ಜಮಖಂಡಿ: ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆ ಅನುಗುಣವಾಗಿ ಪ್ರಸಕ್ತವಾಗಿ ಜಮಖಂಡಿ ನಗರಕ್ಕೆ ಸರಕಾರಿ ವೈದ್ಯಕೀಯ ಕಾಲೇಜು ಅಗತ್ಯವಾಗಿದೆ ಎಂದು ಹಿರಿಯ ವೈದ್ಯ ಡಾ.ಗಿರೀಶ ಉದಪುಡಿ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಂತೆ ವೈಧ್ಯಕೀಯ ಕ್ಷೇತ್ರದಲ್ಲಿ ಸವಾಲುಗಳಿದ್ದು, ಅವುಗಳನ್ನು ಸರ್ಮಕವಾಗಿ ಎದುರಿಸಲು ರಾಜ್ಯ ಸರಕಾರ ಹೊಸದಾಗಿ ಜಮಖಂಡಿ ನಗರಕ್ಕೆ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಬೇಕು. ಈಗಾಗಲೇ ಸಾಮಾಜಿಕ, ರಾಜಕೀಯ ಮತ್ತು ಹಿರಿಯ ವೈಧ್ಯರ ನಡುವೆ ಮಾತುಕತೆ ಮಾಡಲಾಗಿದ್ದು, ಸಿದ್ಧತೆ ಮಾಡುವಂತೆ ಉತ್ತರ ಲಭ್ಯವಾಗಿದೆ ಎಂದರು.
ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೋಟ್ಯಂತರ ಹಣ ಪ್ರವೇಶ ಪಡೆಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಡಮಕ್ಕಳಿಗೆ μà ಭರಿಸುವ ಶಕ್ತಿ ಇರುವುದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗೆ ಹಣಕಾಸಿನ ತೊಂದರೆಯಿಂದ ಜೀವನದ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದೆ. ನಮ್ಮ ಭಾಗದಲ್ಲಿ ಸರಕಾರಿ ವೈದ್ಯಕೀಯ ಕಾಲೇಜ ನಿರ್ಮಾಣದಿಂದ ರಬಕವಿ,
ಬನಹಟ್ಟಿ, ತೇರದಾಳ, ಅಥಣಿ, ಮುಧೋಳ, ಬೀಳಗಿ, ಸಾವಳಗಿ ಸಹಿತ ವಿವಿಧ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಅಧ್ಯಯನಕ್ಕೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಭವಿಷ್ಯದಲ್ಲಿ ಜಮಖಂಡಿ ಜಿಲ್ಲಾಕೇಂದ್ರ ಆಗಲಿದ್ದು, ಸಾಕಷ್ಟು ಸಂಪನ್ಮೂಲ ಹೊಂದಿರುವ ನಮ್ಮ ತಾಲೂಕಿನಲ್ಲಿ ಸರಕಾರಿ ವೈಧ್ಯಕೀಯ ಕಾಲೇಜ ಅಂತ್ಯಂತ ಅವಶ್ಯಕವಾಗಿದೆ. ಒತ್ತಡ ಜೀವನದಲ್ಲಿ ಹೊಸ ರೋಗಗಳು ಹುಟ್ಟುತ್ತಿರುವ ಇಂದಿನ ದಿನಮಾನದಲ್ಲಿ ಚಿಕಿತ್ಸೆ ಪಡೆಯದು ಕಷ್ಟಕರವಾಗುತ್ತಿದೆ. ಪ್ರತಿಯೊಂದಕ್ಕೂ ಬಾಗಲಕೋಟೆ, ಬೆಳಗಾವಿ, ಮಿರಜ, ವಿಜಯಪುರ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗಿದೆ. ಈಗಾಗಲೇ ಕಳೆದ ನಾಲ್ಕು ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಗೆ ಹೊಸದಾಗಿ ಸರಕಾರಿ
ವೈಧ್ಯಕೀಯ ಕಾಲೇಜು ಮಂಜೂರಿ ಆಗಿದ್ದು, ಯಾರು ಆಸಕ್ತಿ ತೋರದ ಹಿನ್ನಲೆಯಲ್ಲಿ ಯಥಾಸ್ಥಿತಿಯಲ್ಲಿದೆ.
ಬಾಗಲಕೋಟೆಗೆ ಮಂಜೂರಿ ಆಗಿರುವ ಸರಕಾರಿ ವೈಧ್ಯಕೀಯ ಕಾಲೇಜ್ ಜಮಖಂಡಿ ಹಸ್ತಾಂತರೆಗೊಳಿಸುವ ಕೆಲಸ ಆಗಬೇಕು. ಇಲ್ಲವಾದರೇ ಜಮಖಂಡಿ ಹೊಸದಾಗಿ ವೈಧ್ಯಕೀಯ ಕಾಲೇಜ ಮಂಜೂರಿ ಮಾಡಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಜಮಖಂಡಿ ಉಪವಿಭಾಗ ಸ್ಥಾನಮಾನ ಹೊಂದಿರುವ ಹಿನ್ನೆಲೆಯಲ್ಲಿ ಜಮಖಂಡಿ ಜಿಲ್ಲಾಕೇಂದ್ರ ಆಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಅರ್ಹತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಮಖಂಡಿ ನಗರದ ಸಮಾನ ಮನಸ್ಕರ ಮತ್ತು ಹಿರಿಯ ವೈದ್ಯರು, ನಗರದ ಹಿರಿಯರು ಕೂಡಿಕೊಂಡು ಸಮಿತಿ ರಚಿಸುವ ಮೂಲಕ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿ ಅವರಿಗೆ ಜಮಖಂಡಿಗೆ ಸರಕಾರಿ ಮೆಡಿಕಲ್ ಕಾಲೇಜು ಅನುಮತಿ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…