ಟ್ರೆಂಡ್ ಆಯ್ತು ‘ಮನೆಗೊಂದು ಮರ, ಊರಿಗೊಂದು ವನ’..! ಮಕ್ಕಳು ಹಾಡಿ ಕುಣಿಯುವಂತೆ ಮಾಡಿತು ,”ನಾಡಪ್ರಭು ಕೆಂಪೇಗೌಡ” ಗೀತೆ. ಈಗ “ಕೌದಿ ಗೀತೆ” ಹೊಸ ಪೀಳಿಗೆಗೆ ಹಿರಿಯರ ಕ್ರಿಯಾಶೀಲತೆಯನ್ನು ನೆನಪಿಸಿಕೊಡುತ್ತಿದೆ.
( ಚಿತ್ರ — ಗೀತಾ ಶಿಂಧೆ (ಬಲದಿಂದ ಮೊದಲನೇಯವರು) ಮತ್ತು ತಂಡ… )
ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ಅರಣ್ಯ ಇಲಾಖೆ ಜೂನ್ 5 ರಂದು ತನ್ನ ಪೋರ್ಟಲ್‌ನಲ್ಲಿ ‘ಮನೆಗೊಂದು ಮರ, ಊರಿಗೊಂದ ವನ, ಉಳಿಸಿ ಬೆಳೆಸೋಣ’ ಎಂಬ ಪರಿಸರ ಗೀತೆ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಎರಡೇ ದಿನಗಳಲ್ಲಿ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತ ಭಾರಿ ಜನಪ್ರಿಯವಾಗಿತ್ತು.
ಗೀತಾ ಶಿಂಧೆ ಬೆನಗಿ ಬೆಂಗಳೂರಿನ ಬಿಇಎಲ್ ಪದವಿಪೂರ್ವ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ .. ಸದಾ ಲವಲವಿಕೆಯ ಪಾಠ, ಕ್ರಿಯಾಶೀಲ ಚಟುವಟಿಕೆಗಳು ಇರುವುದರಿಂದ ಸದಾ ಯುವ ವಿದ್ಯಾರ್ಥಿ ಮಕ್ಕಳಿಗೆ ಅಚ್ಚುಮೆಚ್ಚಿನ ಸ್ಪೂರ್ತಿದಾಯಕ ವ್ಯಕ್ತಿತ್ವ ..!
ಸರ್ಕಾರಿ ಶಾಲಾ ಮಕ್ಕಳಲ್ಲಿ ಕಲೆ ,ಸಂಸ್ಕೃತಿ ಪರಿಸರ ಜಾಗೃತಿ, ಕನ್ನಡ ಭಾಷಾ ಜಾಗೃತಿ ಮೂಡಿಸಲು ಮತ್ತು ನೈತಿಕ ಮೌಲ್ಯಗಳನ್ನು ಬಿತ್ತುವ ಉದ್ದೇಶದಿಂದ ಸಾಕಷ್ಟು ಹಾಡುಗಳನ್ನು ಬರೆದು ಮಕ್ಕಳಿಂದ ಹಾಡಿಸಿ ಸಮಾಜವನ್ನು ಸುಧಾರಿಸುವ ಯೋಚನೆಯ ಫಲವಾಗಿ ಹುಟ್ಟಿಕೊಂಡಿವೆ ಅವರ ಹಾಡುಗಳು..
ಸರ್ಕಾರಿ ಶಾಲೆಯ ಮಕ್ಕಳ ನಡುವೆ ಕಳೆದು ಹೋಗಬೇಕಿದ್ದ ಹಾಡು ಈಗ ಹೊಸಟ್ರೆಂಡ್ ಸೃಷ್ಟಿಸಿದೆ ಎಂದು ಗೀತಾ ಬೆನಗಿ ಖುಷಿಯನ್ನು ಹಂಚಿಕೊಂಡರು.ಡಿಜಿಟಲ್ ಪ್ಲಾಟ್‌ಫಾರ್ಮ್ ಮತ್ತು ಸೋಷಿಯಲ್ ಮೀಡಿಯಾ ಈಗ ಹೆಚ್ಚು ಜನಪ್ರಿಯ ಮಾಧ್ಯಮವಾಗುತ್ತಿವೆ.
ಲಾಕ್‌ಡೌನ್ ಸಮಯದಲ್ಲಿ ಹಸಿ ಮತ್ತು ಒಣ ಕಸ ವಿಂಗಡನೆ ,ಶಾಲೆ ಸ್ವಚ್ಛ ಮಾಡುವ, ಊರು ಸ್ವಚ್ಛ ಮಾಡುವ ದೇಶ ಸ್ವಚ್ಛ ಮಾಡುವ… ಎಂಬ ಹಾಡು ಸೇರಿದಂತೆ ಉತ್ತಮ ಸಂದೇಶ ಸಾರುವ ಹಾಡುಗಳನ್ನು ಬರೆದಿದ್ದಾರೆ. ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗಾಗಿ ಎಲೆಕ್ಟ್ರಾನಿಕ್ ರ‍್ಯಾಪ್ ಸಾಂಗ್ ರೆಕಾರ್ಡಿಂಗ್ ಕೂಡ ಆಗಿ ಸರ್ಕಾರದ ದೀಕ್ಷಾ ಆಪ್ ನಲ್ಲಿ ಬಿಟ್ಟಿದ್ದಾರೆ.
‘ಸಾಂಪ್ರದಾಯಿಕ ಕಲಿಕಾ ವಿಧಾನದ ಬದಲು ಹಾಡು, ನಾಟಕ, ನೃತ್ಯಗಳಂತಹ ಸೃಜನಾತ್ಮಕ ಮಾರ್ಗಗಳ ಮೂಲಕ ಮಕ್ಕಳು ಬೇಗ ಕಲಿಯುತ್ತಾರೆ’ ಎನ್ನುವ ಗೀತಾ ತಮ್ಮ ಹಲವು ವರ್ಷಗಳ ಅನುಭವದಿಂದ ಕಂಡುಕೊಂಡ ಸತ್ಯವಾಗಿದೆ. ಬೋಧನೆ ಜೊತೆಗೆ ವಿಮೋವ್ ಎನ್‌ಜಿಒ, ಬಿಇಎಲ್ ಸಂಸ್ಥೆ, ಉತ್ತರ ಕರ್ನಾಟಕ ಬಳಗ, NDJM ಟ್ರಸ್ಟ್ ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಗೀತಾ ಬೆನಗಿ ತೊಡಗಿಸಿಕೊಂಡಿದ್ದಾರೆ.
ನೇಕಾರರ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಕಿಸಿಕೊಡಲು ರೂಪದರ್ಶಿಗಳಿಗೆ ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಕಣ, ತೊಡಿಸಿ ಗ್ರಾಮಸ್ಫೂರ್ತಿ ರ‍್ಯಾಂಪ್ ವಾಕ್ ಮಾಡಿಸಿ ತಮ್ಮ ಬಿಇಎಲ್ ಕಾಲೇಜನ್ನು ,ಬೆಂಗಳೂರಿಗೆ ಮೊದಲ ಸ್ಥಾನ ಗಿಟ್ಟಿಸಿದ್ದರು.. ಮನೆಯಲ್ಲಿ ಕುಳಿತು ಬರೆದು ಹಾಡಿದ “ಬೆಳಕು” ಭಾವಗೀತೆ ಎಲ್ಲರ ಮನದಲ್ಲಿ ಬೆಳಕು ನೀಡಿತ್ತು. ಇಂತಹ ಟ್ರೆಂಡ್ ಸೃಷಿಸುವ ಸಂಗೀತ ವಿಷಾರಧೆ ಮತ್ತು ಭರತನಾಟ್ಯ ನರ್ತಕಿ, ಕಲಾ ಉಪಾಸಕಿ , ನಮ್ಮ ಕರ್ನಾಟಕ ಸರಕಾರದ ರಾಜ್ಯ ಶ್ರೇಷ್ಠ ಉಪನ್ಯಾಸಕಿ ಪ್ರಶಸ್ತಿಯನ್ನು ಗಿಟ್ಟಿಸಿದ್ದಾರೆ. ಈಗಲೂ ಅವರು ಸುಮ್ಮನೇ ಕುಳಿತಿಲ್ಲ, ಮತ್ತೇ ದಿನಕ್ಕೊಂದು ತರಹದ ಕಲೆಯ ತಾಲೀಮು ಮಾಡುತ್ತಲೇ ಇರುತ್ತಾರೆ. ಹ್ಯಾಂಡ್ಸ್ ಆಫ್ ಗೀತಾ ಬೆಣಗಿ..!
ಗೀತಾ ಬೆನಗಿ ಅಷ್ಟೇ ಕಲೆಗೆ ಸೀಮಿತವಾಗಿಲ್ಲ. ಇವರ ಇಡೀ ಕುಟುಂಬ ಕಲಾಪೋಷಕರೆ. ತಂದೆ ರಾಮಕುಮಾರ ಶಿಂಧೆ ಉತ್ತಮ ಸಂಗೀತ ಹಾಡುಗಾರಿಕೆಗೆ ಹೆಸರುವಾಸಿಯಾದವರು. ಮಗಳು ಶ್ರದ್ಧಾ ಬೆಣಗಿ ಚಲನಚಿತ್ರ, ಮತ್ತು ಶಾಸ್ತ್ರೀಯ ಭರತ ನಾಟ್ಯಕ್ಕೆ ಹೆಸರುವಾಸಿಯಾದವಳು..! ಪತಿ ವಿಜಯಕುಮಾರ ಅವರ ಪ್ರೋತ್ಸಾಹ ಹಾಗೂ ಇಡೀ ಕುಟುಂಬ ಒಟ್ಟಾರೆ ಕಲೆಯ ಆರಾಧಕರು..!
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…