ಆಳಂದದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ನಡೆದ ಪ್ರತಿಭಟನಾ ರ್ಯಾಲಿಗೆ ತೀವ್ರ ಆಕ್ಷೇಪ

0
36
ಬಿಜೆಪಿ ಶಾಸಕರು ಹಾಗೂ ಗುತ್ತೇದಾರ್ ಬೆಂಬಲಿಗರ ವಿರುದ್ಧ ಕಾನೂನು ಕ್ರಮಕ್ಕೆ ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್ ಒತ್ತಾಯ.

ಆಳಂದ: ಕೋವಿಡ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಜಿಲ್ಲೆಯಲ್ಲಿ ರಾಲಿ, ಪ್ರತಿಭಟನೆ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರೂ ಸಹ ಈ ಆದೇಶ ಧಿಕ್ಕರಿಸಿ ಆಳಂದದಲ್ಲಿ ಸೋಮವಾರ ನಡೆದಂತಹ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸುಭಾಸ ಗುತ್ತೇದಾರ್ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದ ಎಂಎಲ್‍ಸಿಗಳು, ಜಿಲ್ಲಾ ಪ್ರಮುಖರು ಅನೇಕರು ಪಾಲ್ಗೊಂಡಿದ್ದರು.

ಕೋವಿಡ್ ನಿಯಮ ಸಾರಾಸಗಟಾಗಿ ಉಲ್ಲಂಘಿಸಿರುವ ಸದರಿ ರ್ಯಾಲಿಯಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧ ಕಾನೂನು ಕ3ಮ ಜರುಗಿಸುವಂತೆ ಕೆಪಿಸಿಸಿ ಸದಸ್ಯರಾದ ಹಣಮಂತರಾವ ಭೂಸನೂರ್ ಜಿಲ್ಲಾಧಿಆರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಈಗಾಗಲೇ ಕಡಗಂಚಿಯಲ್ಲಿ ಕೋವಿಡ್ ಸಂಕು ಬಂದು ನಿಂತಿದೆ. ಇದಲ್ಲದೆ ಅನೇಕ ಹಳ್ಳಿಗಳಲ್ಲೂ ಸೋಂಕು ಹರಡುತ್ತಿದೆ. ಇದೆಲ್ಲ ಗೊತ್ತಿದ್ದರೂ ಯಾವುದೋ ಕಾರಣ ಮುಂದೆ ಮಾಡಿಕೊಂಡು ನೂರಾರು ಜನ ಸೇರಿಸಿ ಪ್ರತಿಭಟನೆ ನಡೆಸಿದ್ದು ಯಾವ ನ್ಯಾಯ ಈ ನೆಲದ ಕಾನೂನು ಸಾಮಾನ್ಯ ಜನರಿಗೂ, ಶಾಸಕರಿಗೂ, ಅವರ ಬೆಂಬಲಿಗರಿಗೂ ಒಂದೇ ಆಗಿರಬೇಕು.

ಪೆÇಲೀಸರು, ತಹಶೀಲ್ದಾರ್ ಎಲ್ಲರೂ ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯಿಸಬೇಕು. ಆದರೆ ಆಳಂದದಲ್ಲಿ ಮಾತ್ರ ಶಾಸಕರಿಗೊಂದು, ಸಾಮಾನ್ಯರಿಗೊಂದು ಕಾನೂನು ಇದ್ದಂತಿದೆ ಎಂದು ಭೂಸನೂರ್ ಹೇಳಿಕೆಯ ಮೂಲಕ ಶಾಸಕರಿಗೆ, ಬಿಜೆಪಿಯವರಿಗೆ ಕುಟುಕಿದ್ದಾರೆ.

ಕೋವಿಡ್ ಪಿಡುಗು ರಾಷ್ಟ್ರೀಯ ವಿಪತ್ತಾಗಿದೆ. ಇದೇ ಕಾನೂನಿನ ಅಡಿಲ್ಲಿಯೇ ಕ್ರಮಗಳನ್ನು ಜರುಗಿಸೋದಾಗಿ ಸರಕಾರ ಹೇಳಿದೆ, ಆಳಂದದ ಬಿಡೆಪಿ ರಾಲಿ ಮಾಡಿದವರು, ಪಾಲ್ಗೊಂಡವರೆಲ್ಲರ ವಿರುದ್ಧ ಇದೀಗ ಈ ನಿಯಮದಡಿ ಪ್ರಕರಣ ನೋಂದಣಿ ಮಾಡಿ ಕ್ರಮ ಜರುಗಿಸಲಿ, ಅಂದಾಗ ಎಲ್ಲರಿಗೂ ಒಂದೇ ಕಾನೂನು ಎಂಬುದು ಜನರ ಅನುಭವಕ್ಕೆ ಬರುತ್ತದೆ.

ಜಿಲ್ಲಾಡಳಿತ ಆಡಳಿತ ಪಕ್ಷದವರ ಕೈಗೊಂಬೆಯಾಗದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಮೂಲಕ ನರ ಪ್ರಾಣ ಸಂರಕ್ಷಣೆಗೆ ಮುಂದಾಗಲಿ, ಆಳಂದ ಪೆÇಲೀಸರು , ಅಲ್ಲಿನ ತಹಶೀಲ್ದಾರರು ಇಂತಹ ಪ್ರಕರಣಗಳಲ್ಲಿ ಜನಪರವಾಗಿ ನಿಲ್ಲುವ ಧೋರಣೆ ಪ್ರದರ್ಶಿಸಲಿ ಎಂದೂ ಹಣಮಂತರಾವ ಭೂಸನೂರ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here