ಇತ್ತೀಚೆಗೆ ಚಿಕ್ಕ ವಯಸ್ಸಿನವರೂ ಕೂಡ ಲಕ್ವ ಅಥವಾ ಪಾರ್ಶ್ವವಾಯು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ‘ಸೈಲೆಂಟ್ ಸ್ಟ್ರೋಕ್’ ಅಥವಾ ಸದ್ದಿಲ್ಲದ ಲಕ್ವಕ್ಕೆ ಹಲವರು ಒಳಗಾಗುತ್ತಿದ್ದು, ಇದಕ್ಕೆ ಕಾರಣಗಳೇನು? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬಹುದು ಎಂಬುದನ್ನು ವಿಶ್ವ ಪಾರ್ಶ್ವವಾಯು ಜಾಗೃತಿ ದಿನ (ಅ.29)ರಂದು ಆಯುರ್ವೇದ ತಜ್ಞರಾದ ಡಾ.ಮಧುಶ್ರೀ ರಾಗಿಯವರು ವಿವರಿಸಿದ್ದಾರೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತ ಪರಿಚಲನೆಗೆ ಅಡ್ಡಿಯಾಗುವುದು ಸೈಲೆಂಟ್ ಸ್ಟ್ರೋಕ್ ಅಥವಾ ಸದ್ದಿಲ್ಲದ ಪಾರ್ಶ್ವವಾಯುವಿಗೆ ಕಾರಣ. ಇದರಿಂದ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಪಾರ್ಶ್ವವಾಯು ಸಂಭವಿಸಬಹುದು. ಜೊತೆಗೆ ಇದರ ಸಾಧ್ಯತೆ ಮೂರು ಪಟ್ಟು ಅಧಿಕ ಎನ್ನಬಹುದು ಮತ್ತು ಮೆದುಳಿನಲ್ಲಿ ತೀವ್ರತರದ ಹಾನಿ ಉಂಟಾಗುವ ಸಾಧ್ಯತೆ ಕೂಡ ಜಾಸ್ತಿ.
ಇದು ಲಕ್ವ ಹೊಡೆಯುವುದಕ್ಕಿಂತ ಮುನ್ನ ಮತ್ತು ಈ ಆಘಾತದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಸಾಮಾನ್ಯ. ಈ ಹಿಂದಿನ ಅಧ್ಯಯನಗಳ ಪ್ರಕಾರ ಪ್ರತಿ ಐವರು ಲಕ್ಷಣರಹಿತರಾದ ವ್ಯಕ್ತಿಗಳಲ್ಲಿ ಒಬ್ಬರಿಗೆ ಈ ‘ಸೈಲೆಂಟ್ ಬ್ರೇನ್ ಸ್ಟ್ರೋಕ್’ ಆಗಬಹುದು ಎನ್ನುತ್ತಾರೆ ಆಯುರ್ವೇದ ತಜ್ಞೆ ಮಧುಶ್ರೀ ಇಲ್ಲಿ
ಈ ಸೈಲೆಂಟ್ ಬ್ರೇನ್ ಇನ್ಫಾರ್ಕ್ಟ್ (ರಕ್ತದ ಚಲನೆ ಸಮರ್ಪಕವಾಗಿರದೆ ಆ ಭಾಗದಲ್ಲಿ ಯಾವುದೇ ಜೀವವಿರುವುದಿಲ್ಲ, ಅದು ಮರಗಟ್ಟಿರುತ್ತದೆ) ಅನ್ನು ತಡೆಗಟ್ಟಲು ಮತ್ತು ಅದನ್ನು ನಿರ್ವಹಣೆ ಮಾಡಲು ಕೆಲವು ಕ್ರಮಗಳಿವೆ. ಈ ಮರಗಟ್ಟುವಿಕೆ ಸಾಮಾನ್ಯವಾಗಿ ಮೆದುಳು ಆವರಿಸಿಕೊಂಡಿರುವ ಜಾಗವನ್ನು ಅವಲಂಬಿಸಿರುತ್ತದೆ.
