ಸುರಪೂರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೆವ್ ಬುದ್ಧ ವಿಹಾರ ಟ್ರಸ್ಟಿನ ಆಡಳಿತ ಮಂಡಳಿಯ ಎರಡನೇಯ ಮಾಸಿಕ ಸಭೆಯನ್ನು ನಡೆಸಲಾಯಿತು.
ಸಭೆಯ ಅದ್ಯಕ್ಷತೆಯನ್ನು ಟ್ರಸ್ಟ್ ಅದ್ಯಕ್ಷರಾದ ವೆಂಕಟೇಶ ಹೊಸಮನಿ ಯವರು ವಹಿಸಿದ್ದರು. ಪ್ರಧಾನ ಕಾರ್ಯಾದರ್ಶಿಯಾದ ರಾಹುಲ್ ಹುಲಿಮನಿ ಯವರು ಸಭೆಗೆ ಎಲ್ಲರನ್ನು ಸ್ವಾಗತಿಸಿ ತ್ರೀಸರಣ ಪಠಿಸಿದನಂತರ ಹಿಂದಿನ ಸಭೆಯ ನಿರ್ಣಯಗಳನ್ನು ಮತ್ತು ಅವುಗಳಲ್ಲಿ ಪೂರೈಸಿದ ಕಾರ್ಯಾಗಳ ಬಗ್ಗೆ ಮತ್ತು ಮುಂದಿನ ಕಾರ್ಯಾಚಟುವಟಿಕೆಗಳ ಬಗ್ಗೆ ಸಭೆ ಗಮನಕ್ಕೆ ತಂದರು.
ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಅಭಿಪ್ರಾಯಗಳಂತೆ ಬುದ್ದ ವಿಹಾರದ ಅಭಿವೃದ್ಧಿಗಾಗಿ ಅವಶ್ಯಕ ಇರುವ ಸರಕಾರಿ ದಾಖಲೆಗಳು ಪಡೆಯುವದು ಮತ್ತು ಸರಕಾರಕ್ಕೆ ಪ್ರಸ್ಥಾವನೆಗಳನ್ನು ಸಲ್ಲಿಸುವದು ನೆನೆಗುದಿಗೆ ಬಿದ್ದಿರುವ ಡಾ.ಬಿ.ಆರ್ ಅಂಬೇಡ್ಕರ್ ಕಲ್ಯಾಣ ಮಂಟಪದ ಕಾಮಗಾರಿಯನ್ನು ಮುಂದುವರೆಸಲು ಅನುದಾನ ಮಂಜುರಾತಿಗಾಗಿ ಸಮಾಜ ಕಲ್ಯಾಣ ಆಯುಕ್ತರಿಗೆ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸುವದು, ಸದರಿ ತಾಣವನ್ನು ಉತ್ತಮ ಬೌದ್ಧ ಧಾರ್ಮಿಕ ಕೇಂದ್ರವನ್ನಾಗಿ ಮತ್ತು ಶೋಷಿತರಿಗೆ ಹಿಂದುಳಿದವರಿಗೆ ಶೈಕ್ಷಣಿಕ ಕೇಂದ್ರಗಳನ್ನು ಭವಿಷ್ಯದಲ್ಲಿ ರೂಪಿಸಲು ಯೋಜನೆಯನ್ನು ಸಿದ್ದಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಟ್ರಸ್ಟ್ ಉಪಾದ್ಯಕ್ಷರುಗಳಾದ ನಾಗಣ್ಣ ಕಲ್ಲದೆವನಹಳ್ಳಿ, ಭೀಮರಾಯ ಸಿಂದಗೇರಿ, ಕಾರ್ಯಾಕಾರಿ ಸಮಿತಿ ಸದ್ಯಸ್ಯರಾದ ಶರಣಪ್ಪ ಗುಳಬಾಳ , ಮಲ್ಕಯ್ಯ ತೇಲ್ಕರ್, ಮಾಳಪ್ಪ ಕಿರದಳ್ಳಿ, ವೆಂಕಟೇಶ ಸುರಪುರಕರ್, ಮಂಜುಳಾ ಸುರಪುರ, ಶಿವಲಿಂಗ ಹಸನಾಪೂರ, ರಮೇಶ ಅರಕೇರಿ, ಸಿದ್ರಾಮ್ ಹಾಲಭಾವಿ, ಹಣಮಂತ ಭದ್ರಾವತಿ, ಮಲ್ಲಪ್ಪ ತಳವಾರಗೇರಾ, ವೆಂಕಟೇಶ ದೇವಾಪೂರ, ದೇವು ಕಕ್ಕೇರಿ, ಹುಲಗಪ್ಪ ದೇವತ್ಕಲ್ ಬಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು ವೆಂಕಟೇಶ ಹೊಸಮನಿಯವರು ಅದ್ಯಕ್ಷತೆ ಮಾತುಗಳನ್ನಾಡಿ ಎಲ್ಲರಿಗೂ ವಂದಿಸಿದರು. ಇತರೇ ಉಪಾಸಕರಾದ ಶಂಕರ ಹೊಸಮನಿ, ರಾಜು ಬಡಿಗೇರ್,ಮಲ್ಲು ಮುಷ್ಠಳ್ಳಿ, ಮಹೇಶ ಹಸನಾಪೂರ, ಶಿವಣ್ಣ ಸಾಸಗೇರಾ,ಭಿಮಣ್ಣ ಬೇವಿನಾಳ,ಹಣಮಂತ ರತ್ತಾಳ, ಶರಣು ಹೊಸಮನಿ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…