ಬಿಸಿ ಬಿಸಿ ಸುದ್ದಿ

ಕಾಗಿಣಾ ತಟದಲ್ಲಿ ಸಡಗರದ ಸಂಕ್ರಾಂತಿ ಹಬ್ಬ

ಶಹಾಬಾದ : ದಕ್ಷಿಯಾಣದಿಂದ ಉತ್ತರಾಯಣ ಪ್ರವೇಶಿಸುವ ಕಾಲದ ಆರಂಭ ಹೇಳುವ ವರ್ಷದ ಮೊದಲ ಹಬ್ಬ ಮಕರ ಸಕ್ರಾಂತಿ ಹಬ್ಬವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಮಕರ ಸಂಕ್ರಮಣದ ನಿಮಿತ್ತ ಮುಂಜಾನೆ ಬೇಗ ಎದ್ದು ಮೈಗೆಲ್ಲ ಎಳ್ಳು ಚಟ್ಟನ್ನು ಹಚ್ಚಿಕೊಂಡು ಸ್ನಾನ ಮಾಡಿ ಹಿರಿಯರು, ಮಹಿಳೆಯರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲದೇ ಪ್ರತಿ ವರ್ಷದಂತೆ ಈ ವರ್ಷವೂ ಸುತ್ತಮುತ್ತಲಿನ ಭಂಕೂರ, ಮುತ್ತಿಗಿ, ರಾವೂರ, ಮಾಲಗತ್ತಿ, ತೊನಸಿನ ಹಳ್ಳಿ, ಮರತೂರ, ತೆಗನೂರ, ಕಿರಣಗಿ, ಗೋಳಾದ ಸಾವಿರಾರು ಜನರು ಪುಣ್ಯ ಸ್ನಾನ ಮಾಡಲು ಕಾಗಿಣಾ ನದಿಯ ದಡದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದು ಕಂಡು ಬಂದಿತು. ಬಹುತೇಖ ಜನರು ಹೊನಗುಂಟಾ ಭೀಮಾ ಹಾಗೂ ಕಾಗಿಣಾ ನದಿ ಸಂಗಮವಾದ ಸ್ಥಳದಲ್ಲಿ ಪುಣ್ಯ ಸ್ನಾನ ಮಾಡಿದರು.

ಕಾಗಿಣಾ ನದಿಯಲ್ಲಿ ಸಾಕಷ್ಟು ನೀರಿರುವುದರಿಂದ ಜನರು ತಮಗೆ ಬೇಕಾದ ಸ್ಥಳಗಳಲ್ಲಿ ಸ್ನಾನ ಮಾಡಿದರು. ನಂತರ ನದಿಯ ತಟದಲ್ಲಿ ಕುಳಿತು ಬಂದು ಭಾಂದವರು ಹಾಗೂ ಗೆಳೆಯರೊಂದಿಗೆ ಸಿಹಿ-ಭಕ್ಷ್ಯ ಬೋಜನಗಳನ್ನು ಸವಿದು ಮಕರ ಸಂಕ್ರಮಣ ಹಬ್ಬವನ್ನು ಸಂಭ್ರಮದಿಂದ ಆಚರಿಸದರು. ಈ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಎಳ್ಳು ಕೊಡುವ ಸಂಪ್ರದಾಯ.

ಸಂಜೆ ತಂದೆ,ತಾಯಿ, ಬಂದುಭಾಂದವರಿಗೆ ಹಾಗೂ ಸ್ನೇಹಿತರಿಗೆ ಕುಸುರೆಳ್ಳು ಕೊಟ್ಟು ಎಳ್ಳೂ ಬೆಲ್ಲ ತೆಗೆದುಕೊಂಡು ಒಳ್ಳೊಳ್ಳೆಯ ಮಾತಾಡೋಣ ಹಾಗೂ ಎಳ್ಳೂ ಬೆಲ್ಲದಂಗಿರೋಣ ” ಎಂದು ಚಿಕ್ಕವರೆಲ್ಲ ದೊಡ್ಡವರಿಗೆಲ್ಲರಿಗೂ ಎಳ್ಳು ಕೊಟ್ಟು ಕಾಲಿಗೆ ನಮಸ್ಕರಿಸಿ ನಮ್ಮ ಸಂಸ್ಕೃತಿಯ ಉಳಿಸುವ ಹಬ್ಬದ ಆಚರಣೆಗಳನ್ನು ಹರ್ಷದಿಂದ ಆಚರಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

5 hours ago