ಬೆಂಗಳೂರು: ನಾಡಿನ ಹೆಮ್ಮೆಯ ವಿಶ್ವಮಾನವ ಕವಿ ಕುವೆಂಪುರವರ ಜನ್ಮದಿನವಾದ ಡಿಸೆಂಬರ್ 29ರಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿ- ಯುವಜನರಿಗಾಗಿ ‘ನೆಲದ ಪದ ಯೂತ್ ಫೆಸ್ಟ್ ಯುವಜನೋತ್ಸವವನ್ನು ಬೆಂಗಳೂರಿನ ಸ್ಫೂರ್ತಿಧಾಮದಲ್ಲಿ ಆಯೋಜಿಸಲಾಗಿದೆ.
ಸಮಾಜವನ್ನು ಜಾತಿ-ಧರ್ಮಗಳಾಗಿ ಒಡೆದು, ಜನಪದರ ಚಿಂತನೆಗಳನ್ನು, ಕಲಾಭಿವ್ಯಕ್ತಿಯನ್ನು ಮರೆಮಾಚಿ ಬಹುಜನರ ವಿರೋಧಿ ಸಾಂಸ್ಕೃತಿಕ ರಾಜಕಾರಣವನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಬಹುತ್ವದ ತಾತ್ವಿಕತೆಯ ಬದಲು ಏಕರೂಪ ನಿರಂಕುಶತೆಯನ್ನೂ, ನೆಲಮೂಲದ ಸಂಸ್ಕೃತಿಯ ಬದಲು ಆಳುವವರ ಸಂಸ್ಕೃತಿಯನ್ನೂ ಹತ್ತು ಹಲವು ರೀತಿಗಳಲ್ಲಿ ನಮ್ಮ ಬದುಕಿನೊಳಕ್ಕೆ ಬುದ್ದಿಯೊಳಕ್ಕೆ ತೂರಿಸುತ್ತಿದ್ದಾರೆ.
ಇದಕ್ಕೆ ಮುಖಾಮುಖಿಯಾಗಬೇಕೆಂದರೆ, ಎಲ್ಲ ಜಾತಿ, ಧರ್ಮ, ಭಾಷೆ, ಲಿಂಗ, ಪ್ರದೇಶಗಳಿಗೆ ಸೇರಿದ ಸಾಮಾನ್ಯ ಜನರ ಕೂಡಿಬಾಳುವ ಬದುಕಿನ ತತ್ವವನ್ನು ಮತ್ತೊಮ್ಮೆ ಮಗದೊಮ್ಮೆ ಮನಸ್ಸಿಗಿಳಿಸಿಕೊಳ್ಳಬೇಕು. ಅವುಗಳನ್ನು ಸಾರುವ ನಮ್ಮದೇ ನೆಲಮೂಲದ ಹಾಡು, ಕಥೆ, ಕಾವ್ಯ, ಕುಣಿತ, ವಾದ್ಯಗಳ ಲಯವನ್ನು ಮೈಗೂಡಿಸಿಕೊಂಡ ಯುವ ಸಮುದಾಯ ತನ್ನದೇ ಭಾಷೆಯಲ್ಲಿ ಮಾತಾಡಬೇಕು, ಹಾಡಬೇಕು, ಕುಣಿಯಬೇಕು.
ಆ ಮೂಲಕ ಮುಂಬರುವ ತಲೆಮಾರುಗಳು ಆಧಿಪತ್ಯದ ಚಿಂತನೆಗಳಿಂದ ಮುಕ್ತವಾಗಿ ಆರೋಗ್ಯಕರವಾದ ಬಹುಆಯಾಮಗಳ ಸಾಂಸ್ಕೃತಿಕ ಪರಿಸರವನ್ನು ಕಟ್ಟಿಕೊಳ್ಳಲು ಮುಂದಡಿಯಿಡಬೇಕು ಎಂಬುದು ಈ ಯುವಜನೋತ್ಸವದ ಉದ್ದೇಶವಾಗಿದೆ.
ಈ ಯುವಜನೋತ್ಸವದಲ್ಲಿ ಹಾಡು, ಕವಿತೆ, ವಾದ್ಯ, ನಾಟ್ಯ, ನಟನೆ, ಕಲೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡದ ಸಂವೇದನಾಶೀಲ ಸಂಗೀತ ನಿರ್ದೇಶಕರಾದ ಡಾ. ಹಂಸಲೇಖ, ಮುಖ್ಯ ಅತಿಥಿಗಳಾಗಿ ಖ್ಯಾತ ಗಾಯಕಿ ಮತ್ತು ಕಲಾವಿದರಾದ ಎಂ.ಡಿ.ಪಲ್ಲವಿ ಮತ್ತು ಕನ್ನಡದ ಪ್ರತಿಭಾವಂತ ಯುವ ನಿರ್ದೇಶಕರಾದ ಮಂಸೋರೆ ಪಾಲ್ಗೊಳ್ಳುತ್ತಿದ್ದಾರೆ.
ದಯವಿಟ್ಟು ಪತ್ರಿಕಾ/ಮಾಧ್ಯಮ ಮಿತ್ರರು ತಪ್ಪದೇ ಡಿಸೆಂಬರ್ 29ರಂದು ನಡೆಯಲಿರುವ ಯುವಜನೋತ್ಸವದ ವರದಿ ಮಾಡಬೇಕೆಂದು ಮನವಿ ಮಾಡುತ್ತೇವೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…