ಕಲಬುರಗಿ:19ರಂದು ಪ್ರಕಟಗೊಂಡ ಪೆÇಲೀಸ ಸಬ್ ಇನ್ಸ್‍ಪೆಕ್ಟರ್ (ಪಿಎಸ್‍ಐ) ಹುದ್ದೆಗಳ ನೇಮಕಾತಿಯಲ್ಲಿ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಇಬ್ಬರು ಕುವರಿಯರು ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿ ಗ್ರಾಮಕ್ಕೆ ‘ಡಬಲ್ ಪಿಎಸ್‍ಐ ಗರಿ’ ನೀಡಿ ಸಾಧನೆ ಮೆರೆದಿದ್ದಾರೆ.
ರೇವತಿ ಎಸ್. ಪಾಟೀಲ್ ಹಾಗೂ ಸಂಧ್ಯಾರಾಣ ಎಚ್. ಕುರನಳ್ಳಿ ಅವರೇ ನೂತನವಾಗಿ ಪಿಎಸ್‍ಐಯಾಗಿ ಸಾಧನೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ವೃಂದದ 25 ಹುದ್ದೆಗಳ ನೇಮಕಾತಿಯಲ್ಲಿ ರೇವತಿ (14ನೇ ರ್ಯಾಂಕ್), ಸಂಧ್ಯಾರಾಣ (25ನೇ ರ್ಯಾಂಕ್) ಗಿಟ್ಟಿಸಿ, ಸ್ಪರ್ಧಾಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಸದ್ಯ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಪೆÇಲೀಸ ಠಾಣೆಯಲ್ಲಿ ಕಳೆದ ವರ್ಷದಿಂದ ಪೆÇಲೀಸ ಕಾನ್ಸ್‍ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರೇವತಿ ಶಾಂತಗೌಡ ಪಾಟೀಲ್, ಕೆಲಸದ ವೇಳೆಯಲ್ಲೂ ನಿರಂತರ ಅಭ್ಯಾಸ ಮಾಡುತ್ತ ಛಲ ಬಿಡದೇ ಕೊನೆಗೆ ಪಿಎಸ್‍ಐ ಹುದ್ದೆಯ ಅಲಂಕರಿಸಿಯೇ ಬಿಟ್ಟಿದ್ದಾಳೆ.
ಇನ್ನೋರ್ವ ಕು. ಸಂಧ್ಯಾರಾಣ ಹುಸೇನಪ್ಪ ಕುರನಳ್ಳಿ ಎಂಬವರು ಇತ್ತೀಚೆಗೆ ನೀರಾವರಿ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ (ಎಇ) ಆಗಿ ಆಯ್ಕೆಯಾಗಿದ್ದಳು. ಇದೀಗ ಪಿಎಸ್‍ಐ ಹುದ್ದೆಯೂ ಸಹ ಬೆನ್ನಟ್ಟಿ ಬಂದಿದೆ. ಸಂಧ್ಯಾರಾಣ ಗೂ ಡಬಲ್ ಹುದ್ದೆಗಳು ಹುಡುಕಿಕೊಂಡು ಬಂದಿರುವುದು ಕಷ್ಟಪಟ್ಟರೇ ಎಲ್ಲವೂ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ.
ಯಳಸಂಗಿ ಗ್ರಾಮದ ಕುವರಿದ್ವಯರ ಸಾಧನೆಗೆ ಊರಿನ ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…