ಬಿಸಿ ಬಿಸಿ ಸುದ್ದಿ

ದಾವಣಗೆರೆ: ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ?

ದಾವಣಗೆರೆ. ಬೆಣ್ಣೆ ನಗರಿ ಅಂತಾ ಕರೆಯೋ ಈ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಅದ್ರೆ ಬೆಣ್ಣೆ ನಗರಿ ಪಟ್ಟದ ಜೊತೆಗೆ ಡೇಂಜರ್ ಸಿಟಿ ಅನ್ನೋ ಹೆಸರು ಕೂಡ ಬಂದಿದೆ. ಯಾಕಂದ್ರೆ ಈ ಸಿಟಿಯಲ್ಲಿರೋ ಬೀದಿ ನಾಯಿಗಳ ಹಾವಳಿಯಿಂದ. ದಾವಣಗೆರೆ: ಎಲ್ಲ ಊರಿನಲ್ಲೂ ಬೀದಿ ನಾಯಿಗಳು ಇದ್ದೇ ಇರುತ್ತವೆ.

ಆದ್ರೆ ಈ ನಗರ ಬೀದಿ ನಾಯಿಗಳ ಸಮಸ್ಯೆಯಲ್ಲಿಯೇ ಮುಳುಗಿ ಹೋಗಿದೆ. ಅದೇ ಸಮಸ್ಯೆಯನ್ನು ಬಂಡವಾಳವನ್ನಾಗಿ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಖತ್ ಲಾಭ ಮಾಡಿಕೊಳ್ತಿದ್ದಾರಂತೆ.

ದಾವಣಗೆರೆ. ಬೆಣ್ಣೆ ನಗರಿ ಅಂತಾ ಕರೆಯೋ ಈ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಅದ್ರೆ ಬೆಣ್ಣೆ ನಗರಿ ಪಟ್ಟದ ಜೊತೆಗೆ ಡೇಂಜರ್ ಸಿಟಿ ಅನ್ನೋ ಹೆಸರು ಕೂಡ ಬಂದಿದೆ. ಯಾಕಂದ್ರೆ ಈ ಸಿಟಿಯಲ್ಲಿರೋ ಬೀದಿ ನಾಯಿಗಳ ಹಾವಳಿಯಿಂದ. ಇತ್ತೀಚಗೆ ದಾವಣಗೆರೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದೆ. ಅದರಲ್ಲೂ ದಾವಣಗೆರೆ ನಗರದ ಹಳೆ ಬಡಾವಣೆಗಳಲ್ಲಿ ನಾಯಿಗಳ ಅಟ್ಟಹಾಸ ಮೀತಿಮೀರಿದ್ದು, ಮಕ್ಕಳ ಮೇಲೆ ಅತ್ಯಂತ ಅಪಾಯಕಾರಿಯಾಗಿ ದಾಳಿ ಮಾಡುತ್ತಿವೆ. ಹಾಗಾಗಿ ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಪಾಲಿಕೆ ಮೇಲೆ ಒತ್ತಡವೇರಿದ್ರು. ಕೂಡಲೇ ಅಲರ್ಟ್ ಆದ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ನಡೆಸಲು ಟೆಂಡರ್ ಕರೆದಿದ್ರು. ಆದ್ರೆ ಈ ಟೆಂಡರ್‌ನಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಅಂದಹಾಗೆ ದಾವಣಗೆರೆ ನಗರದಲ್ಲಿ 20 ಸಾವಿರ ಬೀದಿ ನಾಯಿಗಳಿವೆಯೆಂದು ಅಂದಾಜಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಅವುಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು 25 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಆದ್ರೂ, ಬೀದಿ ನಾಯಿಗಳ ಕಾಟ ಕಡಿಮೆಯಾಗಿಲ್ಲ. ಪ್ರತಿಯೊಂದು ನಾಯಿಯ ಸಂತಾನಹರಣ ಚಿಕಿತ್ಸೆಗಾಗಿ 800ರೂಪಾಯಿ ಖರ್ಚು ತೋರಿಸಿರುವುದು ಇದೀಗ ವಿಪಕ್ಷಗಳ ಕಣ್ಣು ಕೆಂಪಗಾಗಿಸಿದೆ. ನಾಯಿಗಳ ನಿಯಂತ್ರಣಕ್ಕೆ ಕರೆಯಲಾದ ಟೆಂಡರ್‌ನಲ್ಲೂ ಅವ್ಯವಹಾರ ಕೇಳಿ ಬಂದಿರೋದ್ರಿಂದ, ಪಾಲಿಕೆ ಮೇಯರ್ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ.

ದಾವಣಗೆರೆ ಸ್ಮಾರ್ಟ್‌ ನಗರವಾಗುವತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಅಗತ್ಯ ಕಾಮಗಾರಿಗಳೂ ಭರದಿಂದ ಸಾಗುತ್ತಿವೆ. ಆದ್ರೆ ಬೀದಿನಾಯಿಗಳ ನಿಯಂತ್ರಣ ಮಾಡಲಾಗದಿರುವುದು ಪಾಲಿಕೆ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

15 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago