ಬಿಸಿ ಬಿಸಿ ಸುದ್ದಿ

ನೇರ ದಿಟ್ಟ ಶರಣರೆಂದರೆ ಅಂಬಿಗರ ಚೌಡಯ್ಯನವರು: ಇಂಗಿನಶೆಟ್ಟಿ

ಶಹಾಬಾದ: ಹನ್ನೇರಡನೇ ಶತಮಾನದಲ್ಲಿ ನೇರ ದಿಟ್ಟ ಶರಣರೆಂದರೆ ಅಂಬಿಗರ ಚೌಡಯ್ಯನವರು ಎಂದು ಎಂದು ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಹೇಳಿದರು.

ಅವರು ಶುಕ್ರವಾರ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿ ಹಾಗೂ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳ ದಾಸೋಹ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದುದನ್ನು ಇದ್ದ ಹಾಗೇ ಹೇಳುವ ಜಾಯಮಾನ ಅವರದ್ದಾಗಿತ್ತು. ಚಾಟಿ ಏಟಿನ ಹಾಗೇ ಹೇಳು ವ್ಯಕ್ತಿತ್ವ ಅವರದಾಗಿತ್ತು.ಮಾನವನು ಲೌಕಿಕ ಜೀವನಕ್ಕಾಗಿ ನಡೆಸುವ ವೃತ್ತಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಚೌಡಯ್ಯನವರು ಬರೀ ನದಿ ದಾಟಿಸುವ ವೃತ್ತಿ ಅಷ್ಟೇ ನಡೆಸದೇ ತಮ್ಮ ವಚನಗಳಿಂದ ಜನರನ್ನು ಜಾಗೃತಿಗೊಳಿಸುವ ಮೂಲಕ ನಂಬಿದವರನ್ನು ಭವಸಾಗರ ದಾಟಿಸುವ ಶಕ್ತಿಯಾಗಿ ಸಾಧನೆ ಮಾಡಿದವರು. ಶರಣರ ವಚನ ಸಾಹಿತ್ಯಗಳ ಪುಸ್ತಕಗಳನ್ನು ಮಕ್ಕಳಿಗೆ ಓದಲು ಕೊಡಬೇಕು ಎಂದರು.

ಪ್ರಾಧಿಕಾರದ ಅಧ್ಯಕ್ಷರಾದ ಕನಕಪ್ಪ ದಂಡಗುಲಕರ ಮಾತನಾಡಿ, ಎಲ್ಲರ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರು ಕೇವಲ ತುಂಬಿದ ಹೊಳೆಯಲ್ಲಿ ಮಾತ್ರ ಅಂಬಿಗನಲ್ಲ, ಯೋಜನಾ ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲ್ಯವುಳ್ಳ ವ್ಯಕ್ತಿಯಾಗಿದ್ದರು. ಅವರ ವಚನಗಳು ಸಮಾಜದಲ್ಲಿ ಅಸಮಾನತೆ ತೊಲಗಿಸಿ, ಸಮಾಜಕ್ಕೆ ಎಲ್ಲ ಕಾಲಕ್ಕೂ ದಾರಿದೀಪವಾಗಿವೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಮಹಾದೇವ ಗೋಬ್ಬುರಕರ, ಅಣ್ಣೆಪ್ಪ ದಸ್ತಾಪೂರ,ಚಂದ್ರಕಾಂತ ಗೋಬ್ಬುರಕರ,ಅರುಣ ಪಟ್ಟಣ್ಣಕರ,ಸುಭಾ? ಜಾಪೂರ,ನಾಗರಾಜ ಮೇಲಗಿರಿ,ಬಸವರಾಜ ಬಿರಾದಾರ,ಲತ್ತಾ ಸಂಜಿವಕುಮಾರ,ಸಂದಿಪ ಹದನೂರ,ಯಲ್ಲಪ್ಪ ದಂಡಗುಲಕರ,ನಿಂಗಣ್ಣ ಹುಳಗೋಳಕರ,ದೇವೆಂದ್ರ ಯಲಗೋಡ,ನಗರಸಭೆ ಸದಸ್ಯರಾದ ರವಿ ರಾಠೋಡ,ಜಗದೇವ ಸುಭೆದಾರ,ಅನಿಲ ನಿಕ್ಕಮ,ಸುನಿಲ ನಿಕ್ಕಮ,ವಿರೇಶ ಬಂದಳ್ಳಿ,ದಿನೇಶ ಗೌಳಿ,ಜಯಶ್ರೀ ಸೂಡಿ,ಸುನಿತಾ ಡಿ,ಸಂಜಯ ಕೋರೆ,ಪರಮನಂದ ಯಲಗೋಡ,ಹಣಮಂತ ಖೇತ್ರೆ,ತಿಪ್ಪಣ್ಣ ಕಣಸೂರ,ಶ್ರೀನಿವಾಸ ನೇದಲಗಿ,ಪ್ರಭು ಪಾಟೀಲ, ಉಮೇಶ ನಿಂಬಾಳಕರ,ಸತೀಶ ರ‍್ಯಾಪನೂರ್, ಸುಭಾ? ಕುಸಾಳೆ, ಭೀಮಯ್ಯ ಗುತ್ತೆದಾರ,ಅವಿನಾಶ ಸಾಳೂಂಕೆ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago