್ಥನೆ ವ್ಯಕ್ತಪಡಿಸಿದರೆ, ಆಯೆಷಾ ತಬಸ್ಸುಮ್ ಅತಿಥಿಗಳನ್ನು ಸ್ವಾಗತಿಸಿದರು. ಮಾರಿಯಾ ನಿರೂಪಿಸಿದರೆ, ಪ್ರಿಯಾಂಕಾ ಭಕ್ಷಿ, ಪೌಷ್ಟಿಕತಜ್ಞ, ಆಹಾರ ಮತ್ತು ಪೋಷಣಾಶಾಸ್ತ್ರ ವಿಭಾಗ, ಖಾಜಾ ಬಂದಾನವಾಜ ವಿಶ್ವವಿದ್ಯಾಲಯ, ಕಲಬುರಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಾದ ಸಮೂಹ ಸಂವಹನ ಮತ್ತು ಮಾದ್ಯಮ ಅದ್ಯಯನ, ಇಂಗ್ಲೀಷ, ಉರ್ದು, ಜೈವಿಕ ತಂತ್ರಜ್ಞಾನ, ಪ್ರಾಣಿಶಾಸ್ತ್ರ, ಆಹಾರ ಮತ್ತು ಪೋಷಣಾಶಾಸ್ತ್ರ, ಭೌತಿಕ ಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗಗಳ ಎಲ್ಲ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…