ಶಹಾಬಾದ : ನಗರದ ಬಾಲಕರ ವಸತಿ ನಿಲಯದ ಗೇಟ್ ಮುಂದೆ ಚರಂಡಿಗಾಗಿ ತೋಡಿದ ತಗ್ಗು ಗುಂಡಿ ಹಾಗೂ ಮುಂಭಾಗದ ರಸ್ತೆಯಲ್ಲಿ ತೋಡಿದ ಚರಂಡಿ ಹಾಗೇ ಬಿಡಲಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಈಗಾಗಲೇ ಚರಂಡಿ ನಿರ್ಮಾಣಕ್ಕಾಗಿ ತಗ್ಗು ತೋಡಿ ಸುಮಾರು ವರ್ಷವಾಗುತ್ತ ಬಂದಿದ್ದು, ಚರಂಡಿಯೂ ನಿರ್ಮಾಣ ಮಾಡಿಲ್ಲ.ಅಲ್ಲದೇ ತಗ್ಗು ಗುಂಡಿಯನ್ನು ಮುಚ್ಚಿಲ್ಲ.ಇದರಿಂದ ನಿತ್ಯ ವಸತಿ ನಿಲಯದ ವಿದ್ಯಾರ್ಥಿಗಳು ಹೊರಗಡೆ ಅಥವಾ ಒಳಗಡೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ. ರಸ್ತೆಯ ಮೇಲೆ ತೆರಳುವ ವಾಹನ ಸವಾರರೊಂದಿಗೆ , ಹಾಸ್ಟೆಲ್ ವಿದ್ಯಾರ್ಥಿಗಳು ಬೀಳುವ ಸಾಧ್ಯತೆ ಇರುವುದರಿಂದ ಇದನ್ನು ಬೇಗನೆ ಮುಚ್ಚಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಂಬೋಣವಾಗಿದೆ.ಅಲ್ಲದೇ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿನ ಕಾಮಗಾರಿಯೂ ಮಾಡದೇ ಇರುವುದರಿಂದ ಅದರಲ್ಲಿ ಕೊಳಚೆ ನೀರು ಸಂಗ್ರಹವಾಗಿ ಗಬ್ಬು ವಾಸನೆ ಹರಡುತ್ತಿದೆ.ನಗರದ ಮುಖ್ಯ ರಸ್ತೆಯಲ್ಲಿ ಇಷ್ಟೊಂದು ಗಲೀಜು ವಾತಾವರಣ ಸೃಷ್ಠಿಯಾದರೂ ಯಾರು ಗಮನಹರಿಸುತ್ತಿಲ್ಲ ಎಂಬುದೇ ಖೇದದ ಸಂಗತಿಯಾಗಿದೆ.ಅಲ್ಲದೇ ದನಕರುಗಳು, ಮಕ್ಕಳು ಅದರಲ್ಲಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ.ಆದರೂ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ.
ಎರಡು ಹಾಸ್ಟೆಲ್‌ಗಳು, ಹನುಮಾನ ಮಂದಿರ, ಮುಖ್ಯ ರಸ್ತೆಯೂ ಇದಾಗಿರುವುದರಿಂದ ಜನರು ಇದೇ ರಸ್ತೆಯಿಂದ ಸಂಚರಿಸುತ್ತಿರುತ್ತಾರೆ. ಇಲ್ಲಿನ ಅವ್ಯವಸ್ಥೆ ನೋಡಿ ಜನರು ಇಲ್ಲಿನ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ.ಸುಮಾರು ಮೂರು ವರ್ಷದಿಂದ ಕಾಮಗಾರಿಯೂ ಮಾಡುತ್ತಿಲ್ಲ. ಅಲ್ಲದೇ ಗುಂಡಿಯನ್ನು ಮುಚ್ಚುತ್ತಿಲ್ಲ. ಅಲ್ಲದೇ ಅಲ್ಪಸ್ವಲ್ಪ ಮಾಡಿದ ಕಾಮಗಾರಿಯೂ ಕಳಪೆ.ಈ ಬಗ್ಗೆಯೂ ಗುತ್ತಿಗೆದಾರನ ವಿರುದ್ಧವೂ ಕ್ರಮಕೈಗೊಳ್ಳುತ್ತಿಲ್ಲ.
ಗುಂಡಿಯಲ್ಲಿ ಮಕ್ಕಳು ಬಿದ್ದು ಏನಾದರೂ ಅವಘಡ ಆದರೆ ಅದಕ್ಕೆ ನೇರವಾಗಿ ಅಧಿಕಾರಿಗಳೇ ಹೊಣೆಗಾರರು ಎಂದು ಸ್ಥಳೀಯ ನಾಗರಿಕರು ದೂರುತ್ತಾರೆ.ಕೂಡಲೇ ಗುಂಡಿಯನ್ನು ಮುಚ್ಚಿ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಚರಂಡಿ ಗುಂಡಿಯನ್ನು ಆದಷ್ಟು ಮುಚ್ಚಬೇಕೆಂದು ಹಾಸ್ಟೆಲ್ ವಾರ್ಡನ್ ರವಿ ಮುತ್ತಗಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…