ಒಂದು ವೇಳೆ ಇದು ಪ್ರಮುಖ ಅಂಗಗಳು ಅಥವಾ ಜಾಗವನ್ನು ಒಳಗೊಳ್ಳದಿದ್ದರೆ ರೋಗಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಪ್ರಮುಖ ಅಂಗಾಂಗಗಳಿರುವ ಜಾಗವು ಮರಗಟ್ಟಿದ್ದರೆ ಪಾರ್ಶ್ವವಾಯುವಿನ ಪ್ರಮಾಣ ಹೆಚ್ಚಾಗಿರುತ್ತದೆ. ಅಂತಹ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತದೆ ಎನ್ನುತ್ತಾರೆ ಆರ್ಯುವೇದ ತಜ್ಞೆ ಮಧುಶ್ರೀ ರಾಗಿ.
# ಎಂಆರ್‌ಐ ಮೂಲಕ ಪತ್ತೆ —
ಈ ಸದ್ದಿಲ್ಲದ ಲಕ್ವವನ್ನು ಸಾಮಾನ್ಯವಾಗಿ ಮೆದುಳಿನ ಸಿ.ಟಿ. ಮತ್ತು ಎಂ.ಆರ್.ಐ. ಸ್ಕ್ಯಾನ್ ಮೂಲಕ ಪತ್ತೆ ಮಾಡಲಾಗುತ್ತದೆ. ಸಿಟಿ ಸ್ಕ್ಯಾನ್‌ಗಿಂತ ಎಂ.ಆರ್.ಐ. ಉತ್ತಮವಾಗಿದೆ. ಇದು ಅತ್ಯಂತ ಸೂಕ್ಷ್ಮ ವ್ಯತ್ಯಾಸಗಳನ್ನೂ ಪತ್ತೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿರುವ ವಿಧಾನ ಹಾಗೂ ಮೆದುಳಿನ ಕ್ಷೀಣತೆ ಮೊದಲಾದ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬಹುದು.
ಮೆದುಳಿನಲ್ಲಿ ಉಂಟಾಗುವ ಈ ಲಕ್ವ ವಯಸ್ಸು ಮತ್ತು ಇತರ ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಹಿಂದಿನ ಹಲವಾರು ಅಧ್ಯಯನಗಳ ಪ್ರಕಾರ ವಿವಿಧ ರೋಗಗಳಲ್ಲಿ ಈ ಲಕ್ವದ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ರಕ್ತನಾಳಕ್ಕೆ ರಕ್ತ ಪೂರೈಕೆ ಸಮಸ್ಯೆ ಹೊಂದಿರುವ ಶೇ 30ರಷ್ಟು ರೋಗಿಗಳು ಈ ಲಕ್ವದ ಸಮಸ್ಯೆಯಿಂದ ಬಳಲುತ್ತಾರೆ ಎನ್ನುತ್ತಾರೆ ಆಯುರ್ವೇದ ತಜ್ಞೆ ಮಧುಶ್ರೀ ರಾಗಿ.
# ಡೆಮೆನ್ಶಿಯ ಸಾಧ್ಯತೆ —
ಇಲ್ಲಿ ಪ್ರಮುಖವಾದ ಆತಂಕವೆಂದರೆ ಪಾರ್ಶ್ವವಾಯು ಮರುಕಳಿಸಬಹುದು ಮತ್ತು ಸ್ಮರಣಶಕ್ತಿ ನಾಶವಾಗುವ ಡೆಮೆನ್ಶಿಯ ಕಾಣಿಸಿಕೊಳ್ಳಬಹುದು. ಈ ಹಿಂದಿನ ಹಲವಾರು ಅಧ್ಯಯನಗಳು ಮೆದುಳಿನಲ್ಲಿ ರಕ್ತ ಪರಿಚಲನೆಯಿಲ್ಲದೇ ಇರುವ ರೋಗಿಗಳ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗುತ್ತದೆ ಎಂಬುದನ್ನು ದೃಢಪಡಿಸಿವೆ. ಅಂದರೆ ಅವರಲ್ಲಿ ಗ್ರಹಣಶಕ್ತಿ, ನೆನಪಿನ ಶಕ್ತಿ ಗಣನೀಯವಾಗಿ ಕುಸಿಯುತ್ತದೆ ಎನ್ನುತ್ತಾರೆ ಡಾಕ್ಟರ್ ಮಧುಶ್ರೀ ರಾಗಿಯವರು.
