ಬಿಸಿ ಬಿಸಿ ಸುದ್ದಿ

ಬಿಜೆಪಿಗೆ ‘ಕೈ’ ಬಿಗ್‌ ಶಾಕ್

ಗದಗ: ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಬಾರಿ ಕುತೂಹಲ ಘಟ್ಟ ತಲುಪಿದೆ. ಹಲವು ದಶಕಗಳ ಬಳಿಕ ಮ್ಯಾಜಿಕ್​ ನಂಬರ್ ತಲುಪಿದ್ದ ಬಿಜೆಪಿಗೆ ಕಾಂಗ್ರೆಸ್ ನಾಯಕರು ಭಾರಿ ಪೆಟ್ಟುಕೊಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಾರಿ ಗದಗ ಬೆಟಗೇರಿ ನಗರಸಭೆ ಗದ್ದುಗೆ ಬಿಜೆಪಿಗೆ ಅನ್ನೋವಷ್ಟರಲ್ಲೇ ಪ್ಲಾನ್ ಎಲ್ಲಾ ಉಲ್ಟಾಪಲ್ಟಾ ಆಗಿಬಿಟ್ಟಿದೆ. ಕಮಲ ಕಲಿಗಳ ಲೆಕ್ಕಾಚಾರವೆಲ್ಲಾ ತೆಲೆಕೆಳಗಾಗುವಂತೆ ಕೈ ಕಲಿಗಳು ಶತ ಪ್ರಯತ್ನ ಮಾಡ್ತಿದ್ದಾರೆ. ಹೊರಗಿನಿಂದ ಮೂರು ಜನ ವಿಧಾನ ಪರಿಷತ್ ಸದಸ್ಯರು ಮತ್ತು ಓರ್ವ ರಾಜ್ಯಸಭೆ ಸದಸ್ಯರನ್ನು ನಗರಸಭೆಯ ಚುನಾವಣೆಯ ಮತದಾರ ಪಟ್ಟಿಯಲ್ಲಿ ಸೇರಿಸಿ ಆ ಮೂಲಕ ಗದ್ದುಗೆ ಮತ್ತೆ ಕೈ ಪಾಲಾಗುವಂತಹ ಕಸರತ್ತು ನಡೆಸಿದ್ದಾರೆ ಎನ್ನಲಾಗ್ತಿದೆ.

ಸೋಮವಾರ ನಡೆಯುವ ಚುನಾವಣೆಯಲ್ಲಿ ಗದ್ದುಗೆ ಯಾರ ಪಾಲು..! —

ಹೌದು, ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಗದ್ದುಗೆ ಏರುವ ಕನಸಿನಲ್ಲಿದೆ. ಆದರೆ, ಕಾಂಗ್ರೆಸ್ ಮಾತ್ರ ಬಿಜೆಪಿ ಕನಸಿಗೆ ಮಣ್ಣೆರೆಚುವ ಶತ ಪ್ರಯತ್ನ ನಡೆಸಿದೆ. ಏನಾದರೂ ಮಾಡಿ ಈ ಬಾರಿಯೂ ಗದಗ ಬೆಟಗೇರಿ ನಗರಸಭೆಯ ಅಧಿಕಾರದ ಗದ್ದುಗೆ ಏರೋಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಅದೇನಪ್ಪ ಅಂದ್ರೆ ಮೂವರು ಎಂಎಲ್‌ಸಿ, ಓರ್ವ ರಾಜ್ಯಸಭಾ ಸದಸ್ಯರನ್ನೊಳಗೊಂಡಂತೆ ನಾಲ್ಕು ಜನ ಜನಪ್ರತಿನಿಧಿಗಳನ್ನು ಗದಗ-ಬೆಟಗೇರಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಈ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಪ್ಲಾನ್ ಮಾಡಿದೆ. ವಿಧಾನ ಪರಿಷತ್​ ಸದಸ್ಯರಾದ ಸಲೀಂ ಅಹ್ಮದ್, ಮೋಹನ್‌ಕುಮಾರ್​ ಕೊಂಡಜ್ಜಿ, ಪ್ರಕಾಶ ರಾಥೋಡ್​ ಹಾಗು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಜನವರಿ 14 ರಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಭಾರಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ಕೂಡ ತನ್ನ ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಅರ್ಜಿ ಸಲ್ಲಿಸಿದೆ. ಬಿಜೆಪಿಯ ಎಂಎಲ್​ಸಿ ಎಸ್. ವಿ ಸಂಕನೂರ ಅವರು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಇದು ನಗರದಲ್ಲಿ ಭಾರಿ ಕುತುಹೂಲ ಮೂಡಿಸಿದೆ.

ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಸಂಖ್ಯಾ ಬಲ ಈಗ ಸಮನಾಗಿದೆ. ಅಂದರೆ, ಬಿಜೆಪಿ 18 ಸದಸ್ಯರು ಓರ್ವ ಸಂಸದರು ಸೇರಿ 19 ಸದಸ್ಯರ ಸಂಖ್ಯಾ ಬಲವಿದೆ. ಕಾಂಗ್ರೆಸ್ 15 ಸದಸ್ಯರು ಹಾಗು ಇಬ್ಬರು ಪಕ್ಷೇತರು ಹಾಗು ಓರ್ವ ಶಾಸಕರು ಸೇರಿ 18 ಬಲ ಇದೆ. ಹಾಗಾಗಿ, ಕಾಂಗ್ರೆಸ್ ಓರ್ವ ರಾಜ್ಯಸಭಾ ಸದಸ್ಯ ಹಾಗು ಮೂವರು ವಿಧಾನ ಪರಿಷತ್ ಸದಸ್ಯರನ್ನು ಗದಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ನಗರಸಭೆ ಗದ್ದುಗೆ ಏರಲು ಪ್ಲಾನ್ ಮಾಡಿದೆ.

ಜೊತೆಗೆ ಕಾಂಗ್ರೆಸ್​​ನ ಒಳತಂತ್ರಕ್ಕೆ ಬೆದರಿ ಗೆಲುವು ಪಡೆದ ಬಿಜೆಪಿಯ ಎಲ್ಲಾ 18 ಜನ ಸದಸ್ಯರನ್ನು ಬಿಜೆಪಿ ಅಜ್ನಾತ ಸ್ಥಳದಲ್ಲಿ ಇಟ್ಟು ಕೈಗೆ ಪ್ರತಿತಂತ್ರ ಹೂಡುತ್ತಿದ್ದಾರೆ. ಆದರೆ, ಇದರಲ್ಲಿ ಕಾಂಗ್ರೆಸ್ ಪ್ಲಾನ್ ಯಶಸ್ವಿಯಾಗೋದು ಬಹುತೇಕ ಕಷ್ಟ ಎನ್ನಲಾಗಿದೆ. ಯಾಕಂದರೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕುರಿತಂತೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಹಾಗಾಗಿ, ನಿಗದಿಯಂತೆ ಜನವರಿ 24 ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಈಗಾಗಲೇ ಅರ್ಜಿದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಸಂಬಂಧ ಅಧಿಕಾರಿಗಳ ಮೇಲೆ ಎರಡೂ ಕಡೆಯಿಂದ ಭಾರಿ ಒತ್ತಡ ಹೇರಲಾಗ್ತಿದೆ. ಹಾಗಾಗಿ, ಎರಡೂ ಪಕ್ಷದ ಕಡೆಯಿಂದ ಕಾನೂನಿಗೆ ಅವಕಾಶವಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಬಿಜೆಪಿ ನಾಯಕರು ಕೈ ನಡೆಯ ಬಗ್ಗೆ ಕಿಡಿಕಾರುತ್ತಿದ್ದಾರೆ.

ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ಕಾಂಗ್ರೆಸ್​ನ ವಿಧಾನ ಪರಿಷತ್​ ಸದಸ್ಯರ ಕುರಿತು ಬಿಜೆಪಿಗರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣ, ವಾಟ್ಸಪ್​​ನಲ್ಲಿ ಗದಗ-ಬೆಟಗೇರಿ ಅವಳಿ ನಗರ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಏನು?. ಗದಗನಲ್ಲಿ ಮತ್ತೊಂದು ಮನೆ ಮಾಡಿದ್ದೀರಾ? ಅಂತ ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕೂಡ ಸೋಮವಾರ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಅಖಾಡಕ್ಕೆ ಧುಮಕಲಿದೆ. ಇದು ಬಿಜೆಪಿ ಪಾಳೆಯದ ನಿದ್ದೆಗೆಡಿಸಿದೆ. ಜೊತೆಗೆ ಆಪರೇಷನ್ ಕಾಂಗ್ರೆಸ್​ ಭೀತಿಯೂ ಸಹ ಮನೆ ಮಾಡಿದೆ. ಒಟ್ಟಿನಲ್ಲಿ ಗದ್ದುಗೆ ಕಸರತ್ತು ಭಾರಿ ಕುತೂಹಲ ಮೂಡಿಸಿದೆ‌.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago