ಬಿಸಿ ಬಿಸಿ ಸುದ್ದಿ

‘ಅಲ್ಲಮಪ್ರಭು’ ಪುಸ್ತಕ ಲೋಕಾರ್ಪಣೆ : ವಚನಗಳ ಒಳಹೊಕ್ಕರೆ ಬೆಳಕಿನ ಪುಂಜ :‌ ಚಂದ್ರಶೇಖರ

ಗದಗ: ‘ಅಲ್ಲಮಪ್ರಭು ನಿತ್ಯ ಬೆಡಗು; ನಿತ್ಯ ಬೆರಗು. ಅವರ ವಚನಗಳು ಕಬ್ಬಿಣದ ಕಡಲೆ ಇದ್ದಂತೆ. ಅರ್ಥಮಾಡಿಕೊಳ್ಳಬೇಕಾದರೆ ಸ್ವಲ್ಪ ಕಷ್ಟ. ಆದರೆ, ಒಳಹೊಕ್ಕರೆ ಬೆಳಕಿನ ಪುಂಜ. ಸಕ್ಕರೆಯನ್ನು ವರ್ಣಿಸಬಹುದು. ಆದರೆ, ಸಿಹಿಯನ್ನು ವರ್ಣನೆ ಮಾಡಲು ಸಾಧ್ಯವಿಲ್ಲ.

ಅಲ್ಲಮಪ್ರಭು ಅಧ್ಯಾತ್ಮದ ವಿಚಾರಗಳನ್ನು ಆ ನಿಟ್ಟಿನಲ್ಲೇ ಹೇಳಿದ್ದಾರೆ’ ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು.ಪಂಚಾಕ್ಷರಿ ನಗರದಲ್ಲಿರುವ ಶ್ರೀ ಸಿದ್ಧಲಿಂಗ ಅರಿವಿನ ಮನೆಯಲ್ಲಿ ಶನಿವಾರ ನಡೆದ ‘ಅಲ್ಲಮಪ್ರಭು’ ದ್ವಿತೀಯ ಮುದ್ರಣದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಜಗತ್ತಿನ ಎಲ್ಲ ತಾತ್ವಿಕರನ್ನು ಒಂದೆಡೆ ಸೇರಿಸಿ ಸಭೆ ನಡೆಸಿದರೆ ಅದರ ಅಧ್ಯಕ್ಷ ಸ್ಥಾನ ವಹಿಸುವ ತಾಕತ್ತು ಇರುವುದು ಅಲ್ಲಮಪ್ರಭುವಿಗೆ ಮಾತ್ರ. ಇಂತಹ ಸಾಧಕರ ಬಗ್ಗೆ ಒಂದು ಪುಸ್ತಕ ಬರೆದುಕೊಡುವಂತೆ ಗೆಳೆಯ ಶಾಂತವೀರ ಕೋರಿಕೊಂಡಾಗ ಅಳುಕಿನಿಂದಲೇ ಒಪ್ಪಿದೆ. ‘ಅಲ್ಲಮಪ್ರಭು’ ಪುಸ್ತಕ ರಚನೆ ನನ್ನಿಂದ ಆಗುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ನಾನು ಪ್ರಯತ್ನಿಸಿದೆ. ಅಲ್ಲಮಪ್ರಭು ತಾನೇ ಕೂರಿಸಿ ಬರೆಯಿಸಿಬಿಟ್ಟರು’ ಎಂದು ಹೇಳಿದರು.

‘ಓದುವ ಸಂಸ್ಕಾರ ಬೆಳೆಸುವುದು, ಓದುವ ಸಂಸ್ಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪುಸ್ತಕವನ್ನು ಓದುವ ಮೂಲಕವೇ ಲೋಕಾರ್ಪಣೆಗೊಳಿಸಲಾಗುತ್ತಿದೆ. ಇದು ಕೂಡ ಈ ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು’ ಎಂದು ಅವರು ಹೇಳಿದರು.ಶೇಖಣ್ಣ ಕವಳಿಕಾಯಿ ಅವರು ‘ಅಲ್ಲಮಪ್ರಭು’ ಪುಸ್ತಕವನ್ನು ಓದುವ ಮೂಲಕ ದ್ವಿತೀಯ ಮುದ್ರಣವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಆಸಕ್ತ ಓದುಗರು, ಸಾಹಿತಿಗಳು ಪುಸ್ತಕ ಓದಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೊಸತನದ ಮೆರುಗು ನೀಡಿದರು.

ಕ್ಷಮಾ ವಸ್ತ್ರದ, ಸಾಹಿತಿ ಬಸವರಾಜ ಸೂಳಿಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

2 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

2 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

2 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

3 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

4 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

7 hours ago