ಹಾವೇರಿ : ಮುಂದಿನ 14-15 ತಿಂಗಳು ಜನರ ರಾಜಕಾರಣ ಮಾಡುತ್ತೇನೆ ಹೊರತು ಅಧಿಕಾರ ರಾಜಕಾರಣ ಮಾಡುವುದಿಲ್ಲಾ ಎಂದು ಪರೋಕ್ಷವಾಗಿ ಮುಂದಿನ 15 ತಿಂಗಳ ಸಿಎಂ ನಾನೇ ಎಂದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇತ್ತಿಚೆಗೆ ಸಿಎಂ ಬದಲಾವಣೆ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ನಾಡದೊರೆ ಪುಲ್ ಸ್ಟಾಪ್ ಇಟ್ಟಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಕೋವಿಡ್ ನಿಂದ ಮೃತರಾದವರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಅಭಿವೃದ್ಧಿ ನಿರಂತರವಾಗಿ ಚಾಲನೆಯಲ್ಲಿರುವ ಪ್ರಗತಿ ಚಕ್ರ, ಅಭಿವೃದ್ಧಿ ಕಂಡಾಗ ಜನರ ಗುಣಮಟ್ಟದಲ್ಲಿ ಬದಲಾವಣೆ ಆಗುತ್ತದೆ. ಎಲ್ಲ ವರ್ಗದ ಜನರ ಅಭಿವೃದ್ಧಿ ಕಲ್ಯಾಣ ರಾಜ್ಯ ಆಗಲಿಕ್ಕೆ ಸಾಧ್ಯವಾಗಲಿದೆ. ರಾಣೇಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು ಇದರ ಸಮಗ್ರ ಅಭಿವೃದ್ಧಿ ಉತ್ತರ ಕರ್ನಾಟಕದ ಸಂಕೇತ ಆಗುತ್ತದೆ. ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲಿಗೆ ಸಿದ್ದತೆ ನಡೆದಿದೆ ಎಂದರು.
2022 ರ ಪೆಬ್ರವರಿ ಒಳಗೆ ಯುವಕರಿಗೆ ಉದ್ಯೋಗ ಕೊಡುವ ನೀತಿ ಹಮ್ಮಿಕೊಳ್ಳಾಗಿದೆ. ಬೇರೆ ಬೇರೆ ಇಲಾಖೆಗಳನ್ನು ಒಂದುಗೂಡಿಸಿ ಉದ್ಯೋಗ ಕ್ರಾಂತಿ ಮಾಡುವ ಯೋಜನೆ ರೂಪಿಸಲಾಗುತ್ತಿದೆ. ಸ್ಮರಣಾಶೀಲವಾಗಿರುವ ಸರ್ಕಾರ ನಮ್ಮದು,ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಮಾಡಿದ್ದೇನೆ. ಇದರಿಂದ 2 ಲಕ್ಷ 40 ಸಾವಿರ ಮಕ್ಕಳಿಗೆ ಸಹಾಯ ಆಗಿದೆ.
ಎಲ್ಲೆ ಹೋದರು ಬೆಳ್ಳಿ ಗದೆ ಕೊಡುತ್ತಾರೆ. ಈ ಗದೆ ಆಗಲಿ ಕತ್ತಿ ಆಗಲಿ ಮನೆಗೆ ತೆಗೆದುಕೊಂಡು ಹೋಗಬಾರದು. ಹೀಗಾಗಿ ಸಿದ್ದೇಶ್ವರ ದೇವಸ್ಥಾನ ಕ್ಕೆ ಇದನ್ನು ಕೊಡುತ್ತೇನೆ ಕತ್ತಿ ಕೊಟ್ಟಿದ್ದರೆ ದೇವಿಯ ದೇವಸ್ಥಾನಗಕ್ಕೆ ಕೊಡುತ್ತಿದ್ದೆ. ಹಿರೆಕೇರೂರು ನಲ್ಲಿ ಕೊಟ್ಟಿದ್ದ ಗದೆಯನ್ನು ಕದರಮಂಡಲಗಿ ಆಂಜನೇಯ ದೇವಸ್ಥಾನಕ್ಕೆ ಕೊಟ್ಟಿದ್ದೇನೆ ಎಂದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…