ಶಹಾಬಾದ:ಗ್ರಾಮೀಣ ಮಟ್ಟದ ಅಪ್ಪಟ ಪ್ರತಿಭೆಯೊಂದು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ರಾಜ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ೨೦೨೧ ಅಕ್ಟೋಬರನಲ್ಲಿ ನಡೆದ ಪರೀಕ್ಷೆ ಬರೆದು ಆಯ್ಕೆಯಾಗಿದ್ದಾಳೆ.
ನಗರದ ಹಳೆಶಹಾಬಾದನ ನಿವಾಸಿ ನಾಗೇಂದ್ರ ನಾಟೇಕಾರ ಹಾಗೂ ಶೋಭಾ ನಾಟೇಕಾರ ದಂಪತಿಯ ಪುತ್ರಿ ಸುಧಾರಾಣಿ ನಾಟೇಕಾರ ಇದೀಗ ಪಿಎಸ್‌ಐ ಆಗಿ ಆಯ್ಕೆಯಾಗಿದ್ದು, ತಂದೆ-ತಾಯಿ ಸಹೋದರರಲ್ಲಿ ಅಭಿಮಾನವನ್ನುಂಟು ಮಾಡಿದೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಭಂಕೂರ ಗ್ರಾಮದ ಬಸವ ಸಮಿತಿ ಶಾಲೆಯಲ್ಲಿ ಪೂರೈಸಿರುವ ಸುಧಾರಾಣಿ ಅವರು ಶಾಲೆಯಲ್ಲಿ ಯಾವಾಗಲೂ ಪ್ರಥಮ ಸ್ಥಾನ ಗಿಟ್ಟಿಸುತ್ತಾ ಬಂದಿರುವಳು. ನಂತರ ಪದವಿ ಪೂರ್ವ ಶಿಕ್ಷಣವನ್ನು ಕಲಬುರಗಿಯ ಎಸ್‌ಬಿಆರ್ ಕಾಲೇಜು, ಇಂಜಿನಿಯರಿಂಗ ಪದವಿಯನ್ನು ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಪೂರೈಸಿದ್ದಾಳೆ.
ಗ್ರಾಮೀಣ ಭಾಗದ ಭಂಕೂರ ಬಸವ ಸಮಿತಿ ಶಾಲೆಯಲ್ಲಿ ಓದಿ ಮಗಳು ಪಿಎಸ್‌ಐ ಆಗಿ ಆಯ್ಕೆಯಾಗಿರುವುದಕ್ಕೆ ತಂದೆಯಾದ ನನಗೆ ತೃಪ್ತಿ ತಂದಿದೆ.ಈ ಯಶಸ್ಸಿಗೆ ಬಸವ ಸಮಿತಿಯ ಶಾಲೆಯ ಪದಾಧಿಕಾರಿಗಳು ಹಾಗೂ ಕಲಿಸಿದ ಶಿಕ್ಷಕರೇ ಕಾರಣ. – ನಾಗೇಂದ್ರ ನಾಟೇಕಾರ
ಪಿಎಸ್‌ಐ ಆಗಿ ಆಯ್ಕೆಯಾಗಿರುವ ಸುದ್ದಿ ತಿಳಿದು ಆಶ್ಚರ್ಯ ಜೊತೆಗೆ ಸಂತೋ?ವು ಆಯಿತೆಂದು ಸಾಧನೆ ಮಾಡಿದ ಸುಧಾರಾಣಿ ಹೇಳುವಾಗ ಮುಖದಲ್ಲಿ ಆತ್ಮವಿಶ್ವಾಸ ಕಾಣುತ್ತಿತ್ತು. ಸೌಮ್ಯಸ್ವಭಾವದ ಇವಳು ಪುಸ್ತಕವೇ ದೇವರು, ತನ್ನ ಕೋಣೆಯೇ ದೇವಾಲಯವೆಂದು ತಿಳಿದು, ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದರ ಪ್ರತಿಫಲವೇ ಇದು ಎಂದು ಹೇಳುತ್ತಾಳೆ.
ಬಸವಣ್ಣನವರು ಹೇಳಿದಂತೆ ” ಕಾಯಕವೇ ಕೈಲಾಸ ” ವೆಂದು ತಿಳಿದು ಸತತ ಪರಿಶ್ರಮ, ನಿಯಮಿತ ಅಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಬಹುದೆನ್ನುವುದೇ ಸುಧಾರಾಣಿಯ ಹೇಳಿಕೆ. ತನ್ನ ಯಶಸ್ವಿಗೆ ತಂದೆ ತಾಯಿಯರ ಪ್ರೋತ್ಸಾಹ, ಎಲ್ಲಾ ಶಿಕ್ಷಕರ ಸಹಕಾರ,ಮಾರ್ಗದರ್ಶನ ಯಶಸ್ವಿಗೆ ಕಾರಣ ಎಂದು ಹೇಳುತ್ತಾಳೆ ಸುಧಾರಾಣಿ.ಇವಳ ಸಾಧನೆಗೆ ಬಸವ ಸಮಿತಿಯ ಸರ್ವ ಪದಾಧಿಕಾರಿಗಳು ಶಿಕ್ಷಕರು ಹಾಗೂ ಹಳೆಶಹಾಬಾದನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…