ಬಿಸಿ ಬಿಸಿ ಸುದ್ದಿ

ತಿಂಗಳ ಬಸವ ಬೆಳಕು- ೯೮: ವಚನಗಳು ಕೇವಲ ಪದಗಳ ಪುಂಜವಲ್ಲ. ವಿದ್ಯೆ ಪಾಂಡಿತ್ಯವೂ ಅಲ್ಲ

ಶಹಾಪುರ : ಮನುಷ್ಯ ಜೀವನ ಎನ್ನುವುದೊಂದು ಅತಿ ಮಹತ್ವವಾದ ಶಿವ ಕರುಣಿಸಿದ ಪ್ರಸಾದ. ಇದನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಹೋಗಬೇಕು. ಕಾಲ ಕಾಲಕ್ಕೆ ಏನಾಗಬೇಕೋ ಅದು ಘಟಿಸುತ್ತಲೆ ಇರುತ್ತದೆ. ಒಳ್ಳೆಯವರ ಸಂಘ, ಶರಣರ- ಸಂತರ ಮಾತುಗಳನ್ನು ಕೀಲಾಗಿ ಇಟ್ಟುಕೊಂಡು ಬದುಕನ್ನು ಎದುರಿಸಬೇಕು. ಸಾವು ಬಂದಾಗ ನಗು ನಗುತ್ತಲೆ ಅದರ ತೆಕ್ಕೆಗೆ ಜಾರಬೇಕು ಎಂದು ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಏಕದಂಡಗಿ ಸಂಸ್ಥಾನ ಮಠದ ಪೂಜ್ಯ ಶ್ರೀ ಕಾಳಹಸ್ತೆಂದ್ರ ಸ್ವಾಮೀಜಿ ನುಡಿದರು.

ಬಸವಮಾರ್ಗ ಪ್ರತಿಷ್ಠಾನ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು -೯೮ ರ ಕಾರ್ಯಕ್ರಮದಲ್ಲಿ ಬಾರದು ಬಪ್ಪದು, ಬಪ್ಪದು ತಪ್ಪದು ಎಂಬ ವಿಷಯ ಕುರಿತು ಮಾತನಾಡಿದರು. ೧೨ ನೇ ಶತಮಾನದ ಬಸವಾದಿ ಶರಣರ ವಚನಗಳು ಮನುಷ್ಯರ ಬದುಕಿನಲ್ಲಿ ಆವರಿಸಿಕೊಂಡಿರುವ ಕತ್ತಲೆಯನ್ನು ಕಳೆಯುವ ಶಕ್ತಿ ಹೊಂದಿವೆ. ವಚನಗಳು ಕೇವಲ ಪದಗಳ ಪುಂಜವಲ್ಲ. ವಿದ್ಯೆ ಪಾಂಡಿತ್ಯವೂ ಅಲ್ಲ. ಜಗತ್ತಿನ ಸಚರಾಚರವೆಲ್ಲ ವ್ಯಾಪಿಸಿಕೊಂಡಿರುವ ಅನುಭಾವದ ಗಟ್ಟಿ ರಸಗವಳ.

ವಚನ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಇಂದಿಗೂ ಅನುಕರಣೀಯವಾಗಿರುವ ಕಡಕೋಳದ ಮಡಿವಾಳಪ್ಪ, ನಾಗಲಿಂಗ ಅಜ್ಜ ಅವರ ಜೀವನ ಪ್ರಸಂಗಗಳು ಕಣ್ತೆರೆಸುತ್ತವೆ. ಸರಿ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತವೆ. ಜೀವನ ಎನ್ನುವುದು ಬರೀ ಲಹರಿಯಲ್ಲಿ ಉಂಡೆದ್ದು ಹೋಗುವುದಕ್ಕೆ ಬಂದುದಲ್ಲ. ಪರೋಪಕಾರ, ವಿನಯ,ವಿವೇಕ, ಅಂತಃಕರಣದ ಮೂಲಕ ಸುತ್ತಲಿನ ಪ್ರಪಂಚವನ್ನು ಆರೋಗ್ಯಪೂರ್ಣಗೊಳಿಸಲು ಸಾಧ್ಯ.

ಸಾವು ಎನ್ನುವುದು ವಾಸ್ತವ ಸತ್ಯ. ಸದಾ ಬೆನ್ನ ಹಿಂದೆ ಅದು ಬೇತಾಳದಂತೆ ಇರುತ್ತದೆ. ಸಾವಿಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಸಾವು ಬಂದಾಗ ನಾವು ಯಾರೂ ಜೀವಿಸಲು ಸಾಧ್ಯವೆ ಇಲ್ಲ. ಸತ್ತೂ ಬದುಕುವ ಜೀವನವನ್ನು ಮನುಷ್ಯ ಸಮಾಜ ಅನುಸರಿಸಬೇಕು ಎಂದು ವಿವರವಾಗಿ ಶರಣರ ವಚನಗಳನ್ನು ಉಲ್ಲೇಖಿಸುತ್ತ ಮಾತನಾಡಿದರು.

ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಭವಿಷ್ಯ ,ವಾಸ್ತು, ದೇವರುಗಳೆಂಬುದೆ ಬಹುದೊಡ್ಡ ಸುಳ್ಳುಗಳು. ಶರಣರ ವಚನಗಳ ಓದಿನಿಂದ- ಅನುಭಾವದಿಂದ ನಮ್ಮೊಳಗಿನ ಅಂಧಕಾರವನ್ನು ಕಳೆದುಕೊಳ್ಳಬೇಕು. ಹೆಣ್ಣು ಗಂಡು, ಬಡವ ಬಲ್ಲಿದ ವರ್ಗ ವರ್ಣ ಎಂದು ವ್ಯತ್ಯಾಸವನ್ನು ಮಾಡದೆ ಎಲ್ಲರನ್ನೂ ಇವ ನಮ್ಮವ ಇವ ನಮ್ಮವ ಎಂದು ಪ್ರೀತಿಸಿ ಇರುವ ಜೀವನವನ್ನು ಅರ್ಥಪೂರ್ಣವಾಗಿ ಜೀವಿಸಬೇಕು. ಮೌಢ್ಯದ ಮಾರಿಯನ್ನು ಹೊಡೆದೊಡಿಸಬೇಕು ಎಂದು ಹೇಳಿದರು.

ಲಿಂ.ಸಿದ್ದಲಿಂಗಪ್ಪ ಕಾಕನಾಳೆ ಅವರ ಸ್ಮರಣೆಯಲ್ಲಿ ಜರುಗಿದ ಈ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಶಾಂತಾ ಗಿರೀಶ್ ಭಂಡಾರಿ ಉದ್ಘಾಟಿಸಿದರು. ಡಾ.ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಶಹಾಪುರ ನಗರ ಸಭೆಯ ಅಧ್ಯಕ್ಷೆ ಕಮಲಾಬಾಯಿ ಚಂದ್ರಶೇಖರ ಲಿಂಗದಳ್ಳಿ, ಹಿರಿಯ ಅಭಿಯಂತರ ಹುಸನಪ್ಪಕಟ್ಟಿಮನಿ, ಮಹಾರಾಜ ದಿಗ್ಗಿ ಮುಂತಾದವರನ್ನು ಪ್ರತಿಷ್ಠಾನ ಗೌರವಿಸಿ ಸತ್ಕರಿಸಿತು. ಸಾಕ್ಷಿ ಬಸವರಾಜ ಕುಂಬಾರ ಅವರಿಂದ ಪ್ರಾರ್ಥನೆ ಜರುಗಿತು. ಕಾರ್ಯಕ್ರಮವನ್ನು ಶಿವಣ್ಣ ಇಜೇರಿ, ಬಸವರಾಜ ಸಗರ ನಿರ್ವಹಿಸಿದರು.

ಸಭೆಯಲ್ಲಿ ವಿರೂಪಾಕ್ಷಿ ಸಿಂಪಿ, ಶರಣಪ್ಪ ಮೇದಾ, ಚಂದ್ರಶೇಖರ ಕಟ್ಟೀಮನಿ ಮುಡಬೂಳ, ಪ್ರಕಾಶ ರಾಜೂರು, ತಿಪ್ಪಣ್ಣ ಬಸವಕಲ್ಯಾಣ, ಶಿವಲಿಂಗಪ್ಪ ಸಾಹು, ಪಂಪಣ್ಣಗೌಡ ಮಳಗ, ಸಾಯಿ ಕುಮಾರ ಇಜೇರಿ, ಚಂದ್ರಶೇಖರ ಮಸ್ಕಿ, ಮಂಜುಳಾ ರಾಜೂರ, ದಾನಮ್ಮ ಗೊಲ್ಲಾಳಪ್ಪ ಘತ್ತರಗಿ, ಅನಿತಾ ಬಸವರಾಜ ಕುಂಬಾರ, ಶಿವಲೀಲಾ ವಡಿಗೇರಿ, ಭೀಮಬಾಯಿ ಜಮಾದಾರ ಮುಂತಾದವರು ಭಾಗವಹಿಸಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

17 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago