ಗದಗ: ಕೋವಿಡ್-19 ಸಾಂಕ್ರಾಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಜನರಲ್ಲಿ ಹೆಚ್ಚು ಆಸಕ್ತರನ್ನಾಗಿ ಮಾಡಿದೆ. ಫಿಟ್ನೆಸ್, ಉತ್ತಮ ಆರೋಗ್ಯಕ್ಕಾಗಿನ ಕ್ರಮಗಳು ಕೇವಲ ನಗರಪ್ರದೇಶಗಳಲ್ಲಿರುವ ಮಂದಿಗಷ್ಟೇ ಅಲ್ಲದೇ ಸಣ್ಣ ಪಟ್ಟಣಗಳಲ್ಲೂ ಹೆಚ್ಚಾಗುತ್ತಿದೆ.
ಈ ನಡುವೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಾಂಪ್ರದಾಯಿಕ ಗರಡಿ ಮನೆಗಳೆಡೆಗೆ ಹೆಚ್ಚಿನ ಆಸಕ್ತಿ ಬೆಳೆಯುತ್ತಿದೆ. ಗದಗದ ಗರಡಿಮನೆಗಳಿಗೆ ತೆರಳಿ ವ್ಯಾಯಾಮ ಮಾಡುವವರ ಸಂಖ್ಯೆ ಕಳೆದ 2 ತಿಂಗಳಿನಿಂದ ಹೆಚ್ಚತೊಡಗಿದ್ದು, ಗ್ರಾಮೀಣ ಭಾಗದಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ವ್ಯಾಯಾಮಶಾಲೆಗಳಲ್ಲಿ ಹೆಚ್ಚು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಗದಗ ನಗರದ ಗರಡಿ ಮನೆಗಳಲ್ಲಿ ಕಳೆದ ವರ್ಷ ಕೇವಲ 11 ಸದಸ್ಯರಿದ್ದರು, ಅದು ಈ ವರ್ಷ 26 ಕ್ಕೆ ಏರಿಕೆಯಾಗಿದೆ. ಲಕ್ಕುಂಡಿಯ ಗರಡಿ ಮನೆ ಹೊಸದಾಗಿ 9 ಮಂದಿಯನ್ನು ಸ್ವಾಗತಿಸಿದ್ದರೆ, ಹತಲಗೇರಿಯ ಗರಡಿಮನೆಗೆ 6 ಮಂದಿ ಸೇರ್ಪಡೆಯಾಗಿದ್ದಾರೆ ಹಾಗೂ ಜಕ್ಕಲಿಯಲ್ಲಿ 18 ಮಂದಿ ಹೊಸದಾಗಿ ಸೇರಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಗರಡಿಮನೆಗಳು ಮರುಜೀವ ಪಡೆಯಲು ಪ್ರಾರಂಭಿಸಿವೆ.
ಭಾರತದಲ್ಲಿ ಈ ಸಾಂಪ್ರದಾಯಿಕ ಜಿಮ್ ಗಳಿಗೆ ಶ್ರೀಮಂತ ಇತಿಹಾಸವಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 1650 ರಿಂದಲೂ ಅಂದರೆ ಕಂಠೀರವ ನರಸರಾಜ ಒಡೆಯರ್ ಅವಧಿಯಿಂದ ಪ್ರಾರಂಭಗೊಂಡು ಗರಡಿಮನೆಗಳಿಗೆ ಪ್ರಾಮುಖ್ಯತೆ ಇದೆ. ಗಜ, ಮುದ್ಗರ, ಕಲ್ಲಿನ ಬೌಲ್ಡರ್ ಗಳು, ಮಣ್ಣಿನ ನೆಲಗಳನ್ನು ಹೊಂದಿರುವ ಗರಡಿಮನೆಗಳಲ್ಲಿ ಕುಸ್ತಿ ಪಟುಗಳು ತರಬೇತಿ ನೀಡುತ್ತಾರೆ.
1960 ರಲ್ಲಿ ಗದಗದ ಜಕ್ಕಲಿ, ಮಲ್ಲಪುರ, ಸವದಿ, ರೋಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗರಡಿಮನೆಗಳು ಪ್ರಾರಂಭವಾದವು, ಈ ಗರಡಿಗಳಲ್ಲಿ ಪಳಗಿದ ಹಲವು ಪೈಲ್ವಾನ್ ಗಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ದಂಗಲ್ ಗಳಲ್ಲಿ ಭಾಗವಹಿಸಿ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ. 90 ನೇ ದಶಕದಲ್ಲೂ ಈ ಟ್ರೆಂಡ್ ಮುಂದುವರೆದಿತ್ತು. ಆದರೆ ಇತ್ತೀಚಿನ ಹೊಸ ಟ್ರೆಂಡ್ ಅಬ್ಬರದಲ್ಲಿ ಗರಡಿಮನೆಗಳು ಮಾಯವಾಗಿದ್ದವು ಈಗ ಮತ್ತೆ ಹಳೆಯ ಟ್ರೆಂಡ್ ಮರಳುತ್ತಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…