ಸೊಲ್ಲಾಪುರ : ಮಹಾರಾಷ್ಟ್ರದ ಗಡಿಭಾಗದಲ್ಲಿ ಸಾಹಿತ್ಯ ಚಟುವಟಿಕೆಗಳು ನಿಂತ ನೀರಿನಂತಾಗಿದ್ದವು. ಯುವ ಸಾಹಿತಿ ಸೋಮಶೇಖರ ಜಮಶೆಟ್ಟಿ ಅವರ ಅವಧಿಯಲ್ಲಿ ಅವುಗಳಿಗೆ ಹೊಸ ರೂಪ ನೀಡಿ ಸಾಹಿತ್ಯ ಚಟುವಟಿಕೆಗಳನ್ನು ಕ್ರಿಯಾಶೀಲಗೋಳಿಸಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೋಳಿಸಬೇಕು ಎಂದು ಸೊಲ್ಲಾಪುರದ ಹಿರಿಯ ಸಾಹಿತಿ ಡಾ. ಮಧುಮಾಲಾ ಲಿಗಾಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಕ್ಕಲಕೋಟ ಪಟ್ಟಣದ ವೀರಶೈವ ಲಿಂಗಾಯತ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟç ಗಡಿನಾಡು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಯುವ ಸಾಹಿತಿ ಸೋಮಶೇಖರ ಜಮಶೆಟ್ಟಿ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ, ಗಡಿಭಾಗದಲ್ಲಿ ಸ್ವಚ್ಛ ಮನಸ್ಸಿನಿಂದ ಕನ್ನಡ ಕಟ್ಟುವ ಕಾರ್ಯ ಮುಂದುವರಿಯಲಿ, ಇನ್ನೂ ಬೆಳೆಯುವ ಹಂತದಲ್ಲಿನ ಸಾಹಿತಿಗಳಿಗೆ ಪೂರಕವಾಗಿ ಸಹಕಾರ ನೀಡಿ ಅವರ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡಲು ಕಸಾಪ ಮುಂದಾಗಬೇಕು. ಆದಷ್ಟು ಬೇಗ ತಾಲ್ಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಲಿ ಎಂದರು.
ಪೂಜ್ಯ ಬಸವಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿ ಇದೆ. ರಾಷ್ಟ್ರಮಟ್ಟದಲ್ಲಿ ಕನ್ನಡಕ್ಕೆ ಇರುವಷ್ಟು ಮಹತ್ವ ಬೇರಾವ ಭಾಷೆಗೂ ಇಲ್ಲ. ನಾವು ಇದನ್ನು ಅರ್ಥ ಮಾಡಿಕೊಂಡು ಕನ್ನಡ ಭಾಷೆಯನ್ನು ಬೆಳಸಬೇಕು. ಯುವ ಸಾಹಿತಿ ಸೋಮಶೇಖರ ಜಮಶೆಟ್ಟಿ ಅವರು ತಮ್ಮ ಅವಧಿಯಲ್ಲಿ ಕಸಾಪ ವತಿಯಿಂದ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಮಹಾರಾಷ್ಟ್ರದ ಗಡಿಭಾಗದಲ್ಲಿ ಕನ್ನಡದ ಕಂಪು ಹರಡಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಹೋರಾಟಗಾರ ಡಾ|| ಆರ್.ಕೆ.ಪಾಟೀಲ ಮಾತನಾಡಿ, ಕನ್ನಡ ಕಟ್ಟುವಲ್ಲಿ ಒಗ್ಗಟ್ಟಿನ ಪ್ರದರ್ಶನ ಹಾಗೂ ಗಟ್ಟಿತನದ ಮನಸ್ಸು ಮಾಡಬೇಕು. ಕನ್ನಡ ಕಟ್ಟುವ ಕೆಲಸದಲ್ಲಿ ಸಾಕಷ್ಟು ಅಡಚಣೆ ಉಂಟಾಗುವುದು ಸಹಜ. ಅಂತಹ ಎಲ್ಲ ಸಂಕಷ್ಟಗಳಿಗೆ ಎದೆಗುಂದದೇ ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದ ಅವರು ಯುವ ಸಾಹಿತಿ, ಪತ್ರಕರ್ತ ಸೋಮಶೇಖರ ಜಮಶೆಟ್ಟಿ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನವ ಚೈತನ್ಯ ತಂದು ಕೊಡಲಿದ್ದಾರೆ ಎಂದರು.
ಪದಗ್ರಹಣ ಸ್ವೀಕರಿಸಿ ಮಾತನಾಡಿದ ಕಸಾಪ ಮಹಾರಾಷ್ಟ್ರ ಗಡಿನಾಡು ಘಟಕದ ನೂತನ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಅವರು, ನಾಡು-ನುಡಿ, ಗಡಿ ಸೇವೆಗೆ ಬದ್ಧನಾಗಿ ಕಸಾಪವನ್ನು ಮಾದರಿಯನ್ನಾಗಿಸುವ ಸಂಕಲ್ಪ ತೊಟ್ಟಿರುವೆ. ಕಸಾಪವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲನಾಗಿ ಕೆಲಸ ಮಾಡುವೆ. ಮಹಾರಾಷ್ಟçದ ಗಡಿಭಾಗದಲ್ಲಿ ಹಿರಿಯ ಸಾಹಿತಿಗಳ ಮತ್ತು ಶ್ರೀಗಳ ನೇತೃತ್ವದಲ್ಲಿ ಕನ್ನಡ ಕಟ್ಟುವ ಕಾಯಕ ನಿರಂತರವಾಗಿ ನಡೆಸುತ್ತೇನೆ. ಉತ್ತಮ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ತದನಂತರ ಕಸಾಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ಮಸೂತಿ ಅವರು ಕಸಾಪ ಮಹಾರಾಷ್ಟç ಗಡಿನಾಡು ಘಟಕದ ನೂತನ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ಅವರಿಗೆ ಕನ್ನಡ ಧ್ವಜ ನೀಡುವುದರ ಮೂಲಕ ಅಧಿಕಾರ ಹಸ್ತಾಂತಿಸಿದರು. ಈ ಪದಗ್ರಹಣ ಕಾರ್ಯಕ್ರಮಕ್ಕೆ ಉದಯಗಿರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ|| ರಮೇಶ ಮುಲಗೆ, ಮುಂಬೈಯಿಯ ವಿಶ್ವೇಶ್ವರ ಮೇಟಿ, ಬಸವಂತರಾಯ ಅಳಗಿ, ವಿಠ್ಠಲ ಮಣೂರೆ ಸೇರಿದಂತೆ ಮೊದಲಾದವರು ಶುಭ ಸಂದೇಶವನ್ನು ತಿಳಿಸಿದ್ದಾರೆ.
ಮೊದಲಿಗೆ ಪೂಜ್ಯ ಬಸವಲಿಂಗ ಸ್ವಾಮಿಗಳು ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈದರ್ಗಿ ಯುವ ಸಾಹಿತಿ ಗಿರಿಶ ಜಕಾಪುರೆ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು. ಆದರ್ಶ ಕನ್ನಡ ಬಳಗದ ಖಜಾಂಚಿ ಶರಣಪ್ಪ ಫುಲಾರಿ ಸ್ವಾಗತಿಸಿದರು. ಶಿಕ್ಷಕ ವಿದ್ಯಾಧರ ಗುರವ ನಿರೂಪಿಸಿದರು. ಕಲ್ಮೇಶ ಅಡಳಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಮತ್ತು ಕನ್ನಡ ಹೊರಾಟಗಾರ ಸುಭಾಷ ಬೆಳ್ಳುಬ್ಬಿ, ಶಿಕ್ಷಕರ ಸಮಿತಿಯ ರಾಜಶೇಖರ ಉಮರಾಣಿಕರ, ಡಾ|| ಗುರುಸಿದ್ಧಯ್ಯ ಸ್ವಾಮಿ, ಡಾ|| ರಾಜಕುಮಾರ ಹಿರೇಮಠ, ಆದರ್ಶ ಕನ್ನಡ ಬಳಗದ ಅಧ್ಯಕ್ಷರಾದ ಮಲಿಕಜಾನ್ ಶೇಖ, ಉಪಾಧ್ಯಕ್ಷ ಬಸವರಾಜ ಧಾನಶೆಟ್ಟಿ, ಮಹೇಶ ಮೇತ್ರಿ, ಸಂತೋಷ ಪರಿಟ, ಗಣಪತಿ ಕಿಣಗಿ, ಲಕ್ಷ್ಮೀ ದೊಡ್ಡಮನಿ, ಧರೆಪ್ಪ ತೋಳನೂರೆ, ಗುರುಬಸು ವಗ್ಗೋಲಿ, ಬಸವರಾಜ ಗುರವ, ಶಿವರಾಜ ಬಿರಾಜದಾರ, ಪ್ರಮೋದ ಪಾಟೀಲ, ಶ್ರೀಶೈಲ ರಬ್ಬಾ, ವಿಠ್ಠಲ ವಿಜಾಪುರೆ, ಶಿವಪುತ್ರ ಹಳಗೋದೆ, ಲಕ್ಷ್ಮೀಪುತ್ರ ಕಿರನಳ್ಳಿ, ಬಾಬುರಾವ ರಾಮದೆ, ಅಶೋಕ ನೆಲ್ಲಗಿ, ಡಿ.ಎಚ್.ಬಜೆ, ಎಸ್.ಕೆ.ಬಿರಾಜದಾರ, ಕಲ್ಯಾಣರಾವ ಪಾಟೀಲ, ರಾಜು ಗೊಬ್ಬೂರ, ಯಲ್ಲಪ್ಪ ಇಟೆನವರು, ಸಂಗಣ್ಣ ಫತಾಟೆ, ಸೈಬಣ್ಣ ಜಾಧವ, ಸುನೀಲ ಸವಳಿ, ದಿನೇಶ ಥಂಬದ, ಅನಿಲ ಪಾಟೀಲ, ಅ.ಬಾ.ಚಿಕ್ಕಮಣೂರ, ಶರಣು ಕೋಳಿ, ಖುಷಿ ಜಮಶೆಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಚೌಕಟ್ಟಿನಲ್ಲಿ : ಮಹಾರಾಷ್ಟçದ ಗಡಿಭಾಗದಲ್ಲಿ ಹಿರಿಯ ಸಾಹಿತಿಗಳ ಮತ್ತು ಶ್ರೀಗಳ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತೇನೆ. ನನ್ನ ಅವಧಿಯಲ್ಲಿ ಅಕ್ಕಲಕೋಟ, ಸೊಲ್ಲಾಪುರ ಮತ್ತು ಜತ್ತ ತಾಲೂಕಿನಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯವನ್ನು ನಿರ್ಮಾಣ ಮಾಡುವ ಸಂಕಲ್ಪ ತೊಟ್ಟಿರುವೆ. -ಸೋಮಶೇಖರ ಜಮಶೆಟ್ಟಿ. ಅಧ್ಯಕ್ಷರು, ಕಸಾಪ ಗಡಿನಾಡು ಘಟಕ, ಮಹಾರಾಷ್ಟ್ರ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
ಗಡಿಕನ್ನಡಕೆ ಶುಭದಿನಗಳು ಬರಲಿ, ನೂತನ ಅಧ್ಯಕ್ಷರಿಗೆ ಶುಭಾಶಯಗಳು