ಸಿದ್ದರಾಮೇಶ್ವರ ತತ್ವ ಪಾಲನೆಯಿಂದ ಆಪತ್ತು ದೂರ

ಶಿಗ್ಗಾವಿ: ಸಿದ್ದರಾಮೇಶ್ವರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರಿಗೆ ಯಾವ ಆಪತ್ತು ಬಾರದು ಎಂದು ಭೋವಿ(ವಡ್ಡರ) ಸಮಾಜದ ತಾಲೂಕು ಅಧ್ಯಕ್ಷ ಅರ್ಜುನ ಹಂಚಿನಮನಿ ಹೇಳಿದರು. ಶನಿವಾರ ಪಟ್ಟಣದ ತಾಲೂಕು ಭೋವಿ(ವಡ್ಡರ) ಸಮಾಜದ ವತಿಯಿಂದ ಹಮ್ಮಿಕೊಂಡ ಕಾಯಕಯೋಗಿ ಗುರು ಸಿದ್ದರಾಮೇಶ್ವರರ 849ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗುರು ಸಿದ್ದರಾಮೇಶ್ವರರು ನಾಡಿಗೆ ಕಾಯಕದ ಮಹತ್ವ ಸಾರಿ ಹೇಳಿದ್ದಾರೆ. ಅವರ ಕಾಯಕ ನಿಷ್ಠೆ ಇಂದು ಎಲ್ಲ ಸಮುದಾಯದವರಿಗೂ ಮಾದರಿಯಾಗಿದೆ. ನಮ್ಮ ಸಮಾಜದವರು ಸಮಾಜದ ಕಾರ್ಯಗಳಲ್ಲಿ ಒಗ್ಗಟ್ಟಾಗಿ ದುಡಿದು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಮ್ಮ ಸಮಾಜ ಹಲವಾರು ರಂಗಗಳಲ್ಲಿ ಇನ್ನೂ ಮುಂದೆ ಬರಬೇಕಿದೆ. ಆ ದಿಸೆಯಲ್ಲಿ ನಾವು ಇನ್ನಷ್ಟು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ. ಕಾಯಕವೇ ದೇವರು ಎಂದು ಬಾಳ್ಳೋಣ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕಾಯಕ ನಿಷ್ಠೆಯಿಂದ ಹೆಸರಾದವರು ಗುರು ಸಿದ್ದರಾಮೇಶ್ವರರು. ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಮತ್ತು ಅವರು ಇಡೀ ವಿಶ್ವಕ್ಕೆ ಬೇಕಾದವರು ಎಂದು ಹೇಳಿದರು. ಬಂಕಾಪುರ ಪುರಸಭೆ ಸದಸ್ಯ ಆಂಜನೇಯ ಗುಡಗೇರಿ ಮಾತನಾಡಿ, ಸಿದ್ದರಾಮೇಶ್ವರರು ಮಾನವತ್ವದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಅವರು ಬಸವಣ್ಣನವರ ಸಮಕಾಲೀನರು. ನಮ್ಮ ತಾಲೂಕಿನಲ್ಲಿ ಸಿದ್ದರಾಮೇಶ್ವರರ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು.

ಇಂದು ನಮ್ಮ ಸಮಾಜ ನಿರ್ಣಾಯಕ ಕಾಲಗಟ್ಟಕ್ಕೆ ಬಂದು ತಲುಪಿದೆ. ನಮ್ಮನ್ನು ದುರಪಯೋಗಪಡಿಸಿಕೊಳ್ಳುತ್ತಿರುÊ ‌ವರೆ ಹೆಚ್ಚಾಗಿದ್ದಾರೆ. ಆದರಿಂದ, ನಾವೆಲ್ಲರೂ ಜಾಗೃತರಾಗಬೇಕಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ವೈಚಾರಿಕತೆಯ ಚಿಂತನೆ ಬೆಳೆಸಿಕೊಳ್ಳಬೇಕಾಗಿದೆ ಎಂದರು. ಹಡಪದ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹಡಪದ ದೈವಜ್ಞ ಸಮಾಜದ ತಾಲೂಕು ಅಧ್ಯಕ್ಷ ಸುಧಾಕರ ದೈವಜ್ಞ, ಮುಖಂಡರಾದ ನರಹರಿ ಕಟ್ಟಿ, ಶೇಕಣ್ಣ ಹಾದಿಮನಿ, ವಿಶ್ವನಾಥ ವಾಲಿಶೆಟ್ಟರ, ಹನಮಂತಪ್ಪ ಗುಳೇದ, ದುರಗಪ್ಪ ವಡ್ಡರ, ಹನಮಂತಪ್ಪ ತೆಮ್ಮಿನಕೊಪ್ಪ, ರಾಮು ಪೂಜಾರ, ಮಂಜುನಾಥ ಗುಡಗೇರಿ, ಮಹೇಶ ಕುರಂದವಾಡ, ಶೆಟ್ಟಪ್ಪ ವಡ್ಡರ, ಹನುಮಂತ ಬಾರಂಗಿ, ಹನಮಂತಪ್ಪ ಬಡ್ನಿ, ತಿಮ್ಮಣ್ಣ ವಡ್ಡರ, ನಾಗರಾಜ ವಡ್ಡರ, ವೆಂಕಟೇಶ ಬಂಡಿವಡ್ಡರ ಶಿವಾನಂದ ಬೊಮ್ಮನಹಳ್ಳಿ, ಹನಮಂತಪ್ಪ ಸಂಶಿ, ಯಲ್ಲಪ್ಪ ವಡ್ಡರ, ಬಸವರಾಜ ವಡ್ಡರ, ಸಂತೋಷ ಬಂಡಿವಡ್ಡರ, ನಿಂಗಪ್ಪ ಶಿವಳ್ಳಿ, ಶಂಕರ ಶಿವಳ್ಳಿ, ಮಂಜುನಾಥ ವಡ್ಡರ, ವೇಂಕಟೇಶ ಬಂಡಿವಡ್ಡರ, ಹನಮಂತ ಶಿವಳ್ಳಿ, ವಿಶ್ವನಾಥ ಬಂಡಿವಡ್ಡರ, ಹಾಲಪ್ಪ ವಡ್ಡರ, ಹನಮಂತಪ್ಪ ವಡ್ಡರ ಸೇರಿದಂತೆ ಸಮಾಜದ ಬಾಂಧವರು ಉಪಸ್ಥಿತರಿದ್ದರು.

emedialine

Recent Posts

ಸದ್ಗುಣ ಮೈಗೂಡಿಸಿ ಪ್ರಗತಿಪರ ಬದುಕು ಕಟ್ಟೋಣ : ಬಸವರಾಜ್ ಪಾಟೀಲ್ ಸೇಡಂ

ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…

1 hour ago

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

15 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

15 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

15 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

15 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420