ಬಿಸಿ ಬಿಸಿ ಸುದ್ದಿ

ಚಾಟಿ ಏಟಿನ ಶರಣರೆಂದೆ ಖ್ಯಾತಿ ಪಡೆದವರು ಅಂಬಿಗರ ಚೌಡಯ್ಯನವರು- ಮಲ್ಲಣ್ಣಪ್ಪ ಸ್ವಾಮಿ

ಶಹಾಬಾದ: ಹನ್ನೇರಡನೇ ಶತಮಾನದ ಶರಣರಲ್ಲಿ ಚಾಟಿ ಏಟಿನ ಶರಣನೆಂದೆ ಖ್ಯಾತಿ ಪಡೆದ ಶರಣನೆಂದರೆ ಅಂಬಿಗರ ಚೌಡಯ್ಯನವರು ಎಂದು ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಪೀಠದ ಮಲ್ಲಣ್ಣಪ್ಪ ಸ್ವಾಮಿಗಳು ಹೇಳಿದರು.

ಅವರು ಶುಕ್ರವಾರ ನಗರದ ನೆಹರು ವೃತ್ತದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮಿಗಳ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದ್ದದನ್ನು ಇದ್ದ ಹಾಗೇ ಹೇಳುವ ಎದೆಗಾರಿಕೆ ಅವರಲ್ಲಿತ್ತು. ಮೂಢನಂಬಿಕೆ ,ಕಂದಾಚಾರದ ವಿರುದ್ಧ ತಮ್ಮ ವಚನದಲ್ಲಿ ಕಟುವಾಗಿ ಖಂಡಿಸಿದ ಶರಣರು.ತನಗೆ ತೋಚಿದ್ದನ್ನು ತಾನು ಕಂಡದ್ದನ್ನು ಅಂದಿನ ಸಮಾಜದ ಅಂಕು ಡೊಂಕುಗಳನ್ನು ತನ್ನ ನೇರ ನಡೆನುಡಿಗಳಿಗೆ ವಚನ ರೂಪ ನೀಡಿದ ಅದರಂತೆ ಬದುಕಿ ಇತರರಿಗೆ ಮಾರ್ಗದರ್ಶನ ತೋರಿದ ನಿಜಶರಣ ಅಂಬಿಗರ ಚೌಡಯ್ಯ ಒಬ್ಬ ಆದರ್ಶ ಮಾನವ ಎಂದು ಹೇಳಿದರು.

ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ,ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಅಂಬಿಗೆ ಚೌಡಯ್ಯನವರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಪಿಐ ಸಂತೋಷ ಹಳ್ಳೂರ್,ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ನಿಂಗಣ್ಣ ಹುಳಗೋಳಕರ್, ಶಿವಕುಮಾರ ತಳವಾರ,ತಿಪ್ಪಣ್ಣ ನಾಟೇಕಾರ, ಲೋಹಿತ್ ಮಳಖೇಡ, ಪರಮಾನಂದ ಯಲಗೋಡಕರ್, ಮೌನೇಶ ಕೋಡಿ,ವಿಶ್ವನಾಥ ಖಾನಾಪೂರ,ನಾಗರಾಜ ಯಡ್ರಾಮಿ,ಶರಣು ಸರಡಗಿ, ಹಣಮಂತ ಹುಳಗಲ್,ಪ್ರಶಾಂತ ಹದನೂರ,ಅಜಯ ಸರಡಗಿ,ಮಹೇಶ ಏಲೇರಿ, ಮಲ್ಲಿಕಾರ್ಜುನ ನಾಟೇಕಾರ, ಸಮಾಜದ ಮುಖಂಡರಾದ ದೇವೆಂದ್ರಪ್ಪ ಯಲಗೋಡಕರ್, ಕಾಶಣ್ಣ ಚನ್ನೂರ್, ಅಣ್ಣಪ್ಪ ದಸ್ತಾಪೂರ, ಕನಕಪ್ಪ ದಂಡಗುಲಕರ್, ಶರಣು ಪಗಲಾಪೂರ, ಪಾರ್ವತಿ ಪವಾರ, ಸದಾನಂದ ಕುಂಬಾರ, ಸಾಬೇರಾಬೇಗಂ, ಮಹೇಂದ್ರ ಕೋರಿ ಸೇರಿದಂತೆ ಅನೇಕ ಜನರು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago