ಬಿಸಿ ಬಿಸಿ ಸುದ್ದಿ

ಗುರು ಶಿಷ್ಯರ ಸಮಾಗವೇ ಗುರು ವಂದನೆ: ದೋರನಹಳ್ಳಿ ಶ್ರೀ

ಶಹಾಪುರ: ಶಿಷ್ಯನು ಮಾಡಿದ ಎಲ್ಲ ತಪ್ಪುಗಳನ್ನು ಮನ್ನಿಸಿ ಗುರುವಾದವನು ತನ್ನ ಸಮಾಗಮಕ್ಕೆ ಕರೆದುಕೊಳ್ಳುವುದೇ ಗುರು ವಂದನಾ ಕಾರ್ಯವಾಗಿದೆ. ಗುರು ಪೂರ್ಣಿಮೆಯಂದು ಗುರು ಶಿಷ್ಯರು ಅವಿನಾಭವ ಸಂಬಂಧದಿಂದ ಶಿಷ್ಯನು ಗುರುವಿನ ದರ್ಶನಾರ್ಶಿವಾದ ಪಡೆದು ಪುನಿತವಾಗುವ ದಿನವೇ ಗುರು ಪೂರ್ಣಿಮೆ ಎಂದು ದೋರನಹಳ್ಳಿ ಹಿರೇಮಠದ ವೀರ ಮಹಾಂತ ಶಿವಾಚಾರ್ಯ ಸ್ವಾಮಿಗಳು ನುಡಿದರು.

ತಾಲೂಕಿನ ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ಬೆಟ್ಟದಲ್ಲಿ ಸಗರ ಗ್ರಾಮದ ಸುಕಾಲೆಪ್ಪ ತುಂಬಗಿ ದಂಪತಿಗಳಿಂದ ಗುರು ಪೂರ್ಣಿಮೆಯ ದಿನವಾದ ಮಂಗಳವಾರ ಏರ್ಪಡಿಸಲಾಗಿದ್ದ ೧೧ನೇ ವರ್ಷದ ಗುರು ವಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಗುರು ವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಗುರು ಪೂರ್ಣಿಮೆಯಂದು ನಬೋಮಂಡಲದಲ್ಲಿ ಒಂದು ವೈಚಿತ್ರ್ಯ ನಡೆದರೆ ಧಾರ್ಮಿಕವಾಗಿ ಈ ಪೌರ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಬ್ರಹ್ಮಾಂಡವನ್ನು ನಿಯಂತ್ರಿಸುವ ಸೃಷ್ಠಿ, ಸ್ಥಿತಿ, ಲಯಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರರು ಗುರುಗಳು ಇರುವಂತೆ ಪ್ರತಿಯೊಬ್ಬರ ಬದುಕಿಗೆ ಗುರುಗಳು ಬೇಕು. ಗುರುವಿಲ್ಲದೆ ಏನು ಮಾಡಿದರೂ ಅದು ಪೂರ್ಣಗೊಳ್ಳದು ಎಂದು ತಿಳಿಸಿದರು. ಸನಾತನ ಕಾಲದಿಂದಲೂ ಗುರು ಪರಂಪರೆಗೆ ನಮ್ಮ ದೇಶದಲ್ಲಿ ಅಗ್ರಸ್ಥಾನವಿದೆ. ಭಕ್ತರ ಸಂಕಷ್ಟಗಳಿಗೆ ಪರಿಹಾರ ನೀಡುವ ಶಕ್ತಿ ಗುರು ಪರಂಪರೆಗೆ ಮಾತ್ರ ಇದೆ ಎಂದು ತಿಳಿಸಿದರು.

ಇದೇ ವೇಳೆ ಸುಮಾರು ೮ಜನ ನಿವೃತ್ತ ಸೈನಿಕರು, ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಪಂ ಸದಸ್ಯರಾದ ಶರಣಗೌಡ ಪಾಟೀಲ್ ದೇವದುರ್ಗ, ಮರಿಲಿಂಗಪ್ಪ ಕರ್ನಾಳ್, ರಾಯಪ್ಪಗೌಡ ದರ್ಶನಾಪುರ, ಚೆನ್ನಣ್ಣಗೌಡ ಶಿರವಾಳ, ಸಿದ್ದಣ್ಣಗೌಡ ಪೋ.ಪಾಟೀಲ್ ಹುರಸಗುಂಡಗಿ, ಶಿವರಾಜ ಮಾಲಿಪಾಟೀಲ್, ಕಲ್ಲಯ್ಯ ಸ್ವಾಮಿ ಚಟ್ನಳ್ಳಿ, ಎ.ಬಿ.ಪಾಟೀಲ್, ದೇವಿಂದ್ರಪ್ಪ ದೇಸಾಯಿ ಸೂಗೂರು, ಮಹಾಂತಗೌಡ ಮಾಲಿಪಾಟೀಲ್ ಸೂಗೂರು ಸೇರಿದಂತೆ ಕಾರ್ಯಕ್ರಮವನ್ನು ಆಯೋಜಿಸಿದ್ದ ತುಂಬಗಿ ಕುಟುಂಬದ ಸುಕಾಲೆಪ್ಪ ಮಹಾದೇವಮ್ಮ ಮತ್ತು ಸಂಗಣ್ಣ ತುಂಬಗಿ ದಂಪತಿಗಳು ಗುರು ವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುರಕ್ಷೆಯನ್ನು ಪಡೆದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago