ಸುರಪುರ: ಕಳೆದ ಕೆಲ ತಿಂಗಳುಗಳ ಹಿಂದೆ ದೇವಾಪುರ ಗ್ರಾಮ ಪಂಚಾಯತಿಯ ಅರಳಹಳ್ಳಿ ಗ್ರಾಮದಲ್ಲಿನ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬಳು ನಿಧನರಾಗಿದ್ದರು.ಇವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿಸೆಂಬರ್ ೨೭ ರಂದು ಚುನಾವಣೆ ನಡೆದಿದ್ದು ಗುರುವಾರ ಮತ ಎಣಿಕೆ ನಡೆದು ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿ ಗೆಲುವು ಸಾಧಿಸಿದರು.
ಅನುಸೂಚಿತ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿ ದಂಡಮ್ಮ ಬಿಶೆಟ್ಟೆಪ್ಪ ಹಾಗು ಬಿಜೆಪಿ ಬೆಂಬಲಿತ ಅಭ್ಯಾರ್ಥಿಯಾಗಿ ಈಶ್ವರಿ ದಶರಥ ಸ್ಪರ್ಧಿಸಿದ್ದರು.ಒಟ್ಟು ೧೧೭೩ ಮತದಾರರಲ್ಲಿ ೯೦೩ ಮತಗಳು ಚಲಾವಣೆಗೊಂಡಿದ್ದವು,ಅವುಗಳಲ್ಲಿ ೧೭ ಮತಗಳು ತಿರಸ್ಕೃತಗೊಂಡಿರುವುದು ಮತ ಎಣಿಕೆಯಲ್ಲಿ ತೆಳಿದುಬಂದಿದ್ದು ಇನ್ನುಳಿದ ೮೮೬ ಮತಗಳಲ್ಲಿ ದಂಡಮ್ಮ ಬಿಶೆಟ್ಟರ್ ೪೭೫ ಮತಗಳನ್ನು ಪಡೆದರೆ ಪರಾಜಿತ ಅಭ್ಯಾರ್ಥಿ ಈಶ್ವರಿ ದಶರಥ ಅವರು ೪೧೧ ಮತಗಳನ್ನು ಪಡೆದು ೬೪ ಮತಗಳಿಂದ ಪರಾಭವಗೊಂಡರು.
ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿ ದಂಡಮ್ಮ ಬಿಶೆಟ್ಟರ್ ಗೆಲುವು ಸಾಧಿಸುತ್ತಿದ್ದಂತೆ ದೇವಾಪುರ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಸಂಭ್ರಮಾಚರಿಸಿದರು.ಅಲ್ಲದೆ ದೇವಾಪುರ ಗ್ರಾಮದಲ್ಲಿರುವ ಬಸವೇಶ್ವರ ನಾಮಫಲಕ ಹಾಗು ಅಡವಿಲಿಂಗ ಮಹಾರಾeರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಅನೇಕ ಜನ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…