ಶಹಾಬಾದ : ಕೊರೋನಾ ಮತ್ತು ರೂಪಾಂತರಿ ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವು ದರಿಂದ ಸರ್ಕಾರ ಎಚ್ಚೆತ್ತಕೊಂಡು ನಿಯಂತ್ರಿಸಲು ಘೋಷಿಸಿರುವ ವಾರಾಂತ್ಯ ಕರ್ಫ್ಯೂಗೆ ನಗರದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ.
ಶುಕ್ರವಾರ ರಾತ್ರಿಯೇ ರಸ್ತೆಗಿಳಿದ ಪೊಲೀಸರು ಕಟ್ಟು ನಿಟ್ಟಾಗಿ ಬಂದೋಬಸ್ತ ಮಾಡಿದ್ದರು. ಶನಿವಾರ ಹಾಗೂ ರವಿವಾರ ಬೆಳಿಗ್ಗೆ ಎಂದಿನಂತೆಹಾಲು, ತರಕಾರಿ, ಹಣ್ಣು, ಔ?ಧಿ ಅಂಗಡಿ, ಕಿರಾಣಿ, ಮಾಂಸ ಮಾರಾಟದ ಅಂಗಡಿ, ತೆರೆದಿದ್ದವು. ಆದರೆ ಬೆಳಿಗ್ಗೆ ೧೦ರ ನಂತರ ಗ್ರಾಹಕರಿಲ್ಲದೆ ವ್ಯಾಪಾಸ್ಥರು ಅಂಗಡಿಗಳನ್ನು ಮುಚ್ಚಿ ಮರಳಿ ಮನೆಗೆ ಹೋಗಬೇಕಾಯಿತು.ಹೊಟೇಲ್‌ಗಳು ಅಲ್ಲಲ್ಲಿ ಪ್ರಮುಖ ಸ್ಥಳಗಳಲ್ಲಿ ತೆರೆದಿದ್ದವಾದರೂ ಪಾರ್ಸಲ್ ವ್ಯವಸ್ಥೆ ಮಾತ್ರವಿತ್ತು.
ಪ್ರಮುಖ ರಸ್ತೆಗಳು ಖಾಲಿ ಖಾಲಿ: ವಾಡಿ ವೃತ್ತ, ಭಂಕೂರ ವೃತ್ತ , ಜೇವರ್ಗಿ ವೃತ್ತ, ರೇಲ್ವೆ ನಿಲ್ದಾಣದ ರಸ್ತೆ ಹಾಗೂ ಸೇರಿದಂತೆ ಪ್ರಮುಖ ರಸ್ತೆಗಳು ಜನಸಂಚಾರ ಮತ್ತು ಅಂಗಡಿ ಮುಗಟ್ಟು ತೆರೆಯದೆ ಸಂಪೂರ್ಣ ಸ್ಥಬ್ಧವಾಗಿದ್ದವು.
ಬೇರೆ ಜಿಲ್ಲೆಗೆ, ಊರಿಗೆ, ಸರ್ಕಾರಿ ಮತ್ತು ಖಾಸಗಿ ಕೆಲಸಕ್ಕೆ, ಆಸ್ಪತ್ರೆ ಮತ್ತು ತುರ್ತು ಕಾರ್ಯಕ್ಕೆ ಹೋಗುವ ಸಿಬ್ಬಂದಿಗಳು ಕಚೇರಿಯಲ್ಲಿ ನೀಡಿರುವ ಗುರುತಿನ ಚೀಟಿ,ಮುಂಗಡವಾಗಿ ತೆಗೆದ ಟಿಕೆಟ್ ಮತ್ತು ರೋಗಿಗಳಿಗೆ ಸಂಬಂಸಿದ ಚೀಟಿಗಳನ್ನು ಪೊಲೀಸರಿಗೆ ತೋರಿಸಿ ಸಾಗುತ್ತಿದ್ದರು.ವಿಕೆಂಡ ಕರ್ಫ್ಯೂ ಇರುವುದರಿಂದ ಬಹುತೇಖ ಜನರು ಹೊರಬರದೇ ಮನೆಯ ಬಂಧನಕ್ಕೆ ಒಳಗಾಗಿದ್ದರು.
ನಗರದ ಬಹುತೇಖ ಅಂಗಡಿಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು.ಪೊಲೀಸರು ಈ ಬಾರಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರಿಂದ ಕದ್ದು ಮುಚ್ಚಿ ತೆಗೆಯುತ್ತಿದ್ದ ಅಂಗಡಿಗಳು ಸಹ ಬಂದ್ ಮಾಡಿದ್ದರು. ವಾರಾಂತ್ಯ ಕರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…