ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾರ್ವತ್ರಿಕ ಮಾನವ ಮೌಲ್ಯಗಳ ಕುರಿತು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ದೃಷ್ಟಿ ಕೋನ ೨೦೨೧-೨೨ ((Induction Program ೨೦೨೧-೨೨) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾ|| ಶರಣಬಸವಪ್ಪ ಅಪ್ಪಾ, ಸಾನಿಧ್ಯ ಪೂಜ್ಯ ನೀಲಮ್ಮತಾಯಿ ವ್ಹಿ ನಿಷ್ಠಿ, ಶ್ರೀ ಶರಣಬಸವಪ್ಪ ವ್ಹಿ ನಿಷ್ಠಿ ಆನ್ಲೈನ್ ಮೂಲಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ ಭಾಗವಹಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡಪ್ಪ ಎಸ್ ನಿಷ್ಠಿ ಜಂಟಿ ಕಾರ್ಯದರ್ಶಿಗಳು ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಸುರಪುರ ಮತ್ತು ಗೌರವ ಅತಿಥಿಗಳಾದ ಶ್ರೀಹರಿರಾವ್ ಅದ್ವಾನಿ ಗಾಯಕರು ಮತ್ತು ಇತಿಹಾಸಕಾರರು ಸುರಪುರ. ತಾಂತ್ರಿಕ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಕುಮಾರಿ ಲಕ್ಷ್ಮೀ ನರ್ಕೆ ಸಾಫ್ಟವೇರ್ ಇಂಜಿನಿಯರ್, ಸಿಸ್ಕೋ ಬೆಂಗಳೂರ ಮತ್ತು ಸಂಜಯ ಪಾಟೀಲ್ ಮ್ಯಾನೆಜರ್ ಬ್ಯುಸಿನೆಸ್ ಅನಾಲಿಸ್ಟ್ ಇಮೈಡ್ಸ್ ಟೆಕ್ನಾಲಾಜಿ ಬೆಂಗಳೂರು.
ಕಾರ್ಯಕ್ರಮದ ಕುರಿತು ಮಹೇಶ ಪಾಟಿಲ್ ಮಾತನಾಡಿ, ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮುಂದಿನ ದೃಷ್ಟಿ ಕೋನವನ್ನು ಇಟ್ಟುಕೊಂಡು ದೇಶಕ್ಕೆ ಒಂದು ಮಾದರಿ ವ್ಯಕ್ತಿಯಾಗುವಂತೆ ಸಲಹೆ ನೀಡಿದರು. ಶ್ರೀ ಶ್ರೀಹರಿ ಅದ್ವಾನಿಯವರು ಮಾತನಾಡಿ, ನಿಷ್ಠಿ ಪರಿವಾರದವರು ಹಿಂದುಳಿದ ಕಲ್ಯಾಣ ಕರ್ನಾಟಕದ ಬಾಗದ ಯಾದಗಿರ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಾಹಾವಿದ್ಯಾಲಯವನ್ನು ಸ್ಥಾಪಿಸಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದರು. ಹಾಗೂ ಸಾರ್ವತ್ರಿಕ ಮಾನವ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಆನ್‌ಲೈನ್ ಮೂಲಕ ತಾಂತ್ರಿಕ ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಕುಮಾರಿ ಲಕ್ಷ್ಮೀ ನರ್ಕೆ ಮತ್ತು ಶ್ರೀ ಸಂಜಯ ಪಾಟೀಲ್ ರವರು ದೃಷ್ಟಿ ಕೋನ ೨೦೨೧-೨೨ (Iಟಿಜuಛಿಣioಟಿ Pಡಿogಡಿಚಿm ೨೦೨೧-೨೨) ತಾಂತ್ರಿಕ ವಿಷಯ ಕುರಿತು ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಿದರು. ಕಾಲೇಜಿನ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ ರವರು ಇಂಜಿನಿಯರಿಂಗ್ ಅವಿಷ್ಕಾರಗಳ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶರಣಬಸಪ್ಪ ಸಾಲಿ ರವರು ನಮ್ಮ ಕಾಲೇಜಿನ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಪ್ರೋ. ನಾನಾಗೌಡ ದೇಸಾಯಿ ಪ್ರಾಂಶುಪಾಲರು ಬಸವರಾಜಪ್ಪ ಅಪ್ಪ ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಡಾ. ಅನೀಲಕುಮಾರ ಮಾಲಿಪಾಟಿಲ ಪ್ರಾಂಶುಪಾಲರು, ಶರಣಬಸವ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಕಾಲೇಜಿನ ಪ್ರೋಫೆಸರ್ ಡಾ. ಅಶೋಕ ಪಾಟೀಲ್, ಪ್ರೋ. ಶರಣಗೌಡ ಪಾಟೀಲ, ಪ್ರೋ. ಸಾಹೇಬಗೌಡ ಪಾಟೀಲ, ಪ್ರೋ. ಸಿದ್ದನಗೌಡ ಪಾಟೀಲ ಹಾಗೂ ಇತರೆ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಪ್ರೋ. ಗಂಗಾಧರ ಹೂಗಾರ ರವರು ನಿರೂಪಿಸಿದರು ಹಾಗೂ ಪ್ರೋ. ಪೂಜಾ. ಎಚ್ ರವರು ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…