ಚಟ್ನಿಹಾಳ ಗ್ರಾಮದ ರೇಣುಕಾ ಗ್ಯಾನಪ್ಪ ಪೂಜಾರ ಸಂಸಾರದಲ್ಲಿ ಅಲ್ಲಾಸಾಬ್ ನದಾಪ್ ವಿಲನ್ ಆಗಿ ಬಂದಿದ್ದಾನೆ. ಪತಿ ಗ್ಯಾನಪ್ಪ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್ನನ್ನು ರೇಣುಕಾ ಮನೆಗೆ ಕರೆಸಿದ್ದಳು. ಇದೇ ವೇಳೆ ಮನೆಗೆ ಗ್ಯಾನಪ್ಪ ಹಿಂತಿರುಗಿದ್ದರು.
ಬಾಗಲಕೋಟೆ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿ ಪ್ರಿಯಕರನ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ನಡೆದಿದೆ.
ಅಲ್ಲಾಸಾಬ್ ನದಾಪ್(28) ಕೊಲೆಯಾದ ವ್ಯಕ್ತಿ, ಚಟ್ನಿಹಾಳ ಗ್ರಾಮದ ರೇಣುಕಾ ಗ್ಯಾನಪ್ಪ ಪೂಜಾರ ಸಂಸಾರದಲ್ಲಿ ಅಲ್ಲಾಸಾಬ್ ನದಾಪ್ ವಿಲನ್ ಆಗಿ ಬಂದಿದ್ದಾನೆ. ಪತಿ ಗ್ಯಾನಪ್ಪ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್ನನ್ನು ರೇಣುಕಾ ಮನೆಗೆ ಕರೆಸಿದ್ದಳು. ಇದೇ ವೇಳೆ ಮನೆಗೆ ಗ್ಯಾನಪ್ಪ ಹಿಂತಿರುಗಿದ್ದರು. ಆಗ ರೇಣುಕಾ ಮತ್ತು ಅಲ್ಲಾಸಾಬ್ ಜೊತೆ ಇರುವುದನ್ನು ಕಂಡು ಗ್ಯಾನಪ್ಪ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾರೆ. ಹಾಗೂ ಪರಿಸ್ಥಿತಿ ನಿಯಂತ್ರಿಸಲು ಮುಂದೆ ಬಂದ ಪತ್ನಿ ರೇಣುಕಾ ಮೇಲೂ ಹಲ್ಲೆ ನಡೆಸಿದ್ದಾರೆ.
ಸದ್ಯ ಗಾಯಾಳು ರೇಣುಕಾಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತಿ ಗ್ಯಾನಪ್ಪ, ಗ್ಯಾನಪ್ಪ ತಂದೆ ಚಂದ್ರಪ್ಪ, ಸಹೋದರ ಹನುಮಂತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆ ಮಾಡಿದ್ದ ಆರೋಪಿ ಅರೆಸ್ಟ್: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಹತ್ಯೆ ಕೇಸ್ಗೆ ಸಂಬಂಧಿಸಿ ಬೆಳಗಾವಿಯ ಮಾಳಮಾರುತಿ ಪೊಲೀಸರಿಂದ ಮೂವರ ಬಂಧನವಾಗಿದೆ. ಉಜ್ವಲ ನಗರದ ಇಬ್ರಾಹಿಂ ಸಯ್ಯದ್, ಮಹ್ಮದ್ ಮನ್ನೂರಕರ, ಗಾಂಧಿನಗರದ ಉಲ್ಮಾನ್ ಯರಗಟ್ಟಿ ಬಂಧಿತ ಆರೋಪಿಗಳು. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನ ಬರ್ಬರ ಹತ್ಯೆ ಮಾಡಲಾಗಿತ್ತು. ಪಾರ್ಟಿಗೆಂದು ಕರೆದು ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆಗೈದಿದ್ದರು. ಉಜ್ವಲ ನಗರದ ನೋಹಾನ್ ಧಾರವಾಡಕರ್ (23) ಕೊಲೆಯಾಗಿದ್ದ ಯುವಕ. ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಆಟೋ ಚಾಲಕನ ಶವ ಪತ್ತೆಯಾಗಿತ್ತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…