ಆಳಂದ: ಕೋವಿಡ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಜಿಲ್ಲೆಯಲ್ಲಿ ರಾಲಿ, ಪ್ರತಿಭಟನೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಸಹ ಈ ಆದೇಶ ಧಿಕ್ಕರಿಸಿ ಆಳಂದದಲ್ಲಿ ಸೋಮವಾರ ನಡೆದಂತಹ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸುಭಾಸ ಗುತ್ತೇದಾರ್ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದ ಎಂಎಲ್‍ಸಿಗಳು, ಜಿಲ್ಲಾ ಪ್ರಮುಖರು ಅನೇಕರು ಪಾಲ್ಗೊಂಡಿದ್ದರು.
ಕೋವಿಡ್ ನಿಯಮ ಸಾರಾಸಗಟಾಗಿ ಉಲ್ಲಂಘಿಸಿರುವ ಸದರಿ ರ್ಯಾಲಿಯಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧ ಕಾನೂನು ಕ3ಮ ಜರುಗಿಸುವಂತೆ ಕೆಪಿಸಿಸಿ ಸದಸ್ಯರಾದ ಹಣಮಂತರಾವ ಭೂಸನೂರ್ ಜಿಲ್ಲಾಧಿಆರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈಗಾಗಲೇ ಕಡಗಂಚಿಯಲ್ಲಿ ಕೋವಿಡ್ ಸಂಕು ಬಂದು ನಿಂತಿದೆ. ಇದಲ್ಲದೆ ಅನೇಕ ಹಳ್ಳಿಗಳಲ್ಲೂ ಸೋಂಕು ಹರಡುತ್ತಿದೆ. ಇದೆಲ್ಲ ಗೊತ್ತಿದ್ದರೂ ಯಾವುದೋ ಕಾರಣ ಮುಂದೆ ಮಾಡಿಕೊಂಡು ನೂರಾರು ಜನ ಸೇರಿಸಿ ಪ್ರತಿಭಟನೆ ನಡೆಸಿದ್ದು ಯಾವ ನ್ಯಾಯ ಈ ನೆಲದ ಕಾನೂನು ಸಾಮಾನ್ಯ ಜನರಿಗೂ, ಶಾಸಕರಿಗೂ, ಅವರ ಬೆಂಬಲಿಗರಿಗೂ ಒಂದೇ ಆಗಿರಬೇಕು.
ಪೆÇಲೀಸರು, ತಹಶೀಲ್ದಾರ್ ಎಲ್ಲರೂ ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯಿಸಬೇಕು. ಆದರೆ ಆಳಂದದಲ್ಲಿ ಮಾತ್ರ ಶಾಸಕರಿಗೊಂದು, ಸಾಮಾನ್ಯರಿಗೊಂದು ಕಾನೂನು ಇದ್ದಂತಿದೆ ಎಂದು ಭೂಸನೂರ್ ಹೇಳಿಕೆಯ ಮೂಲಕ ಶಾಸಕರಿಗೆ, ಬಿಜೆಪಿಯವರಿಗೆ ಕುಟುಕಿದ್ದಾರೆ.
ಕೋವಿಡ್ ಪಿಡುಗು ರಾಷ್ಟ್ರೀಯ ವಿಪತ್ತಾಗಿದೆ. ಇದೇ ಕಾನೂನಿನ ಅಡಿಲ್ಲಿಯೇ ಕ್ರಮಗಳನ್ನು ಜರುಗಿಸೋದಾಗಿ ಸರಕಾರ ಹೇಳಿದೆ, ಆಳಂದದ ಬಿಡೆಪಿ ರಾಲಿ ಮಾಡಿದವರು, ಪಾಲ್ಗೊಂಡವರೆಲ್ಲರ ವಿರುದ್ಧ ಇದೀಗ ಈ ನಿಯಮದಡಿ ಪ್ರಕರಣ ನೋಂದಣಿ ಮಾಡಿ ಕ್ರಮ ಜರುಗಿಸಲಿ, ಅಂದಾಗ ಎಲ್ಲರಿಗೂ ಒಂದೇ ಕಾನೂನು ಎಂಬುದು ಜನರ ಅನುಭವಕ್ಕೆ ಬರುತ್ತದೆ.
ಜಿಲ್ಲಾಡಳಿತ ಆಡಳಿತ ಪಕ್ಷದವರ ಕೈಗೊಂಬೆಯಾಗದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ನರ ಪ್ರಾಣ ಸಂರಕ್ಷಣೆಗೆ ಮುಂದಾಗಲಿ, ಆಳಂದ ಪೆÇಲೀಸರು , ಅಲ್ಲಿನ ತಹಶೀಲ್ದಾರರು ಇಂತಹ ಪ್ರಕರಣಗಳಲ್ಲಿ ಜನಪರವಾಗಿ ನಿಲ್ಲುವ ಧೋರಣೆ ಪ್ರದರ್ಶಿಸಲಿ ಎಂದೂ ಹಣಮಂತರಾವ ಭೂಸನೂರ್ ಆಗ್ರಹಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…