ಈ ಸಮಸ್ಯೆ ಇರುವ ರೋಗಿಗಳಲ್ಲಿ ಯಾವುದೇ ಪ್ರಮುಖ ಲಕ್ಷಣ ಕಾಣಿಸಿಕೊಳ್ಳದಿರುವುದರಿಂದ ಪತ್ತೆ ಮಾಡುವುದು ಕಷ್ಟ. ಸಮಸ್ಯೆ ಅಂದರೆ ಮೆದುಳಿನಲ್ಲಿ ಮರಗಟ್ಟುವಿಕೆ ಜಾಸ್ತಿಯಾದಂತೆ ವ್ಯಕ್ತಿಯ ಗ್ರಹಣಶಕ್ತಿ, ನೆನಪಿನ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಅದನ್ನು ಪತ್ತೆ ಹಚ್ಚಿ ತಡೆಗಟ್ಟುವುದರಿಂದ ಈ ನೆನಪಿನ ಶಕ್ತಿ ಕಡಿಮೆಯಾಗುವುದನ್ನೂ ನಿಲ್ಲಿಸಬಹುದೇ ಎಂಬುದು ಇನ್ನೂ ಗೊತ್ತಾಗಿಲ್ಲ.
ಈ ಕಾರಣದಿಂದಾಗಿ ಎಲ್ಲಾ ರೋಗಿಗಳಲ್ಲಿ ಸೈಲೆಂಟ್ ಸ್ಟ್ರೋಕ್‌ಗೆ ಮೆದುಳಿನ ಎಂ.ಆರ್.ಐ. ಮಾಡಿಸುವುದು ಕಡ್ಡಾಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ತಪಾಸಣೆ ಮಾಡುವಾಗ ಹಲವಾರು ಸವಾಲುಗಳು ಎದುರಾಗುತ್ತವೆ.
ಪ್ರಮುಖ ಕಾರಣವೆಂದರೆ ಇದಕ್ಕೆ ಸಮರ್ಪಕವಾದ ಚಿಕಿತ್ಸೆಯ ಕೊರತೆ. ಕೇವಲ ವಯಸ್ಕರಲ್ಲಿ ಮಾತ್ರವಲ್ಲದೇ, ಸಿಕಲ್ ಸೆಲ್ (ಅನುವಂಶಿಕ ಕಾಯಿಲೆ– ತೀವ್ರತರದ ರಕ್ತಹೀನತೆಯಿದ್ದು, ಜೀವಕೋಶಗಳು ಕುಡುಗೋಲಿನಾಕಾರದಲ್ಲಿರುತ್ತವೆ) ಕಾಯಿಲೆ ಇರುವ ಮಕ್ಕಳಲ್ಲಿ ಕೂಡ ಈ ಸದ್ದಿಲ್ಲದ ಲಕ್ವ ಸಂಭವಿಸುತ್ತಿದೆ.
ಧೂಮಪಾನ ನಿಲ್ಲಿಸಿ, ವ್ಯಾಯಾಮ ಮಾಡಿ
ಅನಿಯಮಿತವಾದ ಹೃದಯಬಡಿತ ಇರುವ 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರಲ್ಲಿ ಸದ್ದಿಲ್ಲದ ಲಕ್ವದ ಅಪಾಯ ಹೆಚ್ಚು. ಅಂದರೆ ಉಳಿದವರಿಗಿಂತ ಎರಡು ಪಟ್ಟು ಅಧಿಕವಾಗಿರುತ್ತದೆ. ಅಧಿಕ ರಕ್ತದೊತ್ತಡ, ಹೆಚ್ಚು ಕೊಬ್ಬು, ಮಧುಮೇಹ, ಧೂಮಪಾನ, ಅತಿಯಾದ ಮದ್ಯ ಸೇವನೆಯಂತಹ ಚಟಗಳು ಇದ್ದರೆ ಈ ಲಕ್ವದ ಅಪಾಯದ ಪ್ರಮಾಣ ಹೆಚ್ಚು ಆಗಿರುತ್ತದೆ.
ಈ ಅಪಾಯವನ್ನು ಕಡಿಮೆ ಮಾಡಲು ಆ್ಯಂಟಿಪ್ಲೇಟ್‌ಲೆಟ್ ಔಷಧಿಗಳನ್ನು ತೆಗೆದುಕೊಳ್ಳಬೇಕು. ತಂಬಾಕು ಸೇವನೆಯನ್ನು ನಿಲ್ಲಿಸಬೇಕು, ವ್ಯಾಯಾಮ ಆರಂಭಿಸಬೇಕು ಮತ್ತು ಆರೋಗ್ಯಕರವಾದ ತೂಕವನ್ನು ಹೊಂದುವತ್ತ ಗಮನಹರಿಸಬೇಕು..! ಹಿಗೆಲ್ಲಾ ಎನ್ನುತ್ತಾರೆ ಆಯುರ್ವೇದ ಡಾಕ್ಟರ್ ಮಧುಶ್ರೀ ರಾಗಿಯವರು..!
ಇಲ್ಲಿ ವಿಡಿಯೋದಲ್ಲಿ ತೋರಿಸಲಾದ ‘ಲಕ್ವ’ ಹೊಡೆದ ರೋಗಿಯನ್ನು ಈ ಮಧುಶ್ರೀ ರಾಗಿಯವರು ಮೊದಲು ಆ 82 ವರ್ಷದ ವಯೋವೃದ್ದೆಗೆ ಒಟ್ಟು 25 ದಿನಗಳ ಕಾಲ ತಮ್ಮ ಈ ಆಯುರ್ವೇದ ಚಿಕಿತ್ಸೆ ಕೊಟ್ಟರು ಡಾ.ಮಧುಶ್ರೀ ರಾಗಿಯವರು.
ಮೊದಲ 5 ದಿನಗಳ ಕಾಲ ರಕ್ತದೊತ್ತಡ ನಿಯಂತ್ರಿಸಲು ಶಿರೋಧಾರಾ ಚಿಕಿತ್ಸೆ, ನಂತರ 8 ದಿನಗಳ ಕಾಲ ಸರ್ವಾಂಗ ಹಿಬ್ಯಂಗ ಹಾಗೂ ನಾಡಿ ಸ್ವೇದ ಚಿಕಿತ್ಸೆ ಕೊಟ್ಟರು ಡಾಕ್ಟರ್ ಮಧುಶ್ರೀ ರಾಗಿಯವರು, ಅಲ್ಲಿಗೇ ಆ 25 ದಿನಗಳಲ್ಲಿ ಆ ‘ಲಕ್ವ’ ಹೊಡೆದ ರೋಗಿಯು ನಡೆದಾಡುವಂತೆ ಆಯಿತು. ಅದು ಡಾಕ್ಟರ್ ಮಧುಶ್ರೀ ರಾಗಿಯವರ ಆಯುರ್ವೇದದ ಚಿಕಿತ್ಸೆಯ ಪವಾಡ ಎನ್ನುತ್ತಾರೆ ಆ ವಯೋವೃದ್ದೆಯ ಪೋಷಕರು..!
ಹೀಗಿದೆ ಡಾಕ್ಟರ್ ಮಧುಶ್ರೀ ರಾಗಿಯವರ ಆಯುರ್ವೇದ ಚಿಕಿತ್ಸೆಯ ಪವಾಡವೂ..!ಈಗ ಹೇಳಿ ಅಲೋಪೆತಿಕ್ ಚಿಕಿತ್ಸೆಗಿಂತ ಡಾಕ್ಟರ್ ಮಧುಶ್ರೀ ರಾಗಿಯವರ ಆಯುರ್ವೇದಿಕ್ ಚಿಕಿತ್ಸೆ ಗುಣವಲ್ಲವೇ..!
# ಡಾ.ಮಧುಶ್ರೀ ರಾಗಿಯವರ ಸಂಪರ್ಕಾಗಿ…–
ಫೋನ್ ನಂಬರ್ — 6361321848
